ಪಿಂಕ್ ಸೀರೆಯಲ್ಲಿ ಅಪ್ಸರೆಯಂತೆ ಕಂಡ ಕಾಜೋಲ್, 'ನಿಮಗೆ ವಯಸ್ಸೇ ಆಗಿಲ್ಲ' ಅಂದ್ರು ಫ್ಯಾನ್ಸ್!
ಶುಕ್ರವಾರ ಮುಂಬೈನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಕಾಜೋಲ್ ಅವರ ಅಂದಕ್ಕೆ ಅವರ ಅಭಿಮಾನಿಗಳು ಮನಸೋತಿದ್ದಾರೆ. ಗುಲಾಬಿ ಬಣ್ಣದ ಸೀರೆಯುಟ್ಟು ಬಂದಿದ್ದ ಕಾಜೋಲ್ ಬ್ಯೂಟಿಗೆ ಸಾಟಿಯೇ ಇಲ್ಲ ಎಂದಿದ್ದಾರೆ.
ನಟಿ ಕಾಜೋಲ್ ಶುಕ್ರವಾರ ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಸೀರೆಯ ಮೇಲೆ ಎಲ್ಲರ ಕಣ್ಣುಬಿದ್ದಿದೆ.
ಪಿಂಕ್ ಸೀರೆಯುಟ್ಟು ಸಮಾರಂಭಕ್ಕೆ ಬಂದಿದ್ದ ಅಜಯ್ ದೇವಗನ್ ಅವರ ಪತ್ನಿ ಕಾಜೋಲ್ ಅವರ ಅಂದವನ್ನು ಅವರ ಅಭಿಮಾನಿಗಳು ಮನಸಾರೆ ಹೊಗಳಿದ್ದಾರೆ.
ಬಹುಶಃ ಈ ಸೀರೆ ನಿಮಗೆ ಕಾಣುವಷ್ಟು ಅಂದವಾಗಿ ಮತ್ಯಾರಿಗೂ ಕಾಣೋದಿಲ್ಲ ಎಂದು ಅಭಿಮಾನಿಗಳು ಕಾಜೋಲ್ ಅವರ ಗ್ಲಾಮರ್‌ಗೆ ಕಾಮೆಂಟ್ ಮಾಡಿದ್ದಾರೆ.
ಕಾಜೋಲ್ ಅವರಿಗೆ 49 ವರ್ಷ. ಆದರೆ, ಈ ಸೀರೆಯಲ್ಲಿ ನಿಮಗೆ 49 ವರ್ಷವೆಂದರೆ ಯಾರೂ ನಂಬೋದಿಲ್ಲ ಎಂದು ಫ್ಯಾನ್ಸ್‌ಗಳು ಬರೆದುಕೊಂಡಿದ್ದಾರೆ.
ಕಾಜೋಲ್ ಈಗಲ್ಲ ಪ್ರತಿ ಬಾರಿಯೂ ಖಾಸಗಿ ಕಾರ್ಯಕ್ರಮಕ್ಕೆ ಹಾಜರಾಗುವಾಗ ಬಹಳ ವಿಶೇಷವಾಗಿ ಬರುತ್ತಾರೆ. ಅವರನ್ನು ಸೀರೆಯಲ್ಲಿ ನೋಡೋದೆ ಚಂದ ಎಂದು ಬರೆದಿದ್ದಾರೆ.
ಈ ಸೀರೆಯಲ್ಲಿ ನಿಮ್ಮನ್ನು ಕಂಡರೆ ನಿಮಗೆ ವಯಸ್ಸಾಗಿದೆ ಎಂದು ಯಾರೂ ಕೂಡ ಹೇಳೋಕೆ ಸಾಧ್ಯವಿಲ್ಲ ಎಂದು ಬರೆಯುವ ಮೂಲಕ ಕಾಜೋಲ್ ಅವರ ಲುಕ್‌ಗೆ ಫಿದಾ ಆಗಿದ್ದಾರೆ.
1999ರಿಂದಲೂ ಬಾಲಿವುಡ್‌ನಲ್ಲಿರುವ ಕಾಜೋಲ್ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 2023ರಲ್ಲಿ ಇವರು ಲಸ್ಟ್ ಸ್ಟೋರಿಸ್ 2 ಚಿತ್ರದಲ್ಲಿ ನಟಿಸಿದ್ದರು.
ಲಸ್ಟ್ ಸ್ಟೋರೀಸ್ 2 ಚಿತ್ರದಲ್ಲೂ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದ ಕಾಜೋಲ್ ಅವರ ಅಭಿನಯವನ್ನೂ ಅಭಿಮಾನಿಗಳು ಮೆಚ್ಚಿಕೊಂಡಿದ್ದರು.
ಕಾಜೋಲ್ ಅವರ ಮತ್ಯಾವ ಚಿತ್ರಗಳು ಕೂಡ ಈ ವರ್ಷ ಬಿಡುಗಡೆಯಾಗುವ ಲಿಸ್ಟ್‌ನಲ್ಲಿಲ್ಲ. ಸರ್ಜಮೀನ್ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.
ಅದರೊಂದಿಗೆ ನೆಟ್‌ಫ್ಲಿಕ್ಸ್‌ನ ವೆಬ್ ಸಿರೀಸ್ ದೋ ಪತ್ತಿಯಲ್ಲೂ ಕಾಜೋಲ್ ನಟಿಸುತ್ತಿದ್ದು, ಬಿಡುಗಡೆಯ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.
ನ್ಯಾಸಾ ಹಾಗೂ ಯುಗ್ ಎನ್ನುವ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಕಾಜೋಲ್ ಹೊಂದಿದ್ದಾರೆ. ನ್ಯಾಸಾ ಈಗಾಗಲೇ ಮಾಡೆಲಿಂಗ್ ಜಗತ್ತಿನಲ್ಲಿ ಗಮನಸೆಳೆಯುತ್ತಿದ್ದಾರೆ.