UPSC Civil Services Exam Result 2023: ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್

ಕೇಂದ್ರ ಲೋಕಸೇವಾ ಆಯೋಗವು  2023 ರಲ್ಲಿ ನಡೆಸಿದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು   ಪ್ರಕಟಿಸಿದೆ. 

UPSC Civil Services Exam Result 2023 toppers name  declared  gow

ಬೆಂಗಳೂರು (ಏ.16): ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2023 ರ ಸೆಪ್ಟೆಂಬರ್ 15 ರಿಂದ 24 ರ ನಡುವೆ ನಡೆಸಿದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಇಂದು (16, ಏಪ್ರಿಲ್, 2024) ಪ್ರಕಟಿಸಲಾಗಿದೆ. ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್ ಆಗೊ ಹೊರಹೊಮ್ಮಿದ್ದಾರೆ.  2023 ಯುಪಿಎಸ್‌ಸಿ  ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ಆಯೋಗದ ವೆಬ್‌ಸೈಟ್‌ https://upsc.gov.in/  ರಿಜಿಸ್ಟರ್‌ ನಂಬರ್ ಮತ್ತು ಹೆಸರಿನ ಪ್ರಕಾರ ಚೆಕ್‌ ಮಾಡಿಕೊಳ್ಳಬಹುದು. 

ಒಟ್ಟು 1,016 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. 355 ಅಭ್ಯರ್ಥಿಗಳ ಸ್ಥಿತಿ ತಾತ್ಕಾಲಿಕವಾಗಿ ಉಳಿದಿದೆ. ಇಲ್ಲಿ ಕ್ರಮ ಪ್ರಕಾರವಾಗಿ ಟಾಪರ್‌ಗಳ ಹೆಸರು ನೀಡಲಾಗಿದೆ.

  1. ಆದಿತ್ಯ ಶ್ರೀವಾಸ್ತವ
  2. ಅನಿಮೇಶ್ ಪ್ರಧಾನ್
  3. ಡೋಣೂರು ಅನನ್ಯಾ ರೆಡ್ಡಿ
  4. ಪಿ ಕೆ ಸಿದ್ಧಾರ್ಥ್ ರಾಮಕುಮಾರ್
  5. ರುಹಾನಿ
  6. ಸೃಷ್ಟಿ ದಾಬಾಸ್
  7. ಅನ್ಮೋಲ್ ರಾಥೋಡ್
  8. ಆಶಿಶ್ ಕುಮಾರ್
  9. ನೌಶೀನ್
  10. ಐಶ್ವರ್ಯಮ್ ಪ್ರಜಾಪತಿ
  11. ಕುಶ್ ಮೋಟ್ವಾನಿ
  12. ಅನಿಕೇತ್ ಶಾಂಡಿಲ್ಯ
  13. ಮೇಧಾ ಆನಂದ್
  14. ಶೌರ್ಯ ಅರೋರಾ
  15. ಕುನಾಲ್ ರಸ್ತೋಗಿ
  16. ಅಯಾನ್ ಜೈನ್
  17. ಸ್ವಾತಿ ಶರ್ಮಾ
  18. ವಾರ್ದಾ ಖಾನ್
  19. ಶಿವಕುಮಾರ್
  20. ಆಕಾಶ್ ವರ್ಮಾ

ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್‌ ಸೇವೆ, ಭಾರತೀಯ ವಿದೇಶಿ ಸೇವೆ ಮತ್ತು ಇತರೆ ಕೇಂದ್ರೀಯ ಸೇವೆಗಳಿಗೆ (ಗ್ರೂಪ್‌ ಎ ಮತ್ತು ಗ್ರೂಪ್‌ ಬಿ) ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಯುಪಿಎಸ್‌ಸಿ  ಪರೀಕ್ಷೆ ನಡೆಸಲಾಗುತ್ತದೆ. 

ಯುಪಿಎಸ್‌ಸಿ  ಫಲಿತಾಂಶ ಚೆಕ್‌ ಮಾಡುವುದು ಹೇಗೆ?
- ಕೇಂದ್ರ ಲೋಕಸೇವಾ ಆಯೋಗದ ವೆಬ್‌ಸೈಟ್‌ ವಿಳಾಸ https://upsc.gov.in/ ಕ್ಕೆ ಭೇಟಿ ನೀಡಿ.
- ತೆರೆದ ವೆಬ್‌ಪುಟದಲ್ಲಿ ' Final Result - Civil Services  Examination, 2023 ಎಂದಿರುವ ಲಿಂಕ್‌ ಕ್ಲಿಕ್ ಮಾಡಿ.
- ಪಿಡಿಎಫ್‌ ಫೈಲ್‌ ಒಂದು ಓಪನ್‌ ಆಗುತ್ತದೆ. ಇಲ್ಲಿ ಅಭ್ಯರ್ಥಿಗಳು ಹೆಸರು, ರಿಜಿಸ್ಟರ್ ನಂಬರ್‌ ಅನ್ನು ಹಾಕಿ ಚೆಕ್‌ ಮಾಡಬಹುದು.

 

Latest Videos
Follow Us:
Download App:
  • android
  • ios