ಬ್ಯಾಡ್ಮಿಂಟನ್ ಅಂಗಳದಿಂದ ಬಾಲಿವುಡ್ ಆಕಾಶಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ!
ಒಂದು ಕಾಲದಲ್ಲಿ ಸದಾ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಕಾಲ ಕಳೆಯುತ್ತಿದ್ದ ಪ್ರಖ್ಯಾತ ಪ್ರಕಾಶ್ ಪಡುಕೋಣೆ ಮಗಳು ದೀಪಿಕಾ ಪಡುಕೋಣೆ. ರಕ್ತದಲ್ಲಿಯೇ ಬ್ಯಾಡ್ಮಿಂಟನ್ ಜೀನ್‌ನಿಂದ ಈಕೆ ರಾಷ್ಟ್ರಮಟ್ಟದವರೆಗೂ ಆಡಿ ಭರವಸೆ ಹುಟ್ಟಿಸಿದ್ದಳು. ಆದರೆ ಗ್ಲಾಮರ್ ಪ್ರಪಂಚದಲ್ಲಿ ಸಾಧಿಸುವ ಕನಸು ದೀಪಿಕಾರನ್ನು ಆಟದಿಂದ ಮತ್ತೊಂದು ದಿಕ್ಕಿಗೆ ಸೆಳೆಯಿತು. ಮಾಡೆಲ್ ಆಗಿ ಜರ್ನಿ ಆರಂಭಿಸಿ, ಬಾಲಿವುಡ್ ತಾರೆಯಾಗಿ ಮಿಂಚುತ್ತಿದ್ದಾರೆ ಇಂದು. ಕನ್ನಡದ ಐಶ್ವರ್ಯಾದಲ್ಲಿ ಉಪೇಂದ್ರ ಅವರೊಂದಿಗೆ ನಟಿಸಿ, ಓಂ ಶಾಂತಿ ಓಂ ಮೂಲಕ ಬಾಲಿವುಡ್ ಪ್ರವೇಶಿಸಿದರು. ಇವರು ನಟನೆ ಕಲಿತ್ತಿದ್ದು ಅನುಪಮ್ ಖೇರ್‌ನಿಂದವಂತೆ.
ದೀಪಿಕಾ ಹುಟ್ಟಿದ್ದು ಡೆನ್ಮಾರ್ಕ್‌ನಲ್ಲಿ. ಬೆಳೆದಿದ್ದು ಬೆಂಗಳೂರಲ್ಲಿ. ತಂದೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ. ಕನ್ನಡದ ಐಶ್ವರ್ಯಾ ಇವರ ಚೊಚ್ಚಲ ಚಿತ್ರ.
ಆರ್‌ಸಿಬಿ ಮಾಲೀಕ ವಿಜಯ್ ಮಲ್ಯ ಮಗ ಸಿದ್ಧಾರ್ಥ್ ಮಲ್ಯನ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದರು.
ಒಂದು ಕಾಲದಲ್ಲಿ ಸಹ ನಟ ರಣಬೀರ್ ಕಪೂರ್ ಜೊತೆ ರಿಲೇಶನ್‌ಶಿಪ್ ಬ್ರೇಕ್ ಆದಾಗ ಖಿನ್ನತೆಯಿಂದ ಬಳಲುತ್ತಿದ್ದರು. ಅದನ್ನು ಗೆದ್ದು, ಇದೀಗ ಅಂತ ಮಾನಸಿಕ ರೋಗದಿಂದ ಬಳಲುತ್ತಿರುವವರಿಗಾಗಿ ಎನ್‌ಜಿಒ ಆರಂಭಿಸಿದ್ದಾರೆ.
ಮಾನಸಿಕ ಖಿನ್ನತೆ ವಿರುದ್ಧ ಹೋರಾಡುವ ಸರ್ಕಾರೇತರ ಸಂಸ್ಥೆ 'Live love laugh' ನೆಡೆಸುತ್ತಿರುವ ಇವರ ಜಾಗೃತಿ ಮೂಡಿಸುವ ಕೆಲಸಕ್ಕಾಗಿ ಕ್ರಿಸ್ಟಲ್ ಅವಾರ್ಡ್ ದೊರೆತ್ತಿದೆ. ಈ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದ ಮೊದಲ ಭಾರತೀಯ ನಟಿ ಇವರು.
2018 ರಲ್ಲಿ, ಪ್ರಪಂಚದ 100 ಅತಿ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಒಬ್ಬರಾಗಿದ್ದರು ಡಿಂಪಲ್ ಕ್ವೀನ್ ದೀಪಿಕಾ.
16 ಬ್ರಾಂಡ್‌ಗಳಿಗೆ ರಾಯಭಾರಿ ಆಗಿರುವ ಇವರು ತನ್ನದೇ ಕ್ಲೋತಿಂಗ್ ಬ್ರ್ಯಾಂಡ್ 'ಅಲ್ ಎಬೌಟ್ ಯು' ಅನ್ನು ನೆಡೆಸುತ್ತಿದ್ದಾರೆ.
2018ರಲ್ಲಿ ಸಹ ನಟ ರಣವೀರ್ ಸಿಂಗ್‌ನ್ನು ವರಿಸಿದ ಬಾಜಿರಾವ್‌ನ ಮಸ್ತಾನಿ ನಟಿ.
ಹಲವು ಹಿಟ್ ಚಿತ್ರಗಳನ್ನು ನೀಡಿರುವ ಈ ಚೆಲುವೆ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಲ್ಲಿ ಒಬ್ಬರು.ತಮ್ಮ ಚಿತ್ರ ಚಪಾಕ್ ಮೂಲಕ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ ಬಾಲಿವುಡ್ ಬೆಡಗಿ.
ಬ್ಯಾಕ್ ಟು ಬ್ಯಾಕ್ 4 ಬ್ಲ್ಯಾಕ್ ಬಸ್ಟರ್ ಸಿನಿಮಾಗಳ ಹೆಗ್ಗಳಕೆಯ ಇವರು 3 ಫಿಲ್ಮಂಫೇರ್ ಆವಾರ್ಡ್‌ಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಈ ನಟಿ.
ಕಪಿಲ್‌ದೇವ್ ಜೀವನಾಧಾರಿತ 83 ದೀಪಿಕಾ ಪಡುಕೋಣೆಯ ಮುಂದಿನ ಚಿತ್ರ. ಈ ಚಿತ್ತದಲ್ಲಿ ನಾಯಕನ ಪಾತ್ರದಾರಿ ಪತಿ ರಣವೀರ್ ಸಿಂಗ್.