ಈ ವರ್ಷದಿಂದಲೇ ವಾಹನ to ವಾಹನ ಟೆಕ್ನಾಲಜಿ ಜಾರಿ ಎಂದ ಗಡ್ಕರಿ, ಏನಿದು ಹೊಸ ನೀತಿ?
ಈ ವರ್ಷದಿಂದಲೇ ವಾಹನ to ವಾಹನ ಟೆಕ್ನಾಲಜಿ ಜಾರಿ ಎಂದ ಗಡ್ಕರಿ, 2026ರ ಅಂತ್ಯದ ವೇಳೆ ಹೊಸ ತಂತ್ರಜ್ಞಾನ ಜಾರಿಯಾಗುತ್ತಿದೆ. ಇದು ವಾಹನಗಳಿಗೆ ಕಡ್ಡಾಯವಾಗಿದೆ. ಈ ಕುರಿತು ಕೇಂದ್ರ ಸಚಿವ ಮಾಹಿತಿ ಹಂಚಿಕೊಂಡಿದ್ದಾರೆ.

ವೆಹಿಕಲ್ ಟು ವೆಹಿಕಲ್ ಟೆಕ್ನಾಲಜಿ
ಭಾರತದಲ್ಲಿ ವಾಹನ, ರಸ್ತೆ ಸಾರಿಗೆ ವಿಚಾರದಲ್ಲಿ ಹಲವು ಸುಧಾರಣೆ ಮಾಡಲಾಗುತ್ತಿದೆ. ಅತ್ಯಾಧುನಿಕ ಟೆಕ್ನಾಲಜಿ ಬಳಲಿ ವಾಹನ ಸವಾರರ ಸಮಯ,ಪ್ರಯಾಣ ಸುಖಕರ ಮಾಡಲು ಮಹತ್ವದ ಹೆಜ್ಜೆ ಇಡಲಾಗಿದೆ. ಈಗಾಗಲೇ ಫಾಸ್ಟಾಗ್ ತಂತ್ರಜ್ಞಾನವನ್ನು ಜಿಪಿಎಸ್ ಆಧಾರಿತ ಮಾಡಲು ಪ್ರಯತ್ನಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೇ ವರ್ಷದ ಅಂತ್ಯದಲ್ಲಿ ವೆಹಿಕಲ್ ಟು ವೆಹಿಕಲ್ ತಂತ್ರಜ್ಞಾನ ಜಾರಿಯಾಗುತ್ತಿದೆ.
ಏನಿದು ವೆಹಿಕಲ್ ಟು ವೆಹಿಕಲ್ ಟೆಕ್ನಾಲಜಿ
ಹೊಸ ತಂತ್ರಜ್ಞಾನ, ಜಾರಿ, ಅಳವಡಿಕೆ ಕುರಿತು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಇದು ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಇಳಿಸಲು ಹಾಗೂ ರಸ್ತೆ ಸುರಕ್ಷತೆಗೆ ತಂದಿರುವ ಹೊಸ ತಂತ್ರಜ್ಞಾನ. ಈ ಟೆಕ್ನಾಲಜಿ ಮೂಲಕ ರಸ್ತೆ ಅಪಘಾತ ತಡೆಯಲು ಸಾಧ್ಯವಾಗಲಿದೆ ಎಂದಿದ್ದಾರೆ. ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿರುವ ವಾಹನಗಳಿಗೆ ಇತರ ವಾಹನ ಡಿಕ್ಕಿ ಪ್ರಮಾಣವನ್ನು ಈ ತಂತ್ರಜ್ಞಾನ ತಗ್ಗಿಸಲಿದೆ. ದಟ್ಟ ಮಂಜು ಕಾರಣ ಸಂಭವಿಸುವ ಅಪಘಾತಗಳ ಪ್ರಮಾಣವನ್ನು ಹೊಸ ತಂತ್ರಜ್ಞಾನ ಕಡಿಮೆ ಮಾಡಲಿದೆ. ಪ್ರಮುಖವಾಗಿ ರಸ್ತೆ ಸುರಕ್ಷತೆ ದೃಷ್ಟಿಯಿಂದ ಹೊಸ ತಂತ್ರಜ್ಞಾನ ಇದೇ ವರ್ಷ ಜಾರಿಯಾಗುತ್ತಿದೆ.
ಈ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ?
