Success is a Journey ನಾಟ್ ಎ ಡೆಸ್ಟಿನೇಷನ್: ವೈರಲ್ ಆಯ್ತು ದೀಪಿಕಾ ದಾಸ್ ಪೋಸ್ಟ್!
ವಿದೇಶಿ ಪ್ರವಾಸಗಳ ಫೋಟೋಗಳನ್ನು ಹಂಚಿಕೊಳ್ಳುವ ದೀಪಿಕಾ ದಾಸ್, ಕಾರಿನ ಮುಂದೆ ನಿಂತು ವಿವಿಧ ಭಂಗಿಗಳಲ್ಲಿ ಫೋಸ್ ಕೊಟ್ಟಿದ್ದಾರೆ. ನಾಗಿಣಿ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗಿದೆ.
ಕನ್ನಡದ ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಸದಾ ಪ್ರವಾಸ ಅಂತ ಬ್ಯುಸಿಯಾಗಿರುತ್ತಾರೆ. ಬಿಗ್ ಬಾಸ್ ಸುಂದರಿ ದೇಶ-ವಿದೇಶ ಅಂಥ ಪ್ರವಾಸದಲ್ಲಿ ಸುತ್ತಾಡುತ್ತಿದ್ದಾರೆ.
ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ದೀಪಿಕಾ ಪ್ರವಾಸದ ಫೋಟೋಸ್ ವೈರಲ್ ಆಗಿದೆ.
ವಿದೇಶಿ ಪ್ರವಾಸಗಳ ಫೋಟೋಗಳನ್ನು ಹಂಚಿಕೊಳ್ಳುವ ದೀಪಿಕಾ ದಾಸ್, ಕಾರಿನ ಮುಂದೆ ನಿಂತು ವಿವಿಧ ಭಂಗಿಗಳಲ್ಲಿ ಫೋಸ್ ಕೊಟ್ಟಿದ್ದಾರೆ. ನಾಗಿಣಿ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗಿದೆ.
ದೀಪಿಕಾ ದಾಸ್ ಅವರ ವೈರಲ್ ಆಗಿರುವ ಪೋಟೋಗಳಿಗೆ 'ಸಕ್ಸಸ್ ಈಸ್ ಎ ಜರ್ನಿ, ನಾಟ್ ಎ ಡೆಸ್ಟಿನೇಷನ್' ಎಂದು ಕ್ಯಾಪ್ಷನ್ ಕೊಟ್ಟು, ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.
ಟ್ರೋಲ್‌ಗಳಿಗೆ ಹೆಚ್ಚು ತಲೆ ಕೆಜಿಸಿಕೊಳ್ಳದ ದೀಪಿಕಾ ದಾಸ್ ಹಲವಾರು ಫೋಟೋಗಳನ್ನು ಶೇರ್ ಮಾಡುತ್ತಾ ಮಸ್ತ್ ಮಜಾ ಮಾಡುತ್ತಿದ್ದಾರೆ. ಸದ್ಯ ದೀಪಿಕಾ 'ಅಂತರಪಟ' ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್, ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿದ್ರು. ಈ ಸೀರಿಯಲ್ ದೀಪಿಕಾಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿತ್ತು. ಇನ್ನು ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ ಮೂಲಕ ದೀಪಿಕಾ ಗಮನಸೆಳೆದಿದ್ದರು.