- Home
- Karnataka Districts
- Dakshina Kannada
- ರಾ. ಹೆದ್ದಾರಿ 75ರ ಸೂರಿಕುಮೇರು ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಸಂಚಾರ ಅಸ್ತವ್ಯಸ್ತ!
ರಾ. ಹೆದ್ದಾರಿ 75ರ ಸೂರಿಕುಮೇರು ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಸಂಚಾರ ಅಸ್ತವ್ಯಸ್ತ!
ಚಾಲಕನ ನಿಯಂತ್ರಣ ತಪ್ಪಿ ರಾ.ಹೆದ್ದಾರಿ 75ರ ಸೂರಿಕುಮೇರು ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ| ತಪ್ಪಿದ ಭಾರೀ ಅನಾಹುತ| ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡು|

ಅನಿಲ ಸಾಗಾಟದ ಗ್ಯಾಸ್ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿರುವ ಘಟನೆ ಮಂಗಳೂರು-ಬೆಂಗಳೂರು ರಾ.ಹೆದ್ದಾರಿ 75ರ ಸೂರಿಕುಮೇರು ಬಳಿ ಸಂಭವಿಸಿದೆ.

ಮಂಗಳವಾರ ಮುಂಜಾನೆ ನಾಲ್ಕು ಗಂಟೆಗೆ ಅನಿಲ ತುಂಬಿದ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಸೂರಿಕುಮೇರಿನ ಅಪಾಯಕಾರಿ ತಿರುವಿನಲ್ಲಿ ಮುಂಜಾನ್ 04 ಗಂಟೆ ಸುಮಾರಿಗೆ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿದೆ.

ಘಟನೆ ಬೆನ್ನಲ್ಲೇ ಎಚ್ಚೆತ್ತ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಬಹುದೊಡ್ಡ ಅನಾಹುತವೊಂದು ನಿಂತು ಹೋಗಿದೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ಅಗ್ನಿಶಾಮಕ ದಳ ಸಿಬ್ಬಂದಿ ಅನಿಲ ಸೋರಿಕೆಯಾಗದ ಪರಿಣಾಮ ಬಹುದೊಡ್ಡ ಅನಾಹುತ ತಪ್ಪಿದೆ. ಸದ್ಯ ಅನಿಲ ತುಂಬಿದ ಟ್ಯಾಂಕರ್ ಸ್ಥಳಾಂತರಿಸುವ ಕಾರ್ಯ ನಡೆಯಬೇಕಿದೆ ಎಂದಿದ್ದಾರೆ.

ಬದಲಿ ಮಾರ್ಗ: ಮಂಗಳೂರು ಕಡೆಯಿಂದ ಬರುವ ವಾಹನವನ್ನು ಕಲ್ಲಡ್ಕ, ವಿಟ್ಲ ರಸ್ತೆ ಮೂಲಕ ಹಾಗೂ ಬೆಂಗಳೂರು, ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳನ್ನು ಮಾಣಿ, ಬುಡೋಳಿ, ಕಬಕ ಮೂಲಕ ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ವಿಟ್ಲ ಪೊಲೀಸರು, ಅಗ್ನಿಶಾಮಕದಳವರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

2016ರಲ್ಲೂ ನಡೆದಿತ್ತು ಇಂತಹುದೇ ಅಪಘಾತ: ಇದಕ್ಕೂ ಮೊದಲು 2016ರಲ್ಲಿ ಇದೇ ಸ್ಥಳದಲ್ಲಿ ಇಂತಹುದೇ ಘಟನೆಯೊಂದು ಸಂಭವಿಸಿತ್ತು. ಅಂದೂ ಕೂಡಾ ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಯಾವುದೇ ಅನಾಹುತ ಸಂಭವಿಸಿರಲಿಲ್ಲ.

ಮರೆಯುವಂತಿಲ್ಲ ಪೆರ್ನೆ ಅನಿಲ ಸೋರಿಕೆ: 2013ರಲ್ಲಿ ಉಪ್ಪಿನಂಗಡಿ ಸಮೀಪದ ಪೆರ್ನೆ, ರಾ. ಹೆದ್ದಾರಿ 75ರಲ್ಲಿ ನಡೆದ ಕಹಿ ಘಟನೆ ಯಾರೂ ಮರೆಯುವಂತಿಲ್ಲ. ಅಂದು ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಗ್ಯಾಸ್ ಸೋರಿಕೆಯಾಗಿತ್ತು. ನೋಡ ನೋಡುತ್ತಿದ್ದಂತೆಯೇ ಸ್ಪೋಟ ಸಂಭವಿಸಿ ಇಡೀ ಊರಿಗೇ ಬೆಂಕಿ ತಗುಲಿತ್ತು. ಈ ಭೀಕರ ಅಪಘಾತದಲ್ಲಿ ಎಂಟು ಮಂದಿ ಸಜೀವ ದಹನಗೊಂಡಿದ್ದರು, ಮನೆ, ಅಂಗಡಿ, ವಾಹನಗಳೆಲ್ಲವೂ ಸುಟ್ಟು ಭಸ್ಮವಾಗಿದ್ದವು.

ಇನ್ನು ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾ.ಹೆದ್ದಾರಿ 75ರಲ್ಲಿ ಇಂತಹ ಘಟನೆಗಳು ಹೊಸದಲ್ಲ. ಅನೇಕ ಅಪಾಯಕಾರಿ ತಿರುವುಗಳಿರುವ ಈ ರಸ್ತೆಗಳಲ್ಲಿ ಚಾಲಕ ನಿಯಂತ್ರಣ ತಪ್ಪಿಯೋ ಅಥವಾ ಚಾಲಕರ ನಿರ್ಲಕ್ಷ್ಯದಿಂದಲೋ ಇಂತಹ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.