2026ರ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಟಾಪ್ 5 ನಟಿಯರು ಇವರೇ ನೋಡಿ; ಕೋಟಿ ಕೋಟಿ ಕಲೆಕ್ಷನ್ಸ್
2026ರಲ್ಲಿ ಬಿಡುಗಡೆಯಾದ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ನಲ್ಲಿ ದರ್ಬಾರ್ ಮಾಡಿದ ಟಾಪ್ 5 ಭಾರತೀಯ ನಟಿಯರ ಮಾಹಿತಿಯನ್ನು ಈ ಲೇಖನ ನೀಡುತ್ತದೆ. ಐವರು ನಟಿಯರು ಮತ್ತು ಅವರ ಸಿನಿಮಾ ಗಳಿಕೆಯ ವಿವರಗಳು ಇಲ್ಲಿವೆ.

2026ರ ಟಾಪ್ 5 ಭಾರತೀಯ ನಟಿಯರು
2026ರ ಮುಕ್ತಾಯಕ್ಕೆ ಒಂದು ತಿಂಗಳು ಮಾತ್ರ ಉಳಿದಿದೆ. ಈ ವರ್ಷ ಸಿನಿಲೋಕ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದೆ. ಸಿನಿಮಾಗಳ ಜೊತೆ ನಟಿಯರಿಗೆ 2026 ಅದೃಷ್ಟದ ವರ್ಷವಾಗಿದೆ. 2026ರಲ್ಲಿ ಬಾಕ್ಸ್ ಆಫೀಸ್ನಲ್ಲಿ ದರ್ಬಾರ್ ಮಾಡಿದ ಟಾಪ್ 5 ಭಾರತೀಯ ನಟಿಯರು ಯಾರೆಲ್ಲಾ ಎಂಬುದರ ಮಾಹಿತಿಯನ್ನು ಈ ಲೇಖನ ಹೊಂದಿದೆ.
ಸಾರಾ ಅರ್ಜುನ್
ಬಾಕ್ಸ್ ಆಫಿಸ್ ಹಿಟ್ ಲಿಸ್ಟ್ ನಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಆದಿತ್ಯ ಧರ್ ನಿರ್ದೇಶನದಲ್ಲಿ ಬಂದ 'ಧುರಂಧರ್ 2' ಸಿನಿಮಾದಲ್ಲಿ ನಟಿಸಿದ ಸಾರಾ ಅರ್ಜುನ್. ವರದಿಗಳ ಪ್ರಕಾರ, 'ಧುರಂಧರ್ 2' ವಿಶ್ವದಾದ್ಯಂತ ರೂ. 1,813.39 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಸಾರಾ ಅರ್ಜುನ್ - ರಣವೀರ್ ಸಿಂಗ್ ಜೋಡಿಯನ್ನು ಜನರು ತುಂಬಾನೇ ಇಷ್ಟಪಟ್ಟಿದ್ದಾರೆ.
ಲಾರಾ ದತ್ತಾ
ಎರಡನೇ ಸ್ಥಾನದಲ್ಲಿ 90ರ ದಶಕದ ಫೇವರಿಟ್ ನಟಿ ಲಾರಾ ದತ್ತಾ ಇದ್ದಾರೆ. 2026ರಲ್ಲಿ ಇವರು ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ನಟಿಸಿದ ಮಲ್ಟಿ-ಸ್ಟಾರರ್ ಸಿನಿಮಾ 'ವೆಲ್ಕಮ್ ಟು ದಿ ಜಂಗಲ್' ಚಿತ್ರದಲ್ಲಿ ಲಾರಾ ನಟಿಸಿದ್ದಾರೆ. ಈ ಸಿನಿಮಾ ವಿಶ್ವಾದ್ಯಂತ ರೂ. 192.75 ಕೋಟಿ ಕಲೆಕ್ಷನ್ ಮಾಡಿತ್ತು.
ಇವರ ಎರಡನೇ ಸಿನಿಮಾ 'ರಾಮಾಯಣ'. ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾ ಕಲೆಕ್ಷನ್ನಲ್ಲಿ ಧೂಳೆಬ್ಬಿಸುತ್ತಿದೆ. ಇದುವರೆಗೂ ವಿಶ್ವಾದ್ಯಂತ ರೂ. 1,574.60 ಕೋಟಿ ಗಳಿಸಿದೆ. ಈ ಎರಡೂ ಸಿನಿಮಾಗಳನ್ನು ಸೇರಿಸಿ ಲಾರಾ ದತ್ತಾ ಒಟ್ಟು ರೂ. 1,767.35 ಕೋಟಿ ಕಲೆಕ್ಷನ್ ನೀಡಿದ್ದಾರೆ.
