ನನ್ನ ಗಂಡನ ಸಿನಿಮಾಗೆ ಮಾತ್ರ ಹೀಗ್ಯಾಕೆ? ಯಾಕೆ ಬರಲ್ಲಾ ಆ ಮನಸ್ಸು: ಜ್ಯೋತಿಕಾ ಬೇಸರ
Actress Jyothika Upset: ನಟಿ ಜ್ಯೋತಿಕಾ ಸಂದರ್ಶನವೊಂದರಲ್ಲಿ, ತಮ್ಮ ಪತಿ ಸೂರ್ಯ ಅವರ ಸಿನಿಮಾಗಳು ಮಾತ್ರ ಕಠಿಣ ವಿಮರ್ಶೆಗಳನ್ನು ಎದುರಿಸುತ್ತಿವೆ ಎಂದು ಹೇಳಿದ್ದಾರೆ.

ನಟ ಸೂರ್ಯ ಅವರ ಪತ್ನಿ ಜ್ಯೋತಿಕಾ ಪ್ರಸ್ತುತ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇವರು ನಟಿಸಿರುವ ಡಬ್ಬಾ ಕಾರ್ಟೆಲ್ ಎಂಬ ವೆಬ್ ಸರಣಿ ಇತ್ತೀಚೆಗೆ ಬಿಡುಗಡೆಯಾಯಿತು. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ ವೆಬ್ ಸರಣಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಈ ವೆಬ್ ಸರಣಿಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಜ್ಯೋತಿಕಾ ತಮ್ಮ ಪತಿ ಸೂರ್ಯ ಅವರ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
ನಟಿ ಜ್ಯೋತಿಕಾ
ನಟ ಸೂರ್ಯ ನಟನೆಯ ಕೊನೆಯದಾಗಿ ಬಿಡುಗಡೆಯಾಗಿ ಸೋತ ಕಂಗುವಾ ಸಿನಿಮಾ ಬಿಡುಗಡೆಯಾದಾಗಲೇ, ಆ ಚಿತ್ರದ ಬಗ್ಗೆ ಬಂದ ನೆಗೆಟಿವ್ ವಿಮರ್ಶೆಗಳು ಮಿತಿಮೀರಿದೆ ಎಂದು ಟೀಕಿಸಿದ್ದರು. ಸಿನಿಮಾದಲ್ಲಿ ಕೆಲವು ನ್ಯೂನತೆಗಳಿದ್ದರೂ, ಅದರಲ್ಲಿರುವ ಒಳ್ಳೆಯ ಅಂಶಗಳ ಬಗ್ಗೆ ಯಾರೂ ಮಾತನಾಡಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಸದ್ಯ ಡಬ್ಬಾ ಕಾರ್ಟೆಲ್ ಪ್ರಮೋಷನ್‌ನಲ್ಲೂ ತಮ್ಮ ಪತಿ ಸಿನಿಮಾಗಳ ಮೇಲೆ ಇಡುವ ವಿಮರ್ಶೆಗಳ ಬಗ್ಗೆ ಮತ್ತು ಅದು ಮಾನಸಿಕವಾಗಿ ತೊಂದರೆ ನೀಡಿದೆ ಎಂದು ಹೇಳಿದ್ದಾರೆ.
ನೆಗೆಟಿವ್ ವಿಮರ್ಶೆಯ ಬಗ್ಗೆ ಜ್ಯೋತಿಕಾ
ಅದರಲ್ಲಿ ಅವರು ಹೇಳಿದ್ದು: “ಕೆಟ್ಟ ಸಿನಿಮಾಗಳು ನನಗೆ ಸಮಸ್ಯೆ. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ಅನೇಕ ಕೆಟ್ಟ ಸಿನಿಮಾಗಳನ್ನು ನಾನು ನೋಡಿದ್ದೇನೆ. ಆದರೆ ಆ ಸಿನಿಮಾಗಳನ್ನೆಲ್ಲಾ ದೊಡ್ಡ ಮನಸ್ಸಿನಿಂದ ವಿಮರ್ಶೆ ಮಾಡ್ತಾರೆ. ಆದರೆ ನನ್ನ ಗಂಡ ನಟಿಸಿದ ಸಿನಿಮಾಗಳ ವಿಷಯಕ್ಕೆ ಬಂದರೆ, ಆ ವಿಮರ್ಶೆಗಳು ತುಂಬಾ ಕಠಿಣವಾಗಿರುವುದನ್ನು ನಾನು ಗಮನಿಸಿದ್ದೇನೆ ಎಂದು ಜ್ಯೋತಿಕಾ ಹೇಳಿದ್ದಾರೆ.
ಜ್ಯೋತಿಕಾ ಸೂರ್ಯ
ಮುಂದುವರೆದು ಮಾತನಾಡಿದ ಅವರು, ಸಿನಿಮಾದ ಕೆಲವು ಭಾಗದಲ್ಲಿ ಚೆನ್ನಾಗಿಲ್ಲದೆ ಇರಬಹುದು. ಆದರೆ ಒಟ್ಟಾರೆ ಸಿನಿಮಾಕ್ಕಾಗಿ ತುಂಬಾ ಕಷ್ಟಪಟ್ಟು ದುಡಿದಿದ್ದಾರೆ. ಕೆಲವು ಕೆಟ್ಟ ಸಿನಿಮಾಗಳಿಗಿಂತ ಸೂರ್ಯ ಅವರ ಸಿನಿಮಾಗಳು ಕಠಿಣ ವಿಮರ್ಶೆಗಳನ್ನು ಎದುರಿಸುವುದನ್ನು ನೋಡಿದಾಗ ಅದು ನನ್ನನ್ನು ಮಾನಸಿಕವಾಗಿ ತುಂಬಾ ಕಾಡಿತು. ಮಾಧ್ಯಮಗಳು ಇದನ್ನು ಗಮನಿಸದಿದ್ದಕ್ಕೆ ನಾನು ತುಂಬಾ ಬೇಸರಗೊಂಡಿದ್ದೇನೆ” ಎಂದು ತಮ್ಮ ಮನಸ್ಸಿನಲ್ಲಿದ್ದ ಎಲ್ಲವನ್ನೂ ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.