MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಫ್ಲಾಪ್ ನಟನ ಮೇಲೆ ಕ್ರಶ್ ಎಂದ ನಟಿ ಅನನ್ಯ: ಆ ಯಂಗ್ ಹೀರೋ ಯಾರು? ಏನಿದು ಸೀಕ್ರೆಟ್!

ಫ್ಲಾಪ್ ನಟನ ಮೇಲೆ ಕ್ರಶ್ ಎಂದ ನಟಿ ಅನನ್ಯ: ಆ ಯಂಗ್ ಹೀರೋ ಯಾರು? ಏನಿದು ಸೀಕ್ರೆಟ್!

ಟಾಲಿವುಡ್‌ನ ಯುವ ನಟಿ ಅನನ್ಯ ನಾಗಳ್ಳ ಅವರು ತಮ್ಮ ಮೊದಲ ಕ್ರಶ್ ಯಾರೆಂದು ಬಹಿರಂಗಪಡಿಸಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು ಸಿನಿಮಾಗಳೆಂದರೆ ಇಷ್ಟವಂತೆ, ಆದರೆ ತಮ್ಮ ಕ್ರಶ್ ಮಾತ್ರ ಒಬ್ಬ ಫ್ಲಾಪ್ ಹೀರೋ ಮೇಲಂತೆ. ಹಾಗಾದ್ರೆ ಆ ನಟ ಯಾರು?

2 Min read
Author : Govindaraj S
Published : May 16 2026, 06:19 PM IST
Share this Photo Gallery
  • FB
  • TW
  • Linkdin
  • Whatsapp
15
ಸಿನಿಮಾಗಳಲ್ಲಿ ಬ್ಯುಸಿ
Image Credit : Social Media

ಸಿನಿಮಾಗಳಲ್ಲಿ ಬ್ಯುಸಿ

ಟಾಲಿವುಡ್‌ನಲ್ಲಿ ವಿಶೇಷ ಗುರುತು ಮೂಡಿಸಿಕೊಂಡಿರುವ ಯುವ ತಾರೆ ಅನನ್ಯ ನಾಗಳ್ಳ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿ ವೃತ್ತಿ ಆರಂಭಿಸಿದ ಅನನ್ಯ, ನಟನೆಯ ಮೇಲಿನ ಆಸಕ್ತಿಯಿಂದ ಶಾರ್ಟ್ ಫಿಲ್ಮ್‌ಗಳ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಬಳಿಕ ‘ಮಲ್ಲೇಶಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿ, ತಮ್ಮ ಸಹಜ ನಟನೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

Add Asianetnews Kannada as a Preferred SourcegooglePreferred
25
ದೊಡ್ಡ ತಿರುವು
Image Credit : our own

ದೊಡ್ಡ ತಿರುವು

ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಅನನ್ಯ ನಾಗಳ್ಳ ಭಾರಿ ಮನ್ನಣೆ ಗಳಿಸಿದರು. ಈ ಚಿತ್ರದ ನಂತರ ಅವರಿಗೆ ಟಾಲಿವುಡ್‌ನಲ್ಲಿ ಸಾಲು ಸಾಲು ಅವಕಾಶಗಳು ಬಂದವು. ಈ ಸಿನಿಮಾ ಅನನ್ಯ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಗ್ಲಾಮರ್ ಜೊತೆಗೆ ನಟನೆಯಲ್ಲೂ ತಮ್ಮ ಪ್ರತಿಭೆ ತೋರಿಸುತ್ತಾ ಯುವ ನಟಿಯರಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ.

Related Articles

Related image1
3 ಮದುವೆ, 17 ವರ್ಷ ಹಾಳುಮಾಡಿಕೊಂಡೆ: ಜೀವನದ ಕಹಿ ಸತ್ಯ ಬಿಚ್ಚಿಟ್ಟ ನಟಿ ಮೀರಾ!
Related image2
ಗಂಡನಿಂದ ದೂರ ಆಗ್ತಿದ್ದಾರಾ ಕೆಜಿಎಫ್ ಖ್ಯಾತಿಯ ನಟಿ? ಎಲ್ಲಾ ಸುಳ್ಳು ಸುದ್ದಿ ಎಂದ ಮೌನಿ ರಾಯ್!
35
ಮೊದಲ ಕ್ರಶ್ ಟಾಲಿವುಡ್ ನಟ
Image Credit : Instagram

ಮೊದಲ ಕ್ರಶ್ ಟಾಲಿವುಡ್ ನಟ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅನನ್ಯ, ತಮ್ಮ ವೈಯಕ್ತಿಕ ಜೀವನದ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿಕ್ಕಂದಿನಿಂದ ಮಹೇಶ್ ಬಾಬು, ಅಲ್ಲು ಅರ್ಜುನ್ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದರೂ, ತನ್ನ ಮೊದಲ ಕ್ರಶ್ ಟಾಲಿವುಡ್ ನಟ ನಾಗ ಶೌರ್ಯ ಎಂದು ಹೇಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

45
ಸರಾಸರಿ ಯಶಸ್ಸನ್ನೂ ಕಂಡಿಲ್ಲ
Image Credit : others

ಸರಾಸರಿ ಯಶಸ್ಸನ್ನೂ ಕಂಡಿಲ್ಲ

ನಾಗ ಶೌರ್ಯ ಸದ್ಯ ಸತತ ಸೋಲುಗಳಿಂದ ಕರಿಯರ್‌ನಲ್ಲಿ ಸಂಕಷ್ಟದಲ್ಲಿದ್ದಾರೆ. 'ಊಹಲು ಗುಸಗುಸಲಾಡೆ', 'ಛಲೋ' ನಂತಹ ಚಿತ್ರಗಳ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ನಾಗ ಶೌರ್ಯ ನಟಿಸಿದ ಯಾವುದೇ ಸಿನಿಮಾ ಸರಾಸರಿ ಯಶಸ್ಸನ್ನೂ ಕಂಡಿಲ್ಲ. ಮದುವೆಯ ನಂತರವಂತೂ ಅವರು ಕಾಣಿಸಿಕೊಳ್ಳುವುದೇ ಕಡಿಮೆಯಾಗಿದೆ. ಇತ್ತೀಚೆಗೆ 'ಬ್ಯಾಡ್ ಬಾಯ್ ಕಾರ್ತಿಕ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದರೂ, ಆ ಸಿನಿಮಾ ಯಾವಾಗ ಬಂದು ಹೋಯಿತು ಎನ್ನುವುದೇ ಹಲವರಿಗೆ ತಿಳಿದಿಲ್ಲ. ಇದೇ ನಟನೇ ತನ್ನ ಮೊದಲ ಕ್ರಶ್ ಎಂದು ಅನನ್ಯ ನಾಗಳ್ಳ ಬಹಿರಂಗಪಡಿಸಿದ್ದಾರೆ.

55
ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ
Image Credit : Asianet News

ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ

ಮದುವೆ ಬಗ್ಗೆ ಮಾತನಾಡಿದ ಅನನ್ಯ, ತನಗೆ ಸಿಗುವ ಹುಡುಗ ಪ್ರಾಮಾಣಿಕವಾಗಿರಬೇಕು ಎಂದು ಬಯಸುವುದಾಗಿ ತಿಳಿಸಿದ್ದಾರೆ. ಸದ್ಯಕ್ಕೆ ಸರಿಯಾದ ವ್ಯಕ್ತಿಗಾಗಿ ಕಾಯುತ್ತಿದ್ದೇನೆ ಎಂದಿರುವ ಅವರು, ಸಿನಿಮಾ ರಂಗದವರ ಜೊತೆ ಸಂಬಂಧದ ವಿಚಾರದಲ್ಲಿ ಸ್ವಲ್ಪ ಭಯವಿದೆ ಎಂದಿದ್ದಾರೆ. ಚಿತ್ರರಂಗದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ತಮಗೆ ಇಲ್ಲಿಯವರೆಗೆ ಯಾವುದೇ ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಟ್ರೋಲ್, ನೆಗೆಟಿವ್ ಕಾಮೆಂಟ್‌ಗಳನ್ನು ಹೆಚ್ಚು ತಲೆಕೆಡಿಸಿಕೊಳ್ಳದೆ, ತನ್ನ ಕೆಲಸದ ಮೇಲೆ ಸಂಪೂರ್ಣ ಗಮನ ಹರಿಸುವುದಾಗಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಟಿ
ಮನರಂಜನಾ ಸುದ್ದಿ
ಟಾಲಿವುಡ್
ಸುದ್ದಿ

Latest Videos
Recommended Stories
Recommended image1
Thalapathy Vijay ಸಿಎಂ ಆಗ್ತಿದ್ದಂತೆ ನಟಿ ತ್ರಿಶಾ ಕೃಷ್ಣನ್‌ಗೆ ಶುಕ್ರದೆಸೆ; ಕಾಲಿಟ್ಟಲ್ಲೆಲ್ಲ ಜಯಭೇರಿ!
Recommended image2
CM Vijay Gift to Trisha: ಒಲವಿನ ಗೆಳತಿಗೆ ಭಾರೀ ಉಡುಗೊರೆ ಕೊಟ್ಟ ಸಿಎಂ ವಿಜಯ್; ದಳಪತಿ ದರ್ಬಾರ್‌ಗೆ ಹೌಹಾರಿದ ತಮಿಳುನಾಡು!
Recommended image3
ಸಿನಿಮಾಗೆ ಕಥೆ ಮುಖ್ಯವೇ, ಸೀಕ್ವೆಲ್ ಮುಖ್ಯವೇ? ಇಲ್ಲಿದೆ ಕನ್ನಡ ಚಿತ್ರರಂಗದ ಹೊಸ ಟ್ರೆಂಡ್ ವಿಶ್ಲೇಷಣೆ!
Related Stories
Recommended image1
3 ಮದುವೆ, 17 ವರ್ಷ ಹಾಳುಮಾಡಿಕೊಂಡೆ: ಜೀವನದ ಕಹಿ ಸತ್ಯ ಬಿಚ್ಚಿಟ್ಟ ನಟಿ ಮೀರಾ!
Recommended image2
ಗಂಡನಿಂದ ದೂರ ಆಗ್ತಿದ್ದಾರಾ ಕೆಜಿಎಫ್ ಖ್ಯಾತಿಯ ನಟಿ? ಎಲ್ಲಾ ಸುಳ್ಳು ಸುದ್ದಿ ಎಂದ ಮೌನಿ ರಾಯ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved