MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Education
  • ಕಾಶ್ಮೀರ ವಿವಾದ, ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ 2 ವರ್ಷಗಳ ಕಾಲ ವಿದ್ಯಾರ್ಥಿ ಅಮಾನತು

ಕಾಶ್ಮೀರ ವಿವಾದ, ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ 2 ವರ್ಷಗಳ ಕಾಲ ವಿದ್ಯಾರ್ಥಿ ಅಮಾನತು

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಓರ್ವ ವಿದ್ಯಾರ್ಥಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ವಿಶ್ವವಿದ್ಯಾಲಯದ ನಿರ್ಧಾರವನ್ನು ಏಕಪಕ್ಷೀಯ ಮತ್ತು ಅನ್ಯಾಯ ಎಂದು ಟೀಕಿಸಿದ್ದಾರೆ.

2 Min read
Author : Gowthami K
Published : May 11 2026, 08:44 PM IST
Share this Photo Gallery
  • FB
  • TW
  • Linkdin
  • Whatsapp
17
ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಹಿಂಸಾಚಾರ
Image Credit : Asianet News

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಹಿಂಸಾಚಾರ

ಬೆಂಗಳೂರು: ಸರ್ಜಾಪುರದಲ್ಲಿರುವ ಅಜೀಂ ಪ್ರೇಮ್ ಜಿ (ಎಪಿಯು) ಕ್ಯಾಂಪಸ್‌ನಲ್ಲಿ ಫೆಬ್ರವರಿ 24ರಂದು ನಡೆದ ಹಿಂಸಾಚಾರ ಸಂಬಂಧಿತ ವಿವಾದ ಇದೀಗ ಮತ್ತೆ ತೀವ್ರಗೊಂಡಿದ್ದು, ವಿದ್ಯಾರ್ಥಿಯೊಬ್ಬನನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿರುವ ವಿಶ್ವವಿದ್ಯಾಲಯದ ಕ್ರಮಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಇನ್ನಿಬ್ಬರು ವಿದ್ಯಾರ್ಥಿಗಳಿಗೆ ಲಿಖಿತ ಎಚ್ಚರಿಕೆ ನೀಡಲಾಗಿದೆ.

Add Asianetnews Kannada as a Preferred SourcegooglePreferred
27
 ಹಿಂಸಾಚಾರ ಘಟನೆ ಬಳಿಕ ಶಿಸ್ತು ಕ್ರಮ
Image Credit : Asianet News

ಹಿಂಸಾಚಾರ ಘಟನೆ ಬಳಿಕ ಶಿಸ್ತು ಕ್ರಮ

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ “ರೀಡಿಂಗ್ ಸರ್ಕಲ್” ಚರ್ಚಾ ಕಾರ್ಯಕ್ರಮವನ್ನು ಫೆಬ್ರವರಿಯಲ್ಲಿ ಆಯೋಜಿಸಲಾಗಿತ್ತು. ಆದರೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲವು ವ್ಯಕ್ತಿಗಳು ಕ್ಯಾಂಪಸ್‌ಗೆ ನುಗ್ಗಿ ಕಾರ್ಯಕ್ರಮವನ್ನು ಅಡ್ಡಿಪಡಿಸಿದ್ದು, ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿತ್ತು.

ಈ ಘಟನೆಯ ಹಿನ್ನೆಲೆ, ವಿಶ್ವವಿದ್ಯಾಲಯವು “ವಿಶೇಷ ಶಿಸ್ತು ಸಮಿತಿ” ರಚಿಸಿ ಸುಮಾರು ಎರಡು ತಿಂಗಳ ಕಾಲ ತನಿಖೆ ನಡೆಸಿತು. ತನಿಖಾ ಸಮಿತಿಯ ಶಿಫಾರಸುಗಳ ಆಧಾರದಲ್ಲಿ, ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Related Articles

Related image1
ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿವಿಯಲ್ಲಿ ದೇಶವಿರೋಧಿ ಚಟುವಟಿಕೆ ಆರೋಪ, ಪ್ರತಿಭಟಿಸಿದ ಎಬಿವಿಪಿ ವಿದ್ಯಾರ್ಥಿಗಳು ಅರೆಸ್ಟ್
Related image2
3 ಲಕ್ಷ ಕೋಟಿ ಒಡೆಯ ಅಜೀಂ ಪ್ರೇಮ್​ಜಿ ಬೆಂಗಳೂರಿನ ಮನೆಗೆ ಹಳ್ಳಿಯ ಸ್ಪರ್ಶ: ಸಿಂಪಲ್​ ಮನೆ ಹೀಗಿದೆ ನೋಡಿ
37
ಅಮಾನತು ಹಾಗೂ ಆರೋಪಗಳ ವಿವರ
Image Credit : Getty

ಅಮಾನತು ಹಾಗೂ ಆರೋಪಗಳ ವಿವರ

ಗುರುವಾರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಚೇರಿಯಿಂದ ಕಳುಹಿಸಲಾದ ಇಮೇಲ್ ನಲ್ಲಿ, ಅಮಾನತುಗೊಂಡ ವಿದ್ಯಾರ್ಥಿ ಸಾಂಸ್ಥಿಕ ಪ್ರಕ್ರಿಯೆಗಳ ಅವಮಾನ, ಸತ್ಯಗಳನ್ನು ಮರೆಮಾಚಿ ತಪ್ಪು ನಿರೂಪಣೆ ಹಾಗೂ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ವಿಫಲತೆ ಎಂಬ ಆರೋಪಗಳಿಗೆ ಒಳಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದ್ದು, ಮುಂದಿನ ಅವಧಿಯಲ್ಲಿ ಮರುಪ್ರವೇಶವು ಪರಿಶೀಲನೆ ಅಧೀನದಲ್ಲಿರುತ್ತದೆ ಎಂದು ಉಲ್ಲೇಖಿಲಾಗಿದೆ.

47
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ
Image Credit : Asianet News

ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ

ಈ ಕ್ರಮದ ವಿರುದ್ಧ ಶುಕ್ರವಾರ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್‌ನ ‘ದಿ ಹಿಂಜ್’ ಪ್ರದೇಶದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ನಂತರ ರಿಜಿಸ್ಟ್ರಾರ್ ಕಚೇರಿಯ ಕಡೆಗೆ ಮೆರವಣಿಗೆ ನಡೆಸಿದರೂ, ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಪ್ರತಿಭಟನಾಕಾರರು ಈ ಕ್ರಮವನ್ನು ಏಕಪಕ್ಷೀಯ ಮತ್ತು ಅಸಮಾನ ಶಿಕ್ಷೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಬಾಹ್ಯ ವ್ಯಕ್ತಿಗಳು ನಡೆಸಿದ ದಾಳಿಗೆ ಒಳಗಾದ ವಿದ್ಯಾರ್ಥಿಗಳನ್ನು ಶಿಕ್ಷಿಸುವುದು ನ್ಯಾಯವಲ್ಲ. ನಿಜವಾದ ಅಪರಾಧಿಗಳನ್ನು ಶಿಕ್ಷಿಸುವ ಬದಲು ಬಲಿಪಶುಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

57
ಪಾರದರ್ಶಕತೆಯ ಕೊರತೆಯ ಆರೋಪ
Image Credit : Asianet News

ಪಾರದರ್ಶಕತೆಯ ಕೊರತೆಯ ಆರೋಪ

ವಿದ್ಯಾರ್ಥಿಗಳು, ವಿಶೇಷ ಶಿಸ್ತು ಸಮಿತಿಯ ವರದಿ ಮತ್ತು ನಿರ್ಣಯಗಳ ಬಗ್ಗೆ ಪಾರದರ್ಶಕತೆ ಕೊರತೆಯಿದೆ ಎಂದು ಆರೋಪಿಸಿದ್ದಾರೆ. ತನಿಖಾ ವಿವರಗಳನ್ನು ಸಂಬಂಧಿತ ವಿದ್ಯಾರ್ಥಿಯೊಂದಿಗೆ ಹಂಚಿಕೊಳ್ಳಲಾಗಿಲ್ಲ ಎಂದು ಅವರು ಹೇಳಿದ್ದು, ವಿಶ್ವವಿದ್ಯಾಲಯದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಅಮಾನತು ಕುರಿತು ಕಳುಹಿಸಿದ ಇಮೇಲ್ ಸಮಯವು ಸಹ ವಿದ್ಯಾರ್ಥಿಗಳಿಂದ ಟೀಕೆಗೆ ಗುರಿಯಾಗಿದೆ. ಸಾಮೂಹಿಕ ಪ್ರತಿಕ್ರಿಯೆ ನೀಡಲು ಅವಕಾಶ ಕಡಿಮೆ ಮಾಡುವ ಉದ್ದೇಶದಿಂದ ತಡವಾಗಿ ಇಮೇಲ್ ಕಳುಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

67
ವಿಶ್ವವಿದ್ಯಾಲಯದ ಸ್ಪಷ್ಟನೆ
Image Credit : Asianet News

ವಿಶ್ವವಿದ್ಯಾಲಯದ ಸ್ಪಷ್ಟನೆ

ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ವಕ್ತಾರರು, “ಫೆಬ್ರವರಿ 24ರ ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗಿದೆ. ತನಿಖಾ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕವೇ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯದ ನೀತಿ ಸಂಹಿತೆಯನ್ನು ಗಂಭೀರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದ್ದು, ಇನ್ನಿಬ್ಬರಿಗೆ ಲಿಖಿತ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

77
ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆ
Image Credit : Asianet News

ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆ

ಅಮಾನತುಗೊಂಡ ವಿದ್ಯಾರ್ಥಿ ಈ ನಿರ್ಧಾರ ವಿರುದ್ಧ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದೇ ವೇಳೆ, ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಕ್ಯಾಂಪಸ್‌ನಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯ, ಭದ್ರತೆ ಮತ್ತು ಆಡಳಿತಾತ್ಮಕ ಕ್ರಮಗಳ ಕುರಿತ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ರೀತಿಯಲ್ಲಿ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಅಜೀಂ ಪ್ರೇಮ್‌ಜಿ
ವಿದ್ಯಾರ್ಥಿ
ಶಿಕ್ಷಣ
ಸುದ್ದಿ
ಬೆಂಗಳೂರು
ಪ್ರತಿಭಟನೆ

Latest Videos
Recommended Stories
Recommended image1
ಮಣಿಪಾಲದ ಎಂಐಟಿಗೆ ವಿಶ್ವ ಗರಿ, CFA ಮಾನ್ಯತೆ ಪಡೆದ ದೇಶದ ಮೊದಲ ಎಂಜಿನಿಯರಿಂಗ್ ಸಂಸ್ಥೆ! ಇನ್ಮುಂದೆ ಜಾಗತಿಕ ಶಿಕ್ಷಣ
Recommended image2
ವಿಟಿಯು ಪರೀಕ್ಷಾ ದಿನಾಂಕ ಪ್ರಕಟ: ಯುಜಿ ಹಾಗೂ ಪಿಜಿ ಕೋರ್ಸ್‌ಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ
Recommended image3
ತಮಿಳುನಾಡು ಸಿಎಂ ಆಗಲಿರುವ ವಿಜಯ್‌ 10ನೇ ಕ್ಲಾಸ್‌ ಮಾರ್ಕ್ಸ್‌ ಕಾರ್ಡ್‌ ವೈರಲ್‌, ಗಣಿತದಲ್ಲಿ ವೀಕು, ಈ ವಿಷಯದಲ್ಲಿ ಟಾಪ್‌
Related Stories
Recommended image1
ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿವಿಯಲ್ಲಿ ದೇಶವಿರೋಧಿ ಚಟುವಟಿಕೆ ಆರೋಪ, ಪ್ರತಿಭಟಿಸಿದ ಎಬಿವಿಪಿ ವಿದ್ಯಾರ್ಥಿಗಳು ಅರೆಸ್ಟ್
Recommended image2
3 ಲಕ್ಷ ಕೋಟಿ ಒಡೆಯ ಅಜೀಂ ಪ್ರೇಮ್​ಜಿ ಬೆಂಗಳೂರಿನ ಮನೆಗೆ ಹಳ್ಳಿಯ ಸ್ಪರ್ಶ: ಸಿಂಪಲ್​ ಮನೆ ಹೀಗಿದೆ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved