- Home
- Automobile
- Deals on Wheels
- ಹೆದ್ದಾರಿಗಳಲ್ಲಿ ಇನ್ಮುಂದೆ ಕಾಲ್ ಡ್ರಾಪ್ ಆಗಲ್ಲ, ಏನಿದು ಹೊಸ ರಸ್ತೆಗಳಲ್ಲಿ 5ಜಿ ನೆಟ್‌ವರ್ಕ್?
ಹೆದ್ದಾರಿಗಳಲ್ಲಿ ಇನ್ಮುಂದೆ ಕಾಲ್ ಡ್ರಾಪ್ ಆಗಲ್ಲ, ಏನಿದು ಹೊಸ ರಸ್ತೆಗಳಲ್ಲಿ 5ಜಿ ನೆಟ್‌ವರ್ಕ್?
ಹೆದ್ದಾರಿಗಳಲ್ಲಿ ಇನ್ಮುಂದೆ ಕಾಲ್ ಡ್ರಾಪ್ ಆಗಲ್ಲ, ಏನಿದು ಹೊಸ ರಸ್ತೆಗಳಲ್ಲಿ 5ಜಿ ನೆಟ್‌ವರ್ಕ್?, ಪ್ರಯಾಣದ ವೇಳೆ ನೆಟ್‌ವರ್ಕ್ ಸಮಸ್ಯೆಯಿಂದ ಕಾಲ್ ಡ್ರಾಪ್ ಸಮಸ್ಯೆಗಳನ್ನು ಬಹುತೇಕರು ಎದಿರಿಸಿದ್ದಾರೆ. ಇನ್ನು ಈ ಸಮಸ್ಯೆ ಇರುವುದಿಲ್ಲ

ಹೆದ್ದಾರಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ
ಭಾರತದಲ್ಲಿ ಹೆದ್ದಾರಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಬಹುತೇಕ ಹೆದ್ದಾರಿ ರಸ್ತೆಗಳು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿದೆ. ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ಗಳು ಭಾರತದ ಸಾರಿಗೆ ಸಂಪರ್ಕ ಸುಲಭಗೊಳಿಸಿದೆ. ಇದೇ ವೇಳೆ ಪ್ರಯಾಣದಲ್ಲಿ ಹಲವು ಪ್ರಯಾಣಿಕರು ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಾರೆ. ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ.
ಕಾಲ್ ಡ್ರಾಪ್ ಆಗಲ್ಲ, ಸಂಪೂರ್ಣ 5ಜಿ ಸೇವೆ
ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವಾಗ ದಿಢೀರ್ ಕಾಲ್ ಡ್ರಾಪ್ ಸಮಸ್ಯೆಗಳು ಸಹಜ. ಕೆಲ ಏರಿಯಾ ಬಂದಾಗ ನೆಟ್‌ವರ್ಕ್ ಸಮಸ್ಯೆಗಳಿಂದ ಕಾಲ್ ಡ್ರಾಪ್ ಆಗಲಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ದೂರಸಂಪರ್ಕ ಇಲಾಖೆ ಹಾಗೂ ಟ್ರಾಯ್ ಜಂಟಿಯಾಗಿ ಮಹತ್ವದ ಒಪ್ಪಂದ ಮಾಡಿಕೊಳ್ಳುತ್ತಿದೆ. ಈ ಮೂಲಕ ನೆಟ್‌ವರ್ಕ್ ಸಮಸ್ಯೆ ಬಗೆಹರಿಸುತ್ತಿದೆ.
ಹೆದ್ದಾರಿಗಳಲ್ಲಿ ಹೈಸ್ಪೀಡ್ 5ಜಿ ಸೇವೆ
NHAI, DoT ಹಾಗೂ TRAI ಜಂಟಿಯಾಗಿ ಹೆದ್ದಾರಿಗಳಲ್ಲಿ 5ಜಿ ಸೇವೆ ನೀಡಲಿದೆ. ಇದರಿಂದ ಭಾರತದ ಯಾವುದೇ ಹೆದ್ದಾರಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಗಳು ಎದುರಾಗುವುದಿಲ್ಲ. ಇದು ಕೇವಲ ಕಾಲ್ ಡ್ರಾಮ್ ಸಮಸ್ಯೆಗೆ ಮಾತ್ರ ಉತ್ತರವಲ್ಲ. ತುರ್ತು ಸಂದರ್ಭದಲ್ಲೂ ಪ್ರಯಾಣಿಕರಿಗೆ ನೆರವಾಗಲಿದೆ.
ಸ್ಮಾರ್ಟ್ ಹೈವೇ ಯೋಜನೆ
ಭಾರತದ ಹೆದ್ದಾರಿಗಳನ್ನು ಇದೀಗ ಸ್ಮಾರ್ಟ್ ಹೈವೇ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಎಲ್ಲಾ ಹೆದ್ದಾರಿಗಳು 5ಜಿ ಸೇವೆಯಿಂದ ಕೂಡಿರಲಿದೆ. ಮತ್ತೊಂದು ವಿಶೇಷ ಅಂದರೆ ಸುರಕ್ಷತಾ ಎಜೆನ್ಸಿಗಳಿಗೂ ಹೆದ್ದಾರಿ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಸುರಕ್ಷತೆ, ಸೌಲಭ್ಯ ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಸ್ಮಾರ್ಟ್ ಹೈವೇ ಯೋಜನೆಗಳು ವೇಗದಲ್ಲಿ ಸಾಗುತ್ತಿದೆ.
ಸ್ಮಾರ್ಟ್ ಹೈವೇ ಯೋಜನೆ
ಬ್ಲಾಕ್ ಸ್ಪಾಟ್ ಗುರುತಿಸುವಿಕೆ
ಸದ್ಯ ಹೆದ್ದಾರಿಗಳ ಯಾವ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತೆ ಅನ್ನೋದು ಗುರುತಿಸಲಾಗುತ್ತದೆ. ಇದನ್ನು ಬ್ಲಾಕ್ ಸ್ಪಾಟ್ ಎಂದು ದಾಖಲಿಸಿ ಈ ಸ್ಥಳ, ಏರಿಯಾಗಳಲ್ಲಿ 5ಜಿ ನೆಟ್‌ವರ್ಕ್ ಸೇವೆ ನೀಡಲಾಗುತ್ತದೆ. ಟೆಲಿಕಾಂ , ಟ್ರಾಯ್ ಜೊತೆ ಮಾತುಕತೆ ನಡೆಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಶೀಘ್ರದಲ್ಲೇ ಸೇವೆ ನೀಡಲಿದೆ.