ವೆಹಿಕಲ್ ಟು ವೆಹಿಕಲ್ ತಂತ್ರಜ್ಞಾನ ಒಳಗೊಂಡಿರುವ ಚಿಪ್ ವಾಹನಕ್ಕೆ ಅಳವಡಿಸಲಾಗುತ್ತದೆ. ಇದು ಯಾವುದೇ ನೆಟ್‌ವರ್ಕ್ ಇಲ್ಲದೆ ಒಂದು ವಾಹನದಿಂದ ಮತ್ತೊಂದು ವಾಹನ ಜೊತೆ ಸಂವಹನ ನಡೆಸಲಿದೆ. ಜೊತೆಗೆ ಸಂದೇಶಗಳನ್ನು ಕಳುಹಿಸಲಿದೆ. ಈ ತಂತ್ರಜ್ಞಾನದಿಂದ ಯಾವುದೇ ವಾಹನ ಹತ್ತಿರ ಬರುತ್ತಿದ್ದಂತೆ ಅಥವಾ ವಾಹನಗಳು ಪಾರ್ಕ್ ಮಾಡಿದ್ದ, ಸಾಗುತ್ತಿರುವ ವಾಹನಗಳ ಸಮೀಪಕ್ಕೆ ಬರುತ್ತದ್ದಂತೆ ಅಲರ್ಟ್ ನೀಡಲಿದೆ. ಇನ್ನು ಪಾರ್ಕ್ ಮಾಡಿದ ವಾಹನಗಳು ಕೂಡ ಅಲರ್ಟ್ ಸಂದೇಶ ನೀಡಲಿದೆ. ಇದರಿಂದ ವಾಹನ ಚಾಲಕರು ಪಾರ್ಕ್ ಮಾಡಿರುವ ವಾಹನ, ದಟ್ಟಮಂಜು ವಾತಾವರಣದಲ್ಲಿ ಚಾಲನೆ ಮಾಡುವಾಗ ಇತರ ವಾಹನಗಳ ಗೋಚರಿಸಿದ್ದರೂ ಅಲರ್ಟ್ ಸಂದೇಶ ಬರಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಸಿಮ್ ರೀತಿಯ ಚಿಪ್ ಅಳವಡಿಕೆ, 360 ಡಿಗ್ರಿ ಕಮ್ಯೂನಿಕೇಶನ್
ಮೊಬೈಲ್ ಸಿಮ್ ರೀತಿಯ ಚಿಪ್ ಅಳವಡಿಕೆ ಮಾಡಲಾಗುತ್ತದೆ. ಇದು ರಿಯಲ್ ಟೈಮ್ ಅಲರ್ಟ್ ನೀಡಲಿದೆ. ಇದರಿಂದ ವಾಹನ ಸವಾರರಿಗೆ ನೆರವಾಗಲಿದೆ. ವಿಶೇಷ ಅಂದರೆ ವಾಹನ ಚಲಿಸುತ್ತಿರುವ ದಾರಿಯಲ್ಲಿ ಪಾರ್ಕ್ ಆಗಿರುವ ವಾಹನ ನಿಖರವಾಗಿ ಲೋಕೇಶನ್ ತಿಳಿಸಲಿದೆ. ಇನ್ನು ಯಾವುದೇ ವಾಹನ ಹತ್ತಿರಕ್ಕೆ ಬಂದರೂ ಅಲರ್ಟ್ ನೀಡಲಿದೆ. ಇದರಿಂದ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಲು ಹಾಗೂ ಅಪಘಾತವಾಗುವುದನ್ನು ತಪ್ಪಿಸಲು ನೆರವಾಗಲಿದೆ. ವಾಹನದ ಯಾವುದೇ ಭಾಗದಿಂದ ವಾಹನ ಬಂದರೂ, ಇದ್ದರೂ ಅಲರ್ಟ್ ನೀಡಲಿದೆ. 360 ಡಿಗ್ರಿ ಸಂವಹನ ನಡೆಸಲಿದೆ.
ಎಲ್ಲಾ ವಾಹನಗಳಿಗೆ ಅಳವಡಿಸಲಾಗುತ್ತಾ?
2026ರ ಅಂತ್ಯದಲ್ಲಿ ಹೊಸ ತಂತ್ರಜ್ಞಾನ ಜಾರಿಯಾಗುತ್ತಿದೆ. ಆರಂಭಿಕ ಹಂತದಲ್ಲಿ ಇದು ಹೊಸ ವಾಹನಗಳಿ ಅಳವಡಿಕೆ ಮಾಡಲಾಗುತ್ತದೆ. ಬಳಿಕ ಹಂತ ಹಂತವಾಗಿ ಇತರ ವಾಹನಗಳಿಗೆ ಅಳವಡಿಕೆ ಮಾಡಲಾಗುತ್ತದೆ. ಇದು ಬರೋಬ್ಬರಿ 5000 ಕೋಟಿ ರೂಪಾಯಿ ವೆಚ್ಚದ ಯೋಜನೆ ಪ್ರಗತಿಯಲ್ಲಿದೆ. ಈ ಸಿಮ್ ಚಿಪ್‌ಗೆ ಗ್ರಾಹಕರು ಎಷ್ಟು ಪಾವತಿಸಬೇಕು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಎಲ್ಲಾ ವಾಹನಗಳಿಗೆ ಅಳವಡಿಸಲಾಗುತ್ತಾ?
ADAS ಟೆಕ್ ಜೊತೆ ಕಾರ್ಡಿನೇಟ್
ಹೊಸ ಕಾರುಗಳಲ್ಲಿ ADAS (ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ತಂತ್ರಜ್ಞಾನ ಜೊತೆ ಈ ಸಿಮ್ ಚಿಪ್ ಕಾರ್ಡಿನೇಟ್ ಮಾಡಲಿದೆ. ಇದರಿದಂದ ರಸ್ತೆ ಸುರಕ್ಷತೆ ಪ್ರಮುಖ ಆಧ್ಯತೆ ಸಿಗಲಿದೆ. V2V ತಂತ್ರಜ್ಞಾನದಿಂದ ಭಾರತದಲ್ಲಿ ರಸ್ತೆ ಸುರಕ್ಷತೆ ಹಾಗೂ ಟ್ರಾಫಿಕ್ ನಿಯಮ ಪಾಲನೆಯಲ್ಲೂ ಸುಧಾರಣೆ ಕಾಣಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
