ಪ್ಲೋರಲ್ ಸೀರೆಯಲ್ಲಿ ಮಿಂಚಿದ ಅಮೃತವರ್ಷಿಣಿ ನಟಿ: ಓವರ್ ಆಕ್ಟಿಂಗ್ ಎಂದವನಿಗೆ ತಿರುಗೇಟು ನೀಡಿದ ರಜನಿ
ಅಮೃತವರ್ಷಿಣಿ ಸೀರಿಯಲ್ ಮೂಲಕ ಫೇಮಸ್ ಆದ ನಟಿ ರಜನಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಮ್ಮ ಸುಂದರ ಫೋಟೋಗಳನ್ನು ಶೇರ್ ಮಾಡಿ ಏನಾದರು ಬರೆದುಕೊಂಡಿರುತ್ತಾರೆ. ಅವರು ಈಗ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು ಬಹಳ ಸುಂದರವಾಗಿವೆ.
actress rajani
ಸ್ಟಾರ್ ಸುವರ್ಣದಲ್ಲಿ ಬರುತ್ತಿದ್ದ ಅಮೃತವರ್ಷಿಣಿ ಸೀರಿಯಲ್‌ನಲ್ಲಿ ಅಮೃತನ ಪಾತ್ರಧಾರಿಯಾಗಿ ಮಿಂಚುತ್ತಿದ್ದ ನಟಿ ರಜನಿ ಸೋಶಿಯಲ್ ಮೀಡಿಯದಲ್ಲಿ ತುಂಬಾ ಆಕ್ಟಿವ್ ಆಗಿದ್ದು, ಅಭಿಮಾನಿಗಳ ಪ್ರಶ್ನೆಗೆ ಕೆಲವೊಮ್ಮೆ ಉತ್ತರಿಸುತ್ತಿರುತ್ತಾರೆ.
actress rajani
ಇತ್ತೀಚೆಗೆ ಅವರು ಬಿಗ್‌ಬಾಸ್ ಸ್ಪರ್ಧಿ ಪಾವಗಡ ಮಂಜು ಜೊತೆ ಡವ್ ಮಂಜ ಎಂಬ ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು. ಇದರ ಪೋಸ್ಟರ್ ಅನ್ನು ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು.
actress rajani
ಉತ್ತಮ ಗಾಯಕಿಯೂ ಆಗಿರುವ ಅಮೃತಾ ಅವರು ಹಲವು ಸಾರ್ವಜನಿಕ ವೇದಿಕೆಯಲ್ಲಿ ಸಾಕಷ್ಟು ಬಾರಿ ಹಾಡು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.
actress rajani
ತುಮಕೂರು ಮೂಲದವರಾದ ರಜನಿ ಈ ಅಮೃತವರ್ಷಿಣಿ ಸೀರಿಯಲ್‌ನಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ಬಹಳ ಸೊಗಸಾಗಿ ನಟಿಸಿದ್ದರು, ಅವರಿಗೆ ಈ ಸೀರಿಯಲ್ ಒಳ್ಳೆ ಬ್ರೇಕ್ ನೀಡಿತ್ತು.
actress rajani
ಈ ಪೋಟೋಗಳಲ್ಲಿ ರಜನಿ ಧರಿಸಿರುವ ಫ್ಲೋರಲ್ ಸೀರೆಗಳನ್ನು ರಂಗಸ್ತ್ರೀ ಎಂಬುವವರು ಡಿಸೈನ್ ಮಾಡಿದ್ದು, ಈ ಸೀರೆಗಳಲ್ಲಿ ಬಹಳ ಮುದ್ದಾಗಿ ಕಾಣಿಸ್ತಿದ್ದಾರೆ ರಜನಿ.
actress rajani
ಈ ಫೋಟೋ ಪೋಸ್ಟ್ ಮಾಡಿರುವ ರಜನಿ ಜೀವನ ಒಂದು ಪಯಣ, ಇದಕ್ಕೆ ರೆಡಿಮೇಡ್ ರೋಡ್ ಮ್ಯಾಪ್‌ಗಳಿರುವುದಿಲ್ಲ, ನಮ್ಮ ಗುರಿ ನಮ್ಮ ದಾರಿ ನಾವೇ ನಿರ್ಧರಿಸಿಕೊಳ್ಳಬೇಕು ಎಂದು ಬರೆದಿದ್ದಾರೆ.
actress rajani
ಇವರ ಫೋಟೋಗೆ ಅಭಿಮಾನಿಯೋರ್ವ ಓವರ್ ಆಕ್ಟಿಂಗ್ ಮಾಡ್ತಿದ್ರಿ ಎಂದು ಕಾಮೆಂಟ್ ಮಾಡಿದ್ದು, ಅದಕ್ಕೆ ಪ್ರತಿಕ್ರಿಯಿಸಿರು ನಟಿ ನಿರ್ದೇಶಕರು ಏನ್ ಹೇಳ್ತಾರೋ ಅದ್ನ ನಾ ಮಾಡ್ತಿರುವೆ ನೀವು ನಿರ್ದೇಶಕರಾದರೆ ನೀವು ಹೇಳಿದಂತೆ ಮಾಡುವೆ ಎಂದು ತಿರುಗೇಟು ನೀಡಿದ್ದಾರೆ.