ಭಾರತದ ಟಾಪ್ 10 ವಿಶ್ವವಿದ್ಯಾಲಯ: ಕರ್ನಾಟಕದ ಈ ಯುನಿವರ್ಸಿಟಿಗೆ ಟಾಪ್ 1 ಪಟ್ಟ
ಭಾರತದ ಅಗ್ರ 10 ವಿಶ್ವವಿದ್ಯಾಲಯಗಳು ಯಾವುವು ನಿಮಗೆ ಗೊತ್ತಾ? ಇದರಲ್ಲಿ ಕರ್ನಾಟಕ ಎರಡು ಯುನಿವರ್ಸಿಟಿಗಳು ಸಹ ಸೆರಿವೆ. ಬನ್ನಿ ಆ ಲಿಸ್ಟಲ್ಲಿ ಯಾವೆಲ್ಲಾ ಕಾಲೇಜುಗಳಿವೆ ನೊಡೋಣ.
ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್ (National Institutional Ranking Framework) ಭಾರತದ ಟಾಪ್ 10 ಯುನಿವರ್ಸಿಟಿಗಳ ಲಿಸ್ಟ್ ಬಿಡುಗಡೆ ಮಾಡಿದೆ. ಆ ಲಿಸ್ಟ್‌ನಲ್ಲಿ ಕರ್ನಾಟಕದ ಯುನಿವರ್ಸಿಟಿಗಳು ಸಹ ಇವೆ. ಅವು ಯಾವುವು ಅನ್ನೋದನ್ನ ನೋಡೋಣ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಕರ್ನಾಟಕ) (Indian Institution of science) :
ಈ ವಿಶ್ವವಿದ್ಯಾಲಯ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿದೆ. ವಿಶ್ವವಿದ್ಯಾಲಯವು ಏರೋಸ್ಪೇಸ್, ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಇನ್ನೂ ಅನೇಕ ಕೋರ್ಸ್‌ಗಳನ್ನು ನೀಡುತ್ತದೆ. ಇದು ಪದವಿ, ಸ್ನಾತಕೋತ್ತರ ಮತ್ತು ಪಿಎಚ್ಡಿ ಕೋರ್ಸ್‌ಗಳಿಗೂ ಫೇಮಸ್. ಈ ವಿಶ್ವವಿದ್ಯಾಲಯದಲ್ಲಿ ಸೀಟಿಗೆ ಉತ್ತಮ ಬೇಡಿಕೆ ಇದೆ. ಭಾರತೀಯ ಶಿಕ್ಷಣ ಇಲಾಖೆಯ ಅಂಗಸಂಸ್ಥೆಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರ್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್ಎಫ್) ಪ್ರಕಾರ, ಈ ವಿಶ್ವವಿದ್ಯಾಲಯವು ಉತ್ತಮ ಬೌದ್ಧಿಕ ಆಸ್ತಿಯನ್ನು (Intellectual Property) ಒದಗಿಸುವ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ನವದೆಹಲಿ) (Jawaharlal Nehru University) :
ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿವಾದಗಳಿಗೆ ಮಾತ್ರವಲ್ಲದೇ ಅತ್ಯುತ್ತಮ ಶಿಕ್ಷಣದ ನೆಲೆಯಾಗಿದೆ. ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿ ಸಂಘಟನೆಗಳಲ್ಲಿಯೂ ತುಂಬಾ ಸಕ್ರಿಯರಾಗಿದ್ದಾರೆ. ವಿಶ್ವವಿದ್ಯಾಲಯ ಉತ್ತಮ ಬುದ್ಧಿಜೀವಿಗಳನ್ನು ಮಾತ್ರವಲ್ಲದೇ ಅನೇಕ ರಾಜಕೀಯ ನಾಯಕರನ್ನ್ನುನೂ ಒದಗಿಸಿದೆ. ವಿದೇಶಿ ಶಿಕ್ಷಣದಲ್ಲಿ ಪದವಿ ಮಾಡಲು ಈ ವಿಶ್ವವಿದ್ಯಾಲಯ ಬೆಸ್ಟ್ ಸ್ಥಳ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ (ನವದೆಹಲಿ) (Jamia Milia Islamia):
ಜಾಮಿಯಾ ಮಿಲಿಯಾ ಇಸ್ಲಾಮಿಯಾ ರಾಷ್ಟ್ರ ರಾಜಧಾನಿ ನವದೆಹಲಿಯ ಮತ್ತೊಂದು ಪ್ರಸಿದ್ಧ ವಿಶ್ವವಿದ್ಯಾಲಯ. ಎನ್ಐಆರ್ಎಫ್ ಪ್ರಕಾರ, ವಿಶ್ವವಿದ್ಯಾಲಯ ದೇಶದ ಮೂರನೇ ಅತ್ಯುತ್ತಮ ಯುನಿವರ್ಸಿಟಿ. ವಿಶ್ವವಿದ್ಯಾಲಯವು ಪದವಿ, ಸ್ನಾತಕೋತ್ತರ, ಪಿಎಚ್ಡಿ ಸೇರಿ ವಿವಿಧ ಹಂತಗಳಲ್ಲಿ ಒಟ್ಟು 256 ಕೋರ್ಸ್‌ಗಳನ್ನು ನೀಡುತ್ತದೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಹಲವು ಕೋರ್ಸ್‌ಗಳನ್ನು ನೀಡುತ್ತದೆ, ವಿಶೇಷವಾಗಿ ಹಿಂದಿ, ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೋರ್ಸ್ ನೀಡುತ್ತದೆ.
ಜಾದವ್ ಪುರ ವಿಶ್ವವಿದ್ಯಾಲಯ (ಪಶ್ಚಿಮ ಬಂಗಾಳ) (Jadavpur University, Kolkata) :
ಪಶ್ಚಿಮ ಬಂಗಾಳದ ಜಾದವ್ಪುರ ವಿಶ್ವವಿದ್ಯಾಲಯ ಎನ್ಐಆರ್ಎಫ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವವಿದ್ಯಾಲಯವು ಸುಮಾರು 147 ಕೋರ್ಸ್ ಗಳೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತದೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯ (ವಾರಣಾಸಿ) (Banaras Hindu University) :
ಬನಾರಸ್ ಪ್ರಾಚೀನ ನಗರವಾದ ವಾರಣಾಸಿಯಲ್ಲಿರುವ ಪ್ರಸಿದ್ಧ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವನ್ನು 1916 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮದನ್ ಮೋಹನ್ ಮಾಳವೀಯ ಸ್ಥಾಪಿಸಿದರು. ಪದವಿ ಹೊರತಾಗಿ, ಇದು ಪಿಜಿ ಮತ್ತು ಪಿಎಚ್ಡಿಯಲ್ಲಿ ಹಲವಾರು ಕೋರ್ಸ್‌ಗಳನ್ನು ನೀಡುತ್ತದೆ. ಎನ್ಐಆರ್ಎಫ್ ಶ್ರೇಯಾಂಕದಲ್ಲಿ ವಿಶ್ವವಿದ್ಯಾಲಯ ಐದನೇ ಸ್ಥಾನದಲ್ಲಿದೆ.
ರಾಷ್ಟ್ರೀಯ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್ 2023 ರ ಪ್ರಕಾರ, ಇನ್ನೂ ಒಂದು ಕರ್ನಾಟಕ ಎರಡು ಯುನಿವರ್ಸಿಟಿಗಳು ಟಾಪ್ 10 ರಲ್ಲಿ (Top 10 Universities of India) ಅವಕಾಶ ಪಡೆದುಕೊಂಡಿದೆ. ಒಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್. ಮತ್ತೊಂದು ಮಣಿಪಾಲ್ ಯುನಿವರ್ಸಿಟಿ.
ಎನ್ಐಆರ್ಎಫ್ ಶ್ರೇಯಾಂಕದ ಪ್ರಕಾರ, ಕರ್ನಾಟಕದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ತಮಿಳುನಾಡಿನ ಅಮೃತ ವಿಶ್ವ ವಿದ್ಯಾಪೀಠಂ, ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕ್ರಮವಾಗಿ 6,7,8,9 ನೇ ಸ್ಥಾನದಲ್ಲಿವೆ. ತೆಲಂಗಾಣದ ಎಚ್‌ಸಿಯು 10ನೇ ಸ್ಥಾನದಲ್ಲಿದೆ.