- Home
- Entertainment
- chandrayaan : ಅಮೇರಿಕಾದ ನೀಲ್ ಆರ್ಮ್ ಸ್ಟ್ರಾಂಗ್‌ಗಿಂತ ಮೊದಲೇ 'ಚಂದ್ರನ ಮೇಲೆ ಕಾಲಿಟ್ಟಿದ್ದ' ಕನ್ನಡಿಗರು!
chandrayaan : ಅಮೇರಿಕಾದ ನೀಲ್ ಆರ್ಮ್ ಸ್ಟ್ರಾಂಗ್‌ಗಿಂತ ಮೊದಲೇ 'ಚಂದ್ರನ ಮೇಲೆ ಕಾಲಿಟ್ಟಿದ್ದ' ಕನ್ನಡಿಗರು!
ಬೆಂಗಳೂರು (ಆ.22): ಜಾಗತಿಕ ಮಟ್ಟದಲ್ಲಿ ಚಂದ್ರಯಾನದ ಬಗ್ಗೆ ಹಾಗೂ ಚಂದ್ರನ ಮೇಲೆ ಕಾಲಿಡುವ ಬಗ್ಗೆ ವಿಶ್ವದ ಬಲಿಷ್ಠ ರಾಷ್ಟ್ರ ಅಮೇರಿಕಾಗಿಂದ ಮುಂಚೆಯೇ ಕನ್ನಡ ನಾಡಿನಲ್ಲಿ ಚಂದ್ರಯಾನದ ಆಸಕ್ತಿ ಮೂಡಿತ್ತು. ಅಮೇರಿಕಾ ನಾಸಾದ ನೀಲ್ ಆರ್ಮ್‌ಸ್ಟ್ರಾಂಗ್‌ಗಿಂತ ಮುಂಚೆಯೇ 1960ರಲ್ಲಿಯೇ ಇಬ್ಬರು ಕನ್ನಡಿಗರು 'ಚಂದ್ರನ ಮೇಲೆ ಕಾಲಿಟ್ಟಿದ್ದರು'.

ಇನ್ನು 1960ರ ದಶಕದ ಸಿನಿಮಾದಲ್ಲಿ ಚಂದ್ರನ ಬಳಿಗೆ ಹೋಗಲು ವಿಮಾನ ಮಾದರಿಯ ರಾಕೆಟ್ ಸಿದ್ಧಪಡಿಸಲಾಗಿತ್ತು. ಅದರಲ್ಲಿ ಇಬ್ಬರು ನಟರು ಭೂಮಿಯಿಂದ ಚಂದ್ರನ ಕಡೆಗೆ ಪ್ರಯಾಣ ಮಾಡಿದ್ದರು.
ಚಂದ್ರನ ಮೇಲೆ ಕಾಲಿಡುವ ವೇಳೆ ವಿಜ್ಞಾನಿ ಪ್ರತ್ಯೇಕ ವಿಮಾನ ಲಾಂಚಿಂಗ್ ಯಂತ್ರವನ್ನೂ ಕೂಡ ಕಂಡುಹಿಡಿದಿದ್ದರು. ಜೊತೆಗೆ, ಅಲ್ಲಿನ ವಾತಾವರಣದ ಬಗ್ಗೆಯೂ ಅಧ್ಯಯನ ಮಾಡಿ ಚಂದ್ರಯಾನ ಯಾತ್ರಿಗಳಿಗೆ ಮಾಹಿತಿ ನೀಡಿದ್ದರು.
ಚಂದ್ರನ ಬಳಿಗೆ ಹೋಗಲು ಮೀನಿನ ಮಾದರಿಯ ರಾಕೆಟ್ ಸಿದ್ಧಪಡಿಸಲಾಗಿತ್ತು. ಚಂದ್ರನ ಕಕ್ಷೆಯತ್ತ ರಾಕೆಟ್ ಹೋಗುವುದನ್ನು ಕೂಡ ಸೆರೆ ಹಿಡಿಯಲಾಗಿತ್ತು.