ರಕುಲ್ ಪ್ರೀತ್ ಸಿಂಗ್
ರಕುಲ್ ಪ್ರೀತ್ ಸಿಂಗ್ ಮೂರನೇ ಸ್ಥಾನದಲ್ಲಿದ್ದು, 2026ರಲ್ಲಿ ಎರಡು ಪ್ರಮುಖ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲು ಬಂದ 'ಪತಿ ಪತ್ನಿ ಔರ್ ವೋ ದೋ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ₹67.96 ಕೋಟಿ ಕಲೆಕ್ಷನ್ ಮಾಡಿತ್ತು. ಎರಡನೆಯದಾಗಿ ನಿತೇಶ್ ತಿವಾರಿ ನಿರ್ದೇಶನದಲ್ಲಿ ಬಂದ 'ರಾಮಾಯಣ'. ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ₹1,574.60 ಕೋಟಿ ಗಳಿಸಿದೆ. ಒಟ್ಟಾರೆಯಾಗಿ ಇವರ ಎರಡೂ ಸಿನಿಮಾಗಳು ಸೇರಿ ₹1,642.56 ಕೋಟಿ ಕಲೆಕ್ಷನ್ ಮಾಡಿವೆ.
ಸಾಯಿ ಪಲ್ಲವಿ
ನಾಲ್ಕನೇ ಸ್ಥಾನದಲ್ಲಿ ಸೌತ್ ಇಂಡಿಯನ್ ಸೆನ್ಸೇಷನ್ ಸಾಯಿ ಪಲ್ಲವಿ ಇದ್ದಾರೆ. 2026ರಲ್ಲಿಇದುವರೆಗೂ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಇವರು ನಟಿಸಿದ 'ಏಕ್ ದಿನ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಗಿ, ಕೇವಲ ₹5.52 ಕೋಟಿ ಮಾತ್ರ ಕಲೆಕ್ಷನ್ ಮಾಡಿತು. ಎರಡನೇ ಸಿನಿಮಾ ಅದ್ದೂರಿ ಚಿತ್ರ 'ರಾಮಾಯಣ'. ಪ್ರಪಂಚದಾದ್ಯಂತ ಇದುವರೆಗೂ ₹1,574.60 ಕೋಟಿ ಕಲೆಕ್ಷನ್ ಬಾಚಿಕೊಂಡಿದೆ.
ಮೂರನೇ ಸಿನಿಮಾ 'ಓಂ ಚಾಪ್ಟರ್ 1'. ನವೆಂಬರ್ 20ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ₹17.70 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂರೂ ಸಿನಿಮಾಗಳನ್ನು ಸೇರಿಸಿ ಸಾಯಿ ಪಲ್ಲವಿ ಇದುವರೆಗೂ ₹1,597.82 ಕೋಟಿ ಕಲೆಕ್ಷನ್ ನೀಡಿದ್ದಾರೆ.
ಮಮಿತಾ ಬೈಜು
ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಮಲಯಾಳಂ ನಟಿ ಮಮಿತಾ ಬೈಜು ಇದ್ದಾರೆ. 2026ರಲ್ಲಿ ಇವರು ಇದುವರೆಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾ 'ಜನ ನಾಯಗನ್' ರೂ.327.81 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ಸಿನಿಮಾ 'ಕರ' ರೂ.54.82 ಕೋಟಿ ಹಾಗೂ ಮೂರನೇ ಸಿನಿಮಾ 'ವಿಶ್ವನಾಥ್ ಅಂಡ್ ಸನ್ಸ್' ರೂ.212.34 ಕೋಟಿ ಕಲೆಕ್ಷನ್ ಮಾಡಿದೆ. ನಾಲ್ಕನೆಯದಾಗಿ ಬಂದ 'ಬೆಥ್ಲೆಹೆಮ್ ಕುಟುಂಬ ಯೂನಿಟ್' ಸಿನಿಮಾ ರೂ.333.09 ಕೋಟಿ ಗಳಿಸಿದೆ. ಈ ನಾಲ್ಕು ಸಿನಿಮಾಗಳನ್ನೂ ಸೇರಿಸಿ ಮಮಿತಾ ಬೈಜು ವಿಶ್ವದಾದ್ಯಂತ ಒಟ್ಟು ರೂ.928.06 ಕೋಟಿ ಕಲೆಕ್ಷನ್ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















