UPSC Result 2023: ದೇಶಕ್ಕೆ ಟಾಪರ್ ಈ 10 ಮಂದಿ, ಬಹುತೇಕರು ಸರ್ಕಾರಿ ಸೇವೆಯಲ್ಲಿರುವವರೇ!
ಯುಪಿಎಸ್‌ಸಿ 2023 ರ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ. 2023 ಯುಪಿಎಸ್‌ಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ಆಯೋಗದ ವೆಬ್‌ಸೈಟ್ https://upsc.gov.in/ ರಿಜಿಸ್ಟರ್ ನಂಬರ್ ಮತ್ತು ಹೆಸರಿನ ಪ್ರಕಾರ ಚೆಕ್ ಮಾಡಿಕೊಳ್ಳಬಹುದು. ಇಲ್ಲಿ ಟಾಪ್ 10 ಅಭ್ಯರ್ಥಿಗಳ ಬಗ್ಗೆ ನೀಡಲಾಗಿದೆ.
2022-23 ರ ಯುಪಿಎಸ್‌ಸಿ ಸಿಎಸ್‌ಇ ಅಂತಿಮ ಪರೀಕ್ಷೆಗಳಲ್ಲಿ ದೇಶಕ್ಕೆ ಟಾಪರ್ ಆಗಿ ಆದಿತ್ಯ ಶ್ರೀವಾತ್ಸವ್ ಹೊರಹೊಮ್ಮಿದ್ದಾರೆ. ವರದಿಗಳ ಪ್ರಕಾರ, ಆದಿತ್ಯ ಅವರು ಉತ್ತರ ಪ್ರದೇಶದ ಲಕ್ನೋ ಮೂಲದವರಾಗಿದ್ದು, ಐಐಟಿ ಕಾನ್ಪುರ ಚಿನ್ನದ ಪದಕ ವಿಜೇತರಾಗಿದ್ದಾರೆ. ಐಐಟಿ ಕಾನ್ಪುರದಲ್ಲಿ ಬಿಟೆಕ್ ಮತ್ತು ಎಂಟೆಕ್ ಮಾಡಿದ್ದಾರೆ. 12ನೇ ತರಗತಿಯಲ್ಲೂ ಟಾಪರ್ ಆಗಿ 95% ಅಂಕಗಳನ್ನು ಗಳಿಸಿದ್ದರು. ಪ್ರಸ್ತುತ ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇನ್ನು ಅನಿಮೇಶ್ ಪ್ರಧಾನ್ ಅವರು ಎರಡನೇ ರ್ಯಾಂಕ್ ಪಡೆದಿದ್ದಾರೆ. NIT ರೂರ್ಕೆಲಾದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ (B Tech.) ಪದವಿ ಮಾಡಿರುವ ಅನಿಮೇಶ್ ಪ್ರಧಾನ್ ಅವರದ್ದು ಸಮಾಜಶಾಸ್ತ್ರ ಐಚ್ಛಿಕ ವಿಷಯವಾಗಿದೆ. ಮೂಲತಃ ಒಡಿಶಾದವರಾಗಿದ್ದಾರೆ. ಸದ್ಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಮಾಹಿತಿ ವ್ಯವಸ್ಥೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಡೋಣೂರು ಅನನ್ಯಾ ರೆಡ್ಡಿ ಅವರು ದೇಶಕ್ಕೆ ಮೂರನೇ ಟಾಪರ್ ಆಗಿದ್ದು, ಮಹಿಳೆಯರಲ್ಲಿ ಮೊದಲ ಟಾಪರ್ ಆಗಿದ್ದಾರೆ. ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಅನನ್ಯಾ ರೆಡ್ಡಿ ಮೊದಲ ಪ್ರಯತ್ನದಲ್ಲಿಯೇ ಈ ಸಾಧನೆ ಮಾಡಿದ್ದಾಳೆ. ದಿಲ್ಲಿ ವಿಶ್ವವಿದ್ಯಾಲಯದ ಘಟಕ ಮಿರಾಂಡಾ ಹೌಸ್ ಕಾಲೇಜಿನಿಂದ ಭೂಗೋಳಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಯುಪಿಎಸ್‌ಸಿ ಪರೀಕ್ಷೆ ಬರೆಯಲು 12 ರಿಂದ 14 ಗಂಟೆ ಓದಿಗೆ ಸಮಯ ಮೀಸಲಿಟ್ಟಿದ್ದರಂತೆ.
ಸಿದ್ಧಾರ್ಥ್ ರಾಮ್‌ಕುಮಾರ್ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೆ 4ನೇ ಟಾಪರ್ ಆಗಿದ್ದಾರೆ. ಐದು ಪ್ರಯತ್ನಗಳ ಬಳಿಕ ಈ ಸಾಧನೆ ಮಾಡಿದ್ದಾರೆ. ಇವರು ಕೇಳದ ಕೊಚ್ಚಿ ಮೂಲದವರಾಗಿದ್ದು, ಈಗಾಗಲೇ ಇವರು ವೆಸ್ಟ್ ಬೆಂಗಾಲ್ ಕ್ರೇಡ್‌ನಲ್ಲಿ ಐಪಿಎಸ್ ಆಫೀಸರಾಗಿದ್ದಾರೆ. ತಿರುವನಂತಪುರಂನ ಕಾಲೇಜ್ ಆಫ್ ಆರ್ಕಿಟೆಕ್ಚರ್‌ನಿಂದ ಆರ್ಕಿಟೆಕ್ಚರ್‌ನಲ್ಲಿ ಬ್ಯಾಚುಲರ್ಸ್ ಪದವಿ ಪಡೆದಿದ್ದಾರೆ.
ಗುರುಗ್ರಾಮ್ (ಹರಿಯಾಣ) ಹುಡುಗಿ ರುಹಾನಿ AIR 5 ರ್ಯಾಂಕ್‌ನೊಂದಿಗೆ UPSC ಅನ್ನು ಭೇದಿಸಿದ್ದಾಳೆ. ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿರುವ ಈಕೆ IGNOU ನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಮಾಡಿದ್ದಾಳೆ. ನಂತರ ಭಾರತೀಯ ಅರ್ಥಶಾಸ್ತ್ರ ಸೇವೆಗೆ ಸೇರಿಕೊಂಡರು. ಮೂರು ವರ್ಷಗಳ ಸೇವೆ ಬಳಿಕ. NITI ಆಯೋಗದಲ್ಲಿ 2 ವರ್ಷಗಳ ಕಾಲ ನಿಯೋಜಿಸಲಾಗಿತ್ತು. ನಂತರ ಅವರು ಭಾರತೀಯ ಪೊಲೀಸ್ ಸೇವೆಗೆ ಸೇರಿದರು.
ದೆಹಲಿ ಹುಡುಗಿ ಸೃಷ್ಟಿ ದಬಾಸ್ ಯುಪಿಎಸ್‌ಸಿ ನಲ್ಲಿ 6 ನೇ ಟಾಪರ್ ಆಗಿದ್ದಾರೆ. ಪ್ರಸ್ತುತ ಅವರು ಮುಂಬೈಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಮತ್ತು ಪದವಿಯನ್ನು ದೆಹಲಿಯಲ್ಲಿ ಮುಗಿಸಿರುವ ಸೃಷ್ಠಿ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಸಚಿವಾಲಯದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಅನ್ಮೋಲ್ ರಾಥೋಡ್ ಈಗ ಈಕೆಗೆ 24 ವರ್ಷ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಈಕೆ ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆ ಪಾಸ್ ಮಾಡಿದ್ದಾಳೆ. ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಬಿಎ ಎಲ್ಎಲ್‌ಬಿ ಪದವಿ ಮಾಡಿದ್ದಾರೆ. 2021 ರಲ್ಲಿ ಪದವಿ ಪೂರ್ಣಗೊಳಿಸಿ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆ (JKAS) ಪರೀಕ್ಷೆ ಪಾಸ್ ಆಗಿ ಅದಕ್ಕಾಗಿ ತರಬೇತಿ ಪಡೆಯುತ್ತಿದ್ದರು.
ತನ್ನ ನಾಲ್ಕನೇ ಪ್ರಯತ್ನದಲ್ಲಿ, 24 ವರ್ಷದ ನೌಶೀನ್ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ನ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 9 ನೇ ಟಾಪರ್ ಆಗಿದ್ದಾರೆ. ಉತ್ತರ ಪ್ರದೇಶದ ಗೋರಖ್‌ಪುರದಿಂದ ಬಂದಿರುವ ನೌಶೀನ್ ದೆಹಲಿ ವಿಶ್ವವಿದ್ಯಾಲಯದ ಖಾಲ್ಸಾ ಕಾಲೇಜಿನ ಹಳೆಯ ವಿದ್ಯಾರ್ಥಿ. ನೌಶೀನ್ ಅವರ ತಂದೆ ಪ್ರಸಾರ ಭಾರತಿಯಲ್ಲಿ ನಿರ್ದೇಶಕರು ಮತ್ತು ತಾಯಿ ಗೃಹಿಣಿ. ಆಕೆಯ ಹಿರಿಯ ಸಹೋದರ ಮತ್ತು ಸಹೋದರಿ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾರೆ. ನೌಶೀನ್ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದರು.
UPSC Civil Services Exam Result 2023: ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್
ಉತ್ತರ ಪ್ರದೇಶದ ಬಾಲಕಿ ಐಶ್ವರ್ಯಮ್ ಪ್ರಜಾಪತಿ 10ನೇ ರ್ಯಾಂಕ್ ಗಳಿಸಿದ್ದಾರೆ. ದಾರ್ಜಿಲಿಂಗ್‌ನ ಆಶೀಶ್ ಕುಮಾರ್ 8 ನೇ ರ್ಯಾಂಕ್ ಗಳಿಸಿದ್ದಾರೆ.