- Home
- Entertainment
- Ram Gopal Varma: ಅಮಿತಾಭ್ ಬಚ್ಚನ್ ಸಿನಿಮಾ ರೀಮೇಕ್ ಮಾಡಿ ಬಿಗ್ ಸ್ಟಾರ್ಸ್ ಆಗಿದ್ದಾರೆ ಸೌತ್ ನಟರು!
Ram Gopal Varma: ಅಮಿತಾಭ್ ಬಚ್ಚನ್ ಸಿನಿಮಾ ರೀಮೇಕ್ ಮಾಡಿ ಬಿಗ್ ಸ್ಟಾರ್ಸ್ ಆಗಿದ್ದಾರೆ ಸೌತ್ ನಟರು!
ಚಿರು, ರಜನಿ ತರಹದ ಹೀರೋಗಳು ಸ್ಟಾರ್ ಆಗಿದ್ದು ಅಮಿತಾಭ್ ಬಚ್ಚನ್‌ರಿಂದ ಅಂತ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ. ಅದಕ್ಕೆ ಕಾರಣಗಳನ್ನು ಈ ರೀತಿ ವಿವರಿಸಿದ್ದಾರೆ.

ಬಾಲಿವುಡ್‌ಗೆ ಪೈಪೋಟಿ ನೀಡುತ್ತಿರುವ ಸೌತ್ ಸಿನಿಮಾ
ಅಮಿತಾಬ್ ರಿಮೇಕ್ ಚಿತ್ರಗಳ ಪ್ರಭಾವ
ಸೌತ್ ಸಿನಿಮಾ ಬೆಳವಣಿಗೆಯ ಹಿಂದೆ ಬಾಲಿವುಡ್ ಚಿತ್ರಗಳ ಪ್ರಭಾವವೇ ಕಾರಣ, ಅದರಲ್ಲೂ ಅಮಿತಾಭ್ ಬಚ್ಚನ್ ಚಿತ್ರಗಳು ಕಾರಣ ಎಂದು ವರ್ಮ ಹೇಳಿದ್ದಾರೆ. ಸೌತ್ ಸಿನಿಮಾ ಬೆಳವಣಿಗೆಯಲ್ಲಿ ಅಮಿತಾಭ್ ಬಚ್ಚನ್ ನಟಿಸಿದ ಚಿತ್ರಗಳ ರಿಮೇಕ್‌ಗಳು ಪ್ರಮುಖ ಪಾತ್ರ ವಹಿಸಿವೆ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.
ಅವರೆಲ್ಲ ಸ್ಟಾರ್ ಆಗಿದ್ದು ಅಮಿತಾಬ್‌ರಿಂದ
ಇತ್ತೀಚಿನ ಸಂದರ್ಶನವೊಂದರಲ್ಲಿ ವರ್ಮ ಮಾತನಾಡಿ, 1970, 1980ರ ದಶಕದಲ್ಲಿ ದಕ್ಷಿಣ ಭಾರತದ ತಮಿಳು, ತೆಲುಗು, ಕನ್ನಡ, ಮಲಯಾಳಂ ನಾಲ್ಕು ಪ್ರಮುಖ ಚಿತ್ರರಂಗಗಳು ಅಮಿತಾಭ್ ಬಚ್ಚನ್ ಅವರ ಹಿಟ್ ಸಿನಿಮಾಗಳನ್ನು ಸತತವಾಗಿ ರಿಮೇಕ್ ಮಾಡುತ್ತಿದ್ದವು ಎಂದು ಹೇಳಿದರು. ಈ ಸಂದರ್ಭದಲ್ಲಿ ರಜನಿಕಾಂತ್, ಚಿರಂಜೀವಿ, ಎನ್‌ಟಿಆರ್, ಮುಂತಾದವರು ತಮ್ಮ ವೃತ್ತಿಜೀವನವನ್ನು ನಿರ್ಮಿಸಿಕೊಂಡರು ಎಂದು ಹೇಳಿದರು.
ಅಮಿತಾಬ್ ಬ್ರೇಕ್ ಚಿರು, ರಜನಿಗೆ ವರದಾನವಾಯ್ತಾ?
1990ರ ದಶಕದಲ್ಲಿ ಅಮಿತಾಬ್ ಐದು ವರ್ಷಗಳ ವಿರಾಮದಲ್ಲಿದ್ದಾಗ ದಕ್ಷಿಣ ಭಾರತದಲ್ಲಿ ಬಚ್ಚನ್ ಚಿತ್ರಗಳ ಮಾದರಿಯ ಮಸಾಲಾ ಸಿನಿಮಾಗಳು ಸತತವಾಗಿ ಬಿಡುಗಡೆಯಾದವು. ಆ ಸಮಯದಲ್ಲಿ ಚಿರಂಜೀವಿ, ರಜನಿಕಾಂತ್ ಅಭಿಮಾನಿಗಳಿಗೆ ಅರೆ ದೇವರುಗಳಾದರು. ಚಿರಂಜೀವಿ ಬಿಗ್ಗರ್ ದ್ಯಾನ್ ಬಚ್ಚನ್ ಎಂಬ ಪ್ರಶಂಸೆಗೆ ಪಾತ್ರರಾದರು. ರಜನಿಕಾಂತ್ ಸೂಪರ್‌ಸ್ಟಾರ್ ಆದರು ಎಂದು ವರ್ಮ ಹೇಳಿದ್ದಾರೆ. ಇದೆಲ್ಲ ಅವರು ಅಮಿತಾಭ್ ಬಚ್ಚನ್ ಅವರ ದೇಹಭಾಷೆ ಮತ್ತು ಪಾತ್ರಗಳನ್ನು ಆದರ್ಶವಾಗಿಟ್ಟುಕೊಂಡ ಕಾರಣದಿಂದಲೇ ಸಂಭವಿಸಿದೆ ಎಂದು ವರ್ಮ ಹೇಳಿದ್ದಾರೆ.
ನೆಟ್ಟಿಗರ ಟೀಕೆ
ಅಮಿತಾಭ್ ಬಚ್ಚನ್‌ರಿಂದಲೇ ಸೌತ್ ಸಿನಿಮಾಗಳಿಗೆ ಮಸಾಲಾ ಸಿನಿಮಾಗಳ ಬ್ರ್ಯಾಂಡ್ ಸೃಷ್ಟಿಯಾಯಿತು ಎಂದು ವರ್ಮ ಹೇಳಿದ್ದಾರೆ. ಸೌತ್‌ನಲ್ಲಿ ಇಂದಿಗೂ ಮಸಾಲಾ ಚಿತ್ರಗಳ ಟ್ರೆಂಡ್ ಇದ್ದರೆ ಅದಕ್ಕೆ ಕಾರಣ ಆಗಿನ ಅಮಿತಾಬ್ ಚಿತ್ರಗಳ ಪ್ರಭಾವ ಎಂದು ವರ್ಮ ಹೇಳಿದ್ದಾರೆ. ಆದರೆ ವರ್ಮ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ಒಂದು ಅಥವಾ ಎರಡು ಚಿತ್ರಗಳನ್ನು ಮಾತ್ರ ಅಮಿತಾಬ್ ಬಚ್ಚನ್ ಚಿತ್ರಗಳಿಂದ ರಿಮೇಕ್ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಚಿರಂಜೀವಿ, ರಜನಿಗೆ ಸ್ವಂತ ಶೈಲಿ ಇದೆ.. ಅವರು ಎಂದಿಗೂ ಅಮಿತಾ್‌ಭ್ ರನ್ನು ಅನುಕರಿಸಲಿಲ್ಲ ಎಂದು ಹೇಳುತ್ತಿದ್ದಾರೆ.