ಚಂದ್ರಯಾನ ಮಾಡುವುದಕ್ಕೆ ಮೊದಲು ಉಸಿರಾಟಕ್ಕೆ ಸಮಸ್ಯೆ ಆಗದಂತೆ ಆಕ್ಸಿಜನ್ ಸಿಲಿಂಡರ್ ಅನ್ನೂ ಕೂಡ ತಯಾರಿಸಿದ್ದರು. ಆದರೆ, ಅದು ಗಣಪತಿಯ ಮುಖದಂತೆ ಇತ್ತು ಎನ್ನುವುದು ಇನ್ನೂ ಕುತೂಹಲಕಾರಿ ಆಗಿದೆ.
ಚಂದ್ರನ ಮೇಲೆ ರಾಕೆಟ್ ಲ್ಯಾಂಡ್ ಆಗಿ, ಚಂದ್ರನ ಮೇಲೆ ಕಾಲಿಟ್ಟ ಮೊದಲ ಕನ್ನಡಿಗ ನರಸಿಂಹರಾಜು ಆಗಿದ್ದಾರೆ. ಅವರು, ಚಂದ್ರನ ಮೇಲೆ ಭೂಮಿಯ ಮೇಲೆ ಸಾಮಾನ್ಯವಾಗಿ ನಿಲ್ಲುವಂತೆ ನಿಲ್ಲಲು, ನಡೆದಾಡಲು ಆಗುವುದಿಲ್ಲ ಎನ್ನುವ ಪರಿಕಲ್ಪನೆ ತಿಳಿಸಿದ್ದರು.
ಕನ್ನಡದ ಪ್ರಖ್ಯಾತ ನಿರ್ದೇಶಕ ಬಿ.ಆರ್. ಪಂತುಲು ಅವರ ಮಕ್ಕಳ ರಾಜ್ಯ ಸಿನಿಮಾದಲ್ಲಿ. ಚಂದ್ರನ ಮೇಲೆ ಕಾಲಿಟ್ಟ ಮೊದಲ ನಟರು ನಮ್ಮ ನರಸಿಂಹರಾಜು ಮತ್ತು ಎಂ.ಎಸ್.ಉಮೇಶ್ ಆಗಿದ್ದಾರೆ. ಅದರಲ್ಲಿ ನರಸಿಂಹರಾಜು ಕಾಲವಾಗಿದ್ದರೆ, ಉಮೇಶ್ ಈಗಲೂ ನಮ್ಮೊಂದಿಗಿದ್ದಾರೆ.
ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರು 1962 ರಲ್ಲಿ ತಮ್ಮ ಭಾಷಣದಲ್ಲಿ "ನಾವು ಚಂದ್ರನಿಗೆ ಹೋಗಲು ಆಯ್ಕೆ ಮಾಡುತ್ತೇವೆ" ಎಂದಿದ್ದರು. ಅಮೇರಿಕಾದ ಗಗನಯಾತ್ರಿಗಳು 1969 ರಲ್ಲಿ ಚಂದ್ರನ ಮೇಲೆ ಇಳಿದಿದ್ದರು. ಆದರೆ, ಕನ್ನಡ ಚಲನಚಿತ್ರೋದ್ಯಮ 1960 ರಲ್ಲಿ ಪ್ರೇಕ್ಷಕರನ್ನು ಚಂದ್ರನತ್ತ ಕಳುಹಿಸಿತ್ತು.
'ಚಂದ್ರನ ಮೇಲೆ ಕಾಲಿಟ್ಟ' ಮೊದಲ ನಟರು ನಮ್ಮ ನರಸಿಂಹರಾಜು ಮತ್ತು ಎಂ.ಎಸ್.ಉಮೇಶ್ ಆಗಿದ್ದಾರೆ. ಅದರಲ್ಲಿ ನರಸಿಂಹರಾಜು ಕಾಲವಾಗಿದ್ದರೆ, ಉಮೇಶ್ ಈಗಲೂ ನಮ್ಮೊಂದಿಗಿದ್ದಾರೆ.