'30'ಕ್ಕೆ ಕಾಲಿಟ್ಟ 'ಶೋಕಿಲಾಲ' ಚಂದನ್ ಶೆಟ್ಟಿ!
ಕನ್ನಡ Raper, ಮ್ಯೂಸಿಕ್ ಡೈರೆಕ್ಟರ್, ಗಿಟಾರಿಸ್ಟ್ ಹಾಗೂ ಡ್ರಮ್ಮರ್ ಚಂದನ್ ಶೆಟ್ಟಿ ಇಂದು 30 ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....
ಚಂದನ್ ಶೆಟ್ಟಿ ಮೂಲತಃ ಹಾಸನದವರು
ಹುಟ್ಟಿದ್ದು ಸೆಪ್ಟೆಂಬರ್ 17, 1989
2012 ರಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ‘ಅಲೆಮಾರಿ’ ಚಿತ್ರಕ್ಕೆ ಗೀತ ರಚನೆ ಮಾಡಿದ್ದಾರೆ.
ವರದನಾಯಕ, ಪವರ್, ಚಕ್ರವ್ಯೂಹ ಮತ್ತು ಭಜರಂಗಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಕನ್ನಡ ಬಿಗ್ ಬಾಸ್ ಸೀಸನ್ 5 ರಲ್ಲಿ ರಿಯಾಲಿಟಿ ಶೋ ವಿಜೇತರಾಗಿದ್ದರು.
'ಹಾಳಾಗೋದೆ' ಆಲ್ಬಂಗೆ ಬಿಗ್ ಬ್ರೇಕ್ ಸಿಕ್ಕಿತ್ತು.
'2 Peg' ಆಲ್ಬಂ ಹಾಡು ಚಂದನ್ಗೆ ಬಿಗ್ ಬ್ರೇಕ್ ಕೊಟ್ಟಿದೆ.
ಚಾಕೋಲೇಟ್ ಗರ್ಲ್, ಟಕಿಲಾ, ನನ್ನ ಪ್ರೀತಿ ಸುಳ್ಳಲ್ಲ ಹಾಗೂ ಫೈಯರ್ ಆಲ್ಬಂ ಮಾಡಿದ್ದಾರೆ.
ಮಾಸ್ಟರ್ ಡ್ಯಾನ್ಸರ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿದ್ದರು.
ಕನ್ನಡ ಕೋಗಿಲೆ ಸೀಸನ್- 1,2 ಹಾಗೂ ಮಹಾ ಸಂಚಿಕೆಗೆ ತೀರ್ಪುಗಾರರಾಗಿದ್ದಾರೆ.