ಇಡೀ ದಿನ ಜ್ಯೇಷ್ಠ ಶುಕ್ಲ ಅಷ್ಟಮಿಯ ಪ್ರಭಾವ: ವ್ಯವಹಾರದಲ್ಲಿ ಲಾಭ: 12 ರಾಶಿಗಳ ಫಲಾಫಲ
ದಿನಾಂಕ 24ನೇ ಮೇ 2026 ರಂದು, ಚಂದ್ರನು ಸಿಂಹ ರಾಶಿಯಲ್ಲಿ ಸಂಚರಿಸುವುದರಿಂದ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಈ ದಿನದ ರಾಶಿ ಭವಿಷ್ಯವು ಪ್ರತಿಯೊಂದು ರಾಶಿಯ ಫಲಾಫಲಗಳು, ಎದುರಾಗುವ ಸವಾಲುಗಳು, ಮತ್ತು ಅದೃಷ್ಟದ ಬಣ್ಣ ಹಾಗೂ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡುತ್ತದೆ.

ಭಾನುವಾರ ದಿನಾಂಕ 24ನೇ ಮೇ 2026
ಇಂದು ಭಾನುವಾರ ದಿನಾಂಕ 24ನೇ ಮೇ 2026 ಆಗಿದೆ. ಜ್ಯೇಷ್ಠ ಮಾಸದ ಶುಕ್