ಅಷ್ಟೊಂದು ಸಿನಿಮಾ ಫ್ಲಾಪ್ ಆದ್ರೂ ಈ ನಟನ ಆಸ್ತಿ 3000 ಕೋಟಿ; ಹೇಗಾಯ್ತು ಅಷ್ಟೊಂದು ಹಣ!
ಟಾಲಿವುಡ್‌ನಲ್ಲಿ ಸ್ಟಾರ್ ಹೀರೋ ಆಗಿ ಮಿಂಚಿದ ಈ ನಟ 100 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ 40ಕ್ಕೂ ಹೆಚ್ಚು ಸಿನಿಮಾಗಳು ಫ್ಲಾಪ್ ಆಗಿವೆ. ಹಾಗಿದ್ದರೂ ಸಾವಿರಾರು ಕೋಟಿ ಆಸ್ತಿ ಮಾಡಿರೋ ಈ ಹೀರೋ ಯಾರು ಗೊತ್ತಾ?

ಸ್ಟಾರ್ ಹೀರೋಗಳು ಹಿಟ್ ಸಿನಿಮಾಗಳು ಇಲ್ಲದಿದ್ದರೂ ಸ್ಟಾರ್‌ಡಮ್ ಕಾಯ್ದುಕೊಂಡಿದ್ದಾರೆ. ರಿಯಾಲಿಟಿ ಶೋ, ಸಿನಿಮಾ ನಿರ್ಮಾಣ, ಬೇರೆ ಬೇರೆ ಬ್ಯುಸಿನೆಸ್‌ಗಳಿಂದ ಸಾವಿರಾರು ಕೋಟಿ ಸಂಪಾದಿಸುತ್ತಿದ್ದಾರೆ. ಟಾಲಿವುಡ್‌ನಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರೋ ಈ ಹೀರೋ ಯಾರು ಅಂದ್ರೆ ಅದು ಅಕ್ಕಿನೇನಿ ನಾಗಾರ್ಜುನ.
ಟಾಲಿವುಡ್‌ನಲ್ಲಿ ದಶಕಗಳಿಂದ ಸಿನಿಮಾ ಮಾಡ್ತಿರೋ ನಾಗಾರ್ಜುನ ಸಿನಿಮಾಗಳ ಜೊತೆಗೆ ಬ್ಯುಸಿನೆಸ್‌ನಲ್ಲೂ ಗೆದ್ದಿದ್ದಾರೆ. ಸುಮಾರು 100 ಸಿನಿಮಾಗಳಲ್ಲಿ ನಟಿಸಿ, 40ಕ್ಕೂ ಹೆಚ್ಚು ಫ್ಲಾಪ್ ಸಿನಿಮಾಗಳನ್ನ ಕಂಡಿದ್ದಾರೆ.
1986ರಲ್ಲಿ 'ವಿಕ್ರಮ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಾಗಾರ್ಜುನ, ಕಡಿಮೆ ಸಮಯದಲ್ಲೇ ಸ್ಟಾರ್ ಹೀರೋ ಆದರು. 90ರ ದಶಕದಲ್ಲಿ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ಜೊತೆಗೆ ಟಾಲಿವುಡ್‌ನ ನಾಲ್ಕು ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದರು. ಈಗ ಬೆಳ್ಳಿತೆರೆಯಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದರೂ, ಕಿರುತೆರೆಯಲ್ಲಿ ಸದ್ದು ಮಾಡ್ತಿದ್ದಾರೆ.
ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2024ರ ಪ್ರಕಾರ, ನಾಗಾರ್ಜುನ ಅವರ ಆಸ್ತಿ ಸುಮಾರು 3572 ಕೋಟಿ ($410 ಮಿಲಿಯನ್). ಈ ಪಟ್ಟಿಯಲ್ಲಿ ಶಾರುಖ್ ಖಾನ್ 7300 ಕೋಟಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಾಗಾರ್ಜುನ ಎರಡನೇ ಸ್ಥಾನದಲ್ಲಿದ್ದಾರೆ. ನಟನಾಗಿ ಮಾತ್ರವಲ್ಲದೆ, ನಿರ್ಮಾಪಕ, ಉದ್ಯಮಿ, ಅನ್ನಪೂರ್ಣ ಸ್ಟುಡಿಯೋಸ್ ಮುಖ್ಯಸ್ಥರಾಗಿ ಹಣ ಗಳಿಸುತ್ತಿದ್ದಾರೆ.
ನಾಗಾರ್ಜುನ ಒಂದು ಸಿನಿಮಾಗೆ 20 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಕಲ್ಯಾಣ್ ಜ್ಯುವೆಲ್ಲರ್ಸ್‌ನಂತಹ ಬ್ರ್ಯಾಂಡ್‌ಗಳ ಜಾಹೀರಾತು ಮತ್ತು ಇತರ ವ್ಯಾಪಾರಗಳಿಂದಲೂ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ.
ಸಿನಿಮಾ, ವ್ಯಾಪಾರಗಳ ಜೊತೆಗೆ ಕಿರುತೆರೆಯಲ್ಲೂ ನಾಗಾರ್ಜುನ ಸಕ್ರಿಯರಾಗಿದ್ದಾರೆ. 'ಮೀಲೋ ಎವರು ಕೋಟೀಶ್ವರುಡು' ನಡೆಸಿಕೊಟ್ಟ ನಾಗಾರ್ಜುನ ಈಗ 'ಬಿಗ್ ಬಾಸ್ ತೆಲುಗು' ಶೋ ನಡೆಸಿಕೊಡ್ತಿದ್ದಾರೆ. ಬಿಗ್ ಬಾಸ್ ಸೀಸನ್ 3 ರಿಂದ 8ರವರೆಗೆ ನಡೆಸಿಕೊಟ್ಟ ನಾಗಾರ್ಜುನ, ಈಗ ಸೀಸನ್ 9 ಕೂಡ ನಡೆಸಿಕೊಡಲಿದ್ದಾರೆ. ಇದರ ಪ್ರೋಮೋ ಕೂಡ ಬಿಡುಗಡೆಯಾಗಿದೆ.