MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • 'ಕಾರು ಕೊಡಲ್ಲ ನಡ್ಕೊಂಡು ಹೋಗು' ಎಂದ ನಿರ್ಮಾಪಕ: ಶಪಥ ಮಾಡಿ ಮಾಸ್ ಕೌಂಟರ್ ಕೊಟ್ರು ರಜನಿಕಾಂತ್!

'ಕಾರು ಕೊಡಲ್ಲ ನಡ್ಕೊಂಡು ಹೋಗು' ಎಂದ ನಿರ್ಮಾಪಕ: ಶಪಥ ಮಾಡಿ ಮಾಸ್ ಕೌಂಟರ್ ಕೊಟ್ರು ರಜನಿಕಾಂತ್!

ಇಂದು ತಮಿಳು ಸಿನಿಮಾದಲ್ಲಿ ಸೂಪರ್‌ಸ್ಟಾರ್ ಆಗಿರುವ ರಜನಿಕಾಂತ್ ಅವರ ಯಶಸ್ಸಿನ ಹಿಂದೆ ಹಲವು ಕಷ್ಟಗಳು ಮತ್ತು ಅವಮಾನಗಳಿವೆ. ನಿರ್ಮಾಪಕರೊಬ್ಬರು ಮಾಡಿದ ಅವಮಾನವೇ ಅವರ ಜೀವನದಲ್ಲಿ ದೊಡ್ಡ ತಿರುವು ನೀಡಿತು.

3 Min read
Author : Govindaraj S
Published : Nov 29 2026, 08:24 PM IST
Share this Photo Gallery
  • FB
  • TW
  • Linkdin
  • Whatsapp
15
ರಜನಿಕಾಂತ್ ಸಕ್ಸಸ್ ಸ್ಟೋರಿ
Image Credit : X

ರಜನಿಕಾಂತ್ ಸಕ್ಸಸ್ ಸ್ಟೋರಿ

ಇಂದು ತಮಿಳು ಸಿನಿಮಾದ ಸೂಪರ್‌ಸ್ಟಾರ್ ಆಗಿರುವ ರಜನಿಕಾಂತ್ ಯಶಸ್ಸಿನ ಹಿಂದೆ ಹಲವು ಕಷ್ಟ, ಅವಮಾನ ಮತ್ತು ಸವಾಲುಗಳಿವೆ. ಬಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್ವಾಡ್, ತಮ್ಮ ವಿಭಿನ್ನ ಸ್ಟೈಲ್ ಮತ್ತು ನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಆದರೆ ಆರಂಭಿಕ ದಿನಗಳಲ್ಲಿ ಅವರು ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರು. ವಿಶೇಷವಾಗಿ 1970ರ ದಶಕದಲ್ಲಿ ನಿರ್ಮಾಪಕರೊಬ್ಬರು ಮಾಡಿದ ಅವಮಾನ ರಜಿನಿ ಜೀವನದಲ್ಲಿ ದೊಡ್ಡ ತಿರುವು ನೀಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
6 ಸಾವಿರ ರೂಪಾಯಿಗೆ ಒಪ್ಪಿಕೊಂಡ ರಜನಿಕಾಂತ್
Image Credit : X

6 ಸಾವಿರ ರೂಪಾಯಿಗೆ ಒಪ್ಪಿಕೊಂಡ ರಜನಿಕಾಂತ್

ಒಮ್ಮೆ ನಿರ್ಮಾಪಕರೊಬ್ಬರು ರಜನಿಕಾಂತ್ ಮನೆಗೆ ಬಂದು, ತಮ್ಮ ಸಿನಿಮಾದಲ್ಲಿ ಒಂದು ಒಳ್ಳೆಯ ಪಾತ್ರವಿದೆ ಎಂದರು. ಸಂಭಾವನೆ ಬಗ್ಗೆ ಕೇಳಿದಾಗ ರಜಿನಿ 10 ಸಾವಿರ ರೂ. ಡಿಮ್ಯಾಂಡ್ ಮಾಡಿದರು. ಕೊನೆಗೆ 6 ಸಾವಿರ ರೂ.ಗೆ ಡೀಲ್ ಫಿಕ್ಸ್ ಆಯಿತು. ಶೂಟಿಂಗ್‌ಗೆ ಬರಲು ಒಪ್ಪಿದ ರಜಿನಿ, 1 ಸಾವಿರ ರೂ. ಅಡ್ವಾನ್ಸ್ ಕೇಳಿದರು. ಆದರೆ ನಿರ್ಮಾಪಕರು ಮರುದಿನ ಪ್ರೊಡಕ್ಷನ್ ಮ್ಯಾನೇಜರ್ ಮೂಲಕ ಹಣ ಕಳುಹಿಸುವುದಾಗಿ ಹೇಳಿದರು. ಮರುದಿನ ಪ್ರೊಡಕ್ಷನ್ ಮ್ಯಾನೇಜರ್, ಟೈಲರ್ ಜೊತೆ ಬಂದು ಅಳತೆ ತೆಗೆದುಕೊಂಡು ಹೋದರು. ಆದರೆ ಹಣ ನೀಡಲಿಲ್ಲ. ಈ ಬಗ್ಗೆ ಕೇಳಿದಾಗ, ಮರುದಿನ ಸ್ಟುಡಿಯೋದಲ್ಲಿ ಮೇಕಪ್ ಹಾಕುವಾಗ ಹಣ ಕೊಡುವುದಾಗಿ ನಿರ್ಮಾಪಕರು ಫೋನ್‌ನಲ್ಲಿ ಭರವಸೆ ನೀಡಿದರು.

Related Articles

Related image1
ರಜನಿಕಾಂತ್ ಪಡೆದಿದ್ದು 2 ಸಾವಿರ ಸಂಭಾವನೆ: ಆದ್ರೆ ಆ ಸಿನಿಮಾ ಗಳಿಸಿದ್ದು ಬರೋಬ್ಬರಿ 3 ಕೋಟಿ!
Related image2
ತಲೈವರ್ ರಜನಿಕಾಂತ್ ಅವರ ಈ ಆಸೆ ಈಡೇರಲಿದೆಯೇ? ಅಭಿಮಾನಿಗಳಲ್ಲಿ ಶುರುವಾಯ್ತು ಕುತೂಹಲ
35
ಅವಮಾನಿಸಿದ ನಿರ್ಮಾಪಕ
Image Credit : x/Sun pictures

ಅವಮಾನಿಸಿದ ನಿರ್ಮಾಪಕ

ಮರುದಿನ ಬೆಳಗ್ಗೆ 7 ಗಂಟೆಗೆ ಕಾರು ಬರುತ್ತದೆ ಎಂದು ರಜಿನಿ ಕಾಯುತ್ತಿದ್ದರು. ಆದರೆ ಕಾರು 8.45ಕ್ಕೆ ಬಂದು ಅವರನ್ನು ನೇರವಾಗಿ ಸ್ಟುಡಿಯೋಗೆ ಕರೆದೊಯ್ಯಿತು. ಅಲ್ಲಿ ಎಲ್ಲರೂ ಶೂಟಿಂಗ್‌ಗೆ ರೆಡಿಯಾಗಿದ್ದರು. ರಜಿನಿ ಮಾತ್ರ ತಮಗೆ ಬರಬೇಕಿದ್ದ ಸಾವಿರ ರೂ. ಅಡ್ವಾನ್ಸ್‌ಗಾಗಿ ಕಾಯುತ್ತಿದ್ದರು. ಆಗ ನಿರ್ಮಾಪಕರು ಐಷಾರಾಮಿ ಕಾರಿನಲ್ಲಿ ಸ್ಟುಡಿಯೋಗೆ ಬಂದಿಳಿದರು. ರಜಿನಿ ಹಣದ ಬಗ್ಗೆ ಕೇಳಿದಾಗ, ನಿರ್ಮಾಪಕರು ಕೋಪದಿಂದ ಮಾತನಾಡಲು ಶುರು ಮಾಡಿದರು.

'ಏನಯ್ಯಾ, ನೀನು ದೊಡ್ಡ ಕಲಾವಿದನಾ? ಒಂದೆರಡು ಸಿನಿಮಾ ಮಾಡಿದ ತಕ್ಷಣ ದೊಡ್ಡ ಸ್ಟಾರ್ ಆಗ್ಬಿಟ್ಟಿಯಾ? ಮೇಕಪ್ ಹಾಕುವ ಮುನ್ನವೇ ನಿನಗೆ ಅಡ್ವಾನ್ಸ್ ಕೊಡಬೇಕಾ? ನಿನಗೆ ಪಾತ್ರವೂ ಇಲ್ಲ, ಅಡ್ವಾನ್ಸೂ ಇಲ್ಲ. ಮನೆಗೆ ನಡ್ಕೊಂಡು ಹೋಗು' ಎಂದು ಅವಮಾನಿಸಿದರು. ಅಷ್ಟೇ ಅಲ್ಲ, ಮನೆಗೆ ಹೋಗಲು ಕಾರು ಕೇಳಿದ ರಜನಿಗೆ ಕಾರು ಕೊಡಲೂ ನಿರಾಕರಿಸಿದರು. 'ನೀನು ಮನೆಗೆ ಹೋಗೋಕೂ ಕಾರು ಬೇಕಾ? ಅದಕ್ಕೂ ನಾನೇ ಕಾಸು ಕೊಡಬೇಕಾ. ನಡ್ಕೊಂಡೇ ಹೋಗು' ಎಂದು ಎಲ್ಲರ ಎದುರು ಬೈದರು. ಆ ಸಮಯದಲ್ಲಿ ರಜಿನಿ ಬಳಿ ಹೆಚ್ಚು ಹಣವಿರಲಿಲ್ಲ. ಇದರಿಂದ ಮನಸ್ಸಿಗೆ ತೀವ್ರ ಪೆಟ್ಟಾದರೂ, ಬೇರೆ ದಾರಿಯಿಲ್ಲದೆ ಸ್ಟುಡಿಯೋದಿಂದ ಮನೆಗೆ ನಡೆದುಕೊಂಡೇ ಹೊರಟರು.

45
ಬೇಸರಗೊಂಡ ರಜನಿಕಾಂತ್
Image Credit : X

ಬೇಸರಗೊಂಡ ರಜನಿಕಾಂತ್

ಸ್ಟುಡಿಯೋದಿಂದ ನಡೆದುಕೊಂಡು ಹೋಗುತ್ತಿದ್ದ ರಜನಿಕಾಂತ್ ಕಣ್ಣಿಗೆ ದಾರಿಯಲ್ಲಿ '16 ವಯದಿನಿಲೆ' ಸಿನಿಮಾದ ಎರಡನೇ ವಾರದ ಪೋಸ್ಟರ್ ಬಿತ್ತು. ಅದರಲ್ಲಿ ಅವರ ಪಾತ್ರದ ಫೇಮಸ್ ಡೈಲಾಗ್ ಕೂಡ ಇತ್ತು. ಒಂದು ಕಡೆ ತಮ್ಮ ಸಿನಿಮಾ ಹಿಟ್ ಆಗುತ್ತಿದ್ದರೂ, ಮತ್ತೊಂದೆಡೆ ನಿರ್ಮಾಪಕರಿಂದ ಇಂತಹ ಅವಮಾನ ಎದುರಿಸಬೇಕಾಯಿತಲ್ಲಾ ಎಂದು ಅವರು ಬೇಸರಪಟ್ಟರು.

ದಾರಿಯಲ್ಲಿ ಹೋಗುತ್ತಿದ್ದ ಜನರು ಅವರನ್ನು ನೋಡಿ ಅದೇ ಡೈಲಾಗ್ ಹೇಳುತ್ತಿದ್ದರು. ಆ ಕ್ಷಣದಲ್ಲಿ ಜನರು ತಮ್ಮ ನಟನೆ ಮೆಚ್ಚಿ ಡೈಲಾಗ್ ಹೇಳುತ್ತಿದ್ದಾರೋ ಅಥವಾ ತಮ್ಮ ಸ್ಥಿತಿ ನೋಡಿ ಗೇಲಿ ಮಾಡುತ್ತಿದ್ದಾರೋ ಎಂಬ ನೋವು ರಜಿನಿಯನ್ನು ಕಾಡಿತು. ಆ ಕ್ಷಣದಲ್ಲೇ ಅವರು ಒಂದು ನಿರ್ಧಾರ ಮಾಡಿದರು. ಯಾವ ಸ್ಟುಡಿಯೋದಲ್ಲಿ ತಮಗೆ ಅವಮಾನವಾಯಿತೋ, ಅದೇ ಸ್ಟುಡಿಯೋಗೆ ಒಂದು ದಿನ ತಾವೂ ಐಷಾರಾಮಿ ಕಾರಿನಲ್ಲಿ ಬಂದು ಇಳಿಯಬೇಕು ಎಂದು ಶಪಥ ಮಾಡಿದರು.

55
ಇಟಾಲಿಯನ್ ಫಿಯೆಟ್ ಕಾರಿನ ಒಡೆಯನಾದ ರಜನಿಕಾಂತ್
Image Credit : X

ಇಟಾಲಿಯನ್ ಫಿಯೆಟ್ ಕಾರಿನ ಒಡೆಯನಾದ ರಜನಿಕಾಂತ್

ಅವಮಾನಗೊಂಡ ಕೇವಲ ಎರಡೂವರೆ ವರ್ಷಗಳಲ್ಲೇ ರಜನಿಕಾಂತ್ ಜೀವನ ಬದಲಾಯಿತು. ಎವಿಎಂ ಚೆಟ್ಟಿಯಾರ್ ಬಳಿ ಇದ್ದ ಇಟಾಲಿಯನ್ ಫಿಯೆಟ್ ಕಾರನ್ನು 4.25 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದರು. ಅದೇ ಅವರ ಜೀವನದ ಮೊದಲ ಕಾರು.

ಕಾರಿಗೆ ಡ್ರೈವರ್ ನೇಮಿಸಲು ನಿರ್ಧರಿಸಿದ ಅವರು, ಸಾಮಾನ್ಯ ಡ್ರೈವರ್ ಬೇಡ, ವಿದೇಶಿ ಕಾರು ಓಡಿಸಲು ವಿದೇಶಿ ಡ್ರೈವರ್ ಬೇಕು ಎಂದಿದ್ದರು. ಆಗ ಆಂಗ್ಲೋ-ಇಂಡಿಯನ್ ಆಗಿದ್ದ ರಾಬಿನ್ಸನ್ ಎಂಬುವವರನ್ನು ಡ್ರೈವರ್ ಆಗಿ ಕೆಲಸಕ್ಕೆ ಸೇರಿಸಿಕೊಂಡರು. ಅವರಿಗೆ ಸ್ಪೆಷಲ್ ಯೂನಿಫಾರ್ಮ್, ಬೆಲ್ಟ್, ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಕೂಡ ಕೊಡಿಸಿದರು. ಮರುದಿನ ರಾಬಿನ್ಸನ್ ಕಾರಿನ ಬಾಗಿಲು ತೆಗೆದು 'ರಿಪೋರ್ಟಿಂಗ್ ಸರ್' ಎಂದು ಗೌರವದಿಂದ ಸ್ವಾಗತಿಸಿದರು. ರಜಿನಿ ಕೂಡ ತಮ್ಮದೇ ಸ್ಟೈಲ್‌ನಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ನೇರವಾಗಿ ಸ್ಟುಡಿಯೋಗೆ ಹೊರಟರು.

ಎರಡೂವರೆ ವರ್ಷಗಳ ಹಿಂದೆ ಯಾವ ಜಾಗದಲ್ಲಿ ನಿರ್ಮಾಪಕರು ತಮ್ಮ ಐಷಾರಾಮಿ ಕಾರಿನಲ್ಲಿ ಬಂದು ರಜನಿಯನ್ನು ಅವಮಾನಿಸಿದ್ದರೋ, ಅದೇ ಜಾಗಕ್ಕೆ ತಮ್ಮ ಇಟಾಲಿಯನ್ ಫಿಯೆಟ್ ಕಾರಿನಲ್ಲಿ ಬಂದು ಇಳಿದರು. ಕಾರಿನಿಂದ ಇಳಿದು ತಮ್ಮದೇ ಸ್ಟೈಲ್‌ನಲ್ಲಿ ಸಿಗರೇಟ್ ಸೇದುತ್ತಾ ನಿಂತರು. ಅವರನ್ನು ನೋಡಲು ಸ್ಟುಡಿಯೋದಲ್ಲಿ ಇದ್ದವರೆಲ್ಲಾ ಹೊರಬಂದರು. ಬಳಿಕ ಅಲ್ಲಿಂದ ನೇರವಾಗಿ ತಮ್ಮ ಗುರು ಕೆ. ಬಾಲಚಂದರ್ ಅವರ ಕವಿತಾಲಯ ಆಫೀಸ್‌ಗೆ ತೆರಳಿದರು. ಹೊಸ ಕಾರು ಖರೀದಿಸಿರುವುದಾಗಿ ಹೇಳಿ, ಅದನ್ನು ಮುಟ್ಟಿ ಆಶೀರ್ವದಿಸುವಂತೆ ಕೇಳಿಕೊಂಡರು. ಬಾಲಚಂದರ್ ಖುಷಿಯಿಂದ ಕಾರನ್ನು ಆಶೀರ್ವದಿಸಿದರು.

ಯಾರಾದರೂ ಅವಮಾನಿಸಿದರೆ ಅವರ ಮೇಲೆ ಕೋಪಗೊಳ್ಳುವ ಬದಲು, ನಮ್ಮ ಕೆಲಸದ ಮೂಲಕವೇ ಉತ್ತರ ಕೊಡಬೇಕು ಎಂಬುದು ರಜನಿಕಾಂತ್ ಜೀವನದಲ್ಲಿ ನಡೆದ ಈ ಘಟನೆಯಿಂದ ಸಿಗುವ ದೊಡ್ಡ ಪಾಠ. ಇಂದು ಸೂಪರ್‌ಸ್ಟಾರ್ ಪಟ್ಟದಲ್ಲಿರುವ ರಜಿನಿ ಯಶಸ್ಸಿನ ಹಿಂದೆ ಹೀಗೆ ಹಲವು ಕಹಿ ಅನುಭವಗಳು ಮತ್ತು ಸವಾಲುಗಳಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ರಜನೀಕಾಂತ್
ಮನರಂಜನಾ ಸುದ್ದಿ
ಸಿನಿಮಾ
ಕಾಲಿವುಡ್
 

Gold & Metal Rates

Loading rates…

All cities ›
Latest Videos
Recommended Stories
Recommended image1
ಧುರಂಧರ್ ಬೆಡಗಿಗೆ ಸಿಕ್ತಾ ಮತ್ತೊಂದು ಬಿಗ್ ಆಫರ್? ಬಾಲಿವುಡ್‌ನಲ್ಲಿ ಕೇಳಿಬಂತು ಹೊಸ ಸುದ್ದಿ!
Recommended image2
ಬಳ್ಳಾರಿ ದುರ್ಗಮ್ಮ ದೇಗುಲಕ್ಕೆ ದರ್ಶನ್ ಪತ್ನಿ ದಿಢೀರ್ ಭೇಟಿ; ಕುತೂಹಲ ಮೂಡಿಸಿದ ಶಾಸಕ ಭರತ್ ರೆಡ್ಡಿ ಜೊತೆಗಿನ ಮಾತುಕತೆ
Recommended image3
ಗ್ಲಾಮರ್‌ಗೆ ಹೆಚ್ಚು ಆದ್ಯತೆ ನೀಡುವ ಪಾತ್ರಗಳಲ್ಲಿ ನಟಿಸಲ್ಲ: ಕಾರಣ ಬಿಚ್ಚಿಟ್ಟ ಸಾಯಿ ಪಲ್ಲವಿ!
Related Stories
Recommended image1
ರಜನಿಕಾಂತ್ ಪಡೆದಿದ್ದು 2 ಸಾವಿರ ಸಂಭಾವನೆ: ಆದ್ರೆ ಆ ಸಿನಿಮಾ ಗಳಿಸಿದ್ದು ಬರೋಬ್ಬರಿ 3 ಕೋಟಿ!
Recommended image2
ತಲೈವರ್ ರಜನಿಕಾಂತ್ ಅವರ ಈ ಆಸೆ ಈಡೇರಲಿದೆಯೇ? ಅಭಿಮಾನಿಗಳಲ್ಲಿ ಶುರುವಾಯ್ತು ಕುತೂಹಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved