MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • 3 ಲಕ್ಷ ಕೋಟಿ ಒಡೆಯ ಅಜೀಂ ಪ್ರೇಮ್​ಜಿ ಬೆಂಗಳೂರಿನ ಮನೆಗೆ ಹಳ್ಳಿಯ ಸ್ಪರ್ಶ: ಸಿಂಪಲ್​ ಮನೆ ಹೀಗಿದೆ ನೋಡಿ

3 ಲಕ್ಷ ಕೋಟಿ ಒಡೆಯ ಅಜೀಂ ಪ್ರೇಮ್​ಜಿ ಬೆಂಗಳೂರಿನ ಮನೆಗೆ ಹಳ್ಳಿಯ ಸ್ಪರ್ಶ: ಸಿಂಪಲ್​ ಮನೆ ಹೀಗಿದೆ ನೋಡಿ

ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ ಅವರ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿರುವ 350 ಕೋಟಿ ಮೌಲ್ಯದ ಬಂಗಲೆಯು ಸರಳತೆ ಮತ್ತು ಪರಿಸರ ಸ್ನೇಹಿ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. 6 ಸಾವಿರ ಚದರ ಅಡಿ ವಿಸ್ತೀರ್ಣದ ಈ ಫಾರ್ಮ್‌ಹೌಸ್ ಶೈಲಿಯ ನಿವಾಸವು ಇಟ್ಟಿಗೆ ಮತ್ತು ಕಲ್ಲಿನ ವಾಸ್ತುಶಿಲ್ಪ ಹೊಂದಿದೆ.

2 Min read
Author : Suchethana D
Published : Mar 24 2026, 06:18 PM IST
Share this Photo Gallery
  • FB
  • TW
  • Linkdin
  • Whatsapp
16
ಕೊಡುಗೈ ದಾನಿ
Image Credit : Social Media

ಕೊಡುಗೈ ದಾನಿ

ವಿಶ್ವದ ಅಗ್ರಮಾನ್ಯ ಶ್ರೀಮಂತರಲ್ಲಿ ಒಬ್ಬರು, ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ. ಇವರು ಸುಮಾರು 3 ಲಕ್ಷ ಕೋಟಿಯ ಒಡೆಯ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದಕ್ಕೆ ಇವರ ಸಿಂಪಲ್​ ಲೈಫ್​ಸ್ಟೈಲ್​ ಸಾಕ್ಷಿಯಾಗಿದ್ದು, ಇದಾಗಲೇ ಇವರ ಸರಳ, ಸಹಜ ಸ್ವಭಾವವನ್ನು ಕೊಂಡಾಡುವವರು ಹಲವರು. ಕೊಡುಗೈ ದಾನಿಯೆಂದೇ ಪ್ರಖ್ಯಾತಿ ಪಡೆದವರು ಇವರು.

26
ಗುಜರಾತ್​ ಮೂಲದವರು
Image Credit : Social Media

ಗುಜರಾತ್​ ಮೂಲದವರು

ಅಜೀಮ್ ಹಶೀಮ್ ಪ್ರೇಮ್​ಜಿ ಅವರು ಗುಜರಾತ್ ಮೂಲದ ಶಿಯಾ ಮುಸ್ಲಿಮ್ ಕುಟುಂಬದ ಮೂಲದಿಂದ ಬಂದವರು. ಹುಟ್ಟಿದ್ದು ಬಾಂಬೆಯಲ್ಲಿ. ಅವರ ತಂದೆ ಮೊಹಮ್ಮದ್ ಹಶೀಮ್ ಪ್ರೇಮ್​ಜಿ ಸ್ವಾತಂತ್ರ್ಯಪೂರ್ವದಲ್ಲಿ ಪ್ರಖ್ಯಾತ ಉದ್ಯಮಿಯಾಗಿದ್ದರು. ದೇಶದ ವಿಭಜನೆ ಆಗುವಾಗ ಜಿನ್ನಾ ಅವರು ಮೊಹಮ್ಮದ್ ಪ್ರೇಮ್​ಜಿ ಅವರನ್ನು ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನಿಸಿದ್ದರಂತೆ. ಆದರೆ, ಪ್ರೇಮ್​ಜಿ ಈ ಆಫರ್ ಅನ್ನು ನಯವಾಗಿಯೇ ನಿರಾಕರಿಸಿದ್ದರು.

Related Articles

Related image1
Whatsapp ಮೂಲಕವೂ ಗ್ಯಾಸ್​ ಸಿಲಿಂಡರ್​ ಬುಕಿಂಗ್​ಗೆ ಅವಕಾಶ: ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ
Related image2
ಪ್ರಯೋಗಾಲಯದಲ್ಲಿ ತಯಾರಾಗ್ತಿವೆ ಮಿರಿಮಿರಿ ಮಿಂಚುವ ಚಿನ್ನ! ಬಂಗಾರ ಪ್ರಿಯರಿಗೆ ಸರ್​ಪ್ರೈಸ್​: ಡಿಟೇಲ್ಸ್​ ಇಲ್ಲಿದೆ
36
ಬೆಂಗಳೂರಿನ ಮನೆ
Image Credit : Social Media

ಬೆಂಗಳೂರಿನ ಮನೆ

ಇದೀಗ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಇರುವ ಅವರ ಬಂಗಲೆಯ ಕುತೂಹಲದ ಪರಿಚಯವಾಗಿದೆ. 350 ಕೋಟಿ ರೂಪಾಯಿ ವೆಚ್ಚದ 6 ಸಾವಿರ ಚದರ ಅಡಿ, 0.5 ಎಕರೆ ವಿಸ್ತೀರ್ಣದ ಫಾರ್ಮ್‌ಹೌಸ್ ಶೈಲಿಯ ನಿವಾಸ ಇದಾಗಿದೆ. ಬಿಲಿಯನೇರ್‌ನ ಪ್ರೇಮ್‌ಜಿಯವರ ನಿವಾಸಕ್ಕೆ ಪುರಾತನ ಮತ್ತು ಹಳ್ಳಿಗಾಡಿನ ಸ್ಪರ್ಶ ನೀಡಲಾಗಿದ್ದು, ಇದು ಅವರ ಉದ್ಯಮಶೀಲತೆ ಮತ್ತು ಉದ್ಯಮಿಯಾಗಿ ಅವರ ಸಾಧನೆಗಳನ್ನು ಪ್ರತಿನಿಧಿಸುತ್ತವೆ.

46
ಇಟ್ಟಿಗೆ ಮತ್ತು ಕಲ್ಲಿನ ವಾಸ್ತುಶಿಲ್ಪಗಳೇ ಹೈಲೈಟ್​
Image Credit : Social Media

ಇಟ್ಟಿಗೆ ಮತ್ತು ಕಲ್ಲಿನ ವಾಸ್ತುಶಿಲ್ಪಗಳೇ ಹೈಲೈಟ್​

ಆಡಂಬರಕ್ಕಿಂತ ಸುಸ್ಥಿರತೆ, ಪರಿಸರ ಸ್ನೇಹಿ ವಸ್ತುಗಳು ಮತ್ತು ಕನಿಷ್ಠ ವಸ್ತುಗಳ ಬಳಕೆ ಇದರ ಹೈಲೈಟ್​. ಸಾಂಪ್ರದಾಯಿಕ ವಾಸ್ತುಶಿಲ್ಪದ ಮೇಲೆ ಕೇಂದ್ರೀಕೃತದ ಮನೆಯಿದು. ಇಟ್ಟಿಗೆ ಮತ್ತು ಕಲ್ಲಿನ ವಾಸ್ತುಶಿಲ್ಪಗಳಿಂದ ಈ ಬಂಗಲೆ ಕಂಗೊಳಿಸುತ್ತದೆ. ಹಳೆ ಕಾಲದ ಸಾಂಪ್ರದಾಯಿಕ ಮನೆ ಇದಾಗಿದೆ. ಮನೆಯು ಸುಸಜ್ಜಿತವಾದ ಹಸಿರು ಹುಲ್ಲುಹಾಸು, ಅತ್ಯಾಧುನಿಕ ಹೋಮ್ ಥಿಯೇಟರ್, ಜಿಮ್ನಾಷಿಯಂ ಮತ್ತು ವಿವಿಧ ಹೂವುಗಳನ್ನು ಹೊಂದಿರುವ ಆಕರ್ಷಕ ಉದ್ಯಾನವನ ಹೀಗೆ ಹಲವು ಸೌಕರ್ಯಗಳನ್ನು ಹೊಂದಿದ್ದು ಇವೆಲ್ಲವೂ ಅವರ ಮನೆಯ ಮೌಲ್ಯವನ್ನು ಹೆಚ್ಚಿಸುತ್ತಿದೆ.

56
ಅತಿಥಿಗಳಿಗೆ ವಿಶೇಷ ವಾತಾವರಣ
Image Credit : Social Media

ಅತಿಥಿಗಳಿಗೆ ವಿಶೇಷ ವಾತಾವರಣ

ರಸ್ಟಿಕ್ ಟ್ರೆಡಿಷನಲ್ ಲುಕ್ ನಲ್ಲಿ ಇದನ್ನು ನಿರ್ಮಿಸಿರುವುದು ವಿಶೇಷವಾಗಿದೆ. ಹಂಚಿನಿಂದ ನಿರ್ಮಿಸಲಾಗಿರುವ ಚಾವಣಿ ಇದರದ್ದು. ವುಡನ್ ಪ್ಯಾನೆಲ್ ಮತ್ತು ಡೆಕೋರೇಶನ್ ಹೊಂದಿರುವ ಈ ಐಷಾರಾಮಿ ಬಂಗಲೆಯು ಪ್ರಾಚೀನ ಮತ್ತು ಹಳ್ಳಿಗಾಡಿನ ಲುಕ್ ನಲ್ಲಿ ನಿರ್ಮಿಸಲಾಗಿದೆ. ಮನೆಯ ಲಿವಿಂಗ್ ರೂಮ್ ಸಾಫ್ಟ್ ವರ್ಮ್ ಬಣ್ಣಗಳಲ್ಲಿದೆ. ಇದು ಅತಿಥಿಗ಼ಳಿಗೆ ಅದ್ಭುತ ವಾತಾವರಣ ಸೃಷ್ಟಿಸುತ್ತೆ. ಸಂಕೀರ್ಣವಾದ ವಿವರ ಮತ್ತು ಐಷಾರಾಮಿ ಬಟ್ಟೆಗಳಿಂದ ಅಲಂಕರಿಸಲ್ಪಟ್ಟ ಭವ್ಯವಾದ ಪೀಠೋಪಕರಣಗಳು ಮಾಲೀಕರ ಅಭಿರುಚಿಗೆ ಸಾಕ್ಷಿಯಾಗಿದೆ. ಕೋಣೆಯನ್ನು ಸೊಗಸಾದ ಕಲಾಕೃತಿಗಳಿಂದ ಅಲಂಕರಿಸಲಾಗಿದೆ.

66
ವಿವಿಧ ಸ್ಥಳಗಳಲ್ಲಿ ಮನೆ
Image Credit : Social Media

ವಿವಿಧ ಸ್ಥಳಗಳಲ್ಲಿ ಮನೆ

ತಮ್ಮ ಪ್ರಾಥಮಿಕ ನಿವಾಸದ ಹೊರತಾಗಿ, ಅಜೀಂ ಪ್ರೇಮ್‌ಜಿ ಅವರ ಅಪಾರ ಸಂಪತ್ತು ಮತ್ತು ಯಶಸ್ಸನ್ನು ಪ್ರತಿಬಿಂಬಿಸುವ ಹಲವಾರು ಬಂಗಲೆಗಳನ್ನು ಹೊಂದಿದ್ದಾರೆ. ವಿವಿಧ ಸ್ಥಳಗಳಲ್ಲಿ ವಿಭಿನ್ನವಾದ ಮನೆಗಳನ್ನು ಇವರು ಕಟ್ಟಿಸಿದ್ದಾರೆ. ಅಜೀಂ ಪ್ರೇಮ್ ಜಿ ಅವರ ಇತರ ಬಂಗಲೆಗಳ ವಿವರಗಳನ್ನು ಖಾಸಗಿಯಾಗಿ ಇಡಲಾಗಿದೆ. ಆದರೂ ಅದೆಷ್ಟು ಐಷಾರಾಮಿಯಾಗಿರಬಹುದು ಅನ್ನೋದನ್ನು ನೀವು ಊಹಿಸಬಹುದು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ವ್ಯವಹಾರ
ಅಜೀಂ ಪ್ರೇಮ್‌ಜಿ
ಭಾರತ ಸುದ್ದಿ
ಜೀವನಶೈಲಿ
Latest Videos
Recommended Stories
Recommended image1
ಅಂತಿಮ ಕ್ಷಣದಲ್ಲಿ ಜೊತೆಗಿದ್ದ ತಾಯಿ, ನರಕ ಯಾತನೆ ಅಂತ್ಯಗೊಳಿಸಿ ನೋವಿಲ್ಲದ ಸಾವು ಕಂಡ ಹರೀಶ್ ರಾಣಾ
Recommended image2
ಚಿನ್ನದ ಹಾಲ್‌ಮಾರ್ಕ್‌ ರಹಸ್ಯ: 24 ಕ್ಯಾರೆಟ್ ನಿಂದ ಹಿಡಿದು 6 ಕ್ಯಾರೆಟ್ ವರೆಗೆ, ಬಂಗಾರದ ಈ ಸತ್ಯ ನಿಮಗೆ ಗೊತ್ತಾ?
Recommended image3
ರೈಲ್ವೆ ಪ್ರಯಾಣದ ಮಧ್ಯೆ ಅಸ್ವಸ್ಥಗೊಂಡ ಮಗು: ಆಮೇಲಾಗಿದ್ದೇನು? ಅಮ್ಮನ ವೀಡಿಯೋ ಭಾರಿ ವೈರಲ್
Related Stories
Recommended image1
Whatsapp ಮೂಲಕವೂ ಗ್ಯಾಸ್​ ಸಿಲಿಂಡರ್​ ಬುಕಿಂಗ್​ಗೆ ಅವಕಾಶ: ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ
Recommended image2
ಪ್ರಯೋಗಾಲಯದಲ್ಲಿ ತಯಾರಾಗ್ತಿವೆ ಮಿರಿಮಿರಿ ಮಿಂಚುವ ಚಿನ್ನ! ಬಂಗಾರ ಪ್ರಿಯರಿಗೆ ಸರ್​ಪ್ರೈಸ್​: ಡಿಟೇಲ್ಸ್​ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved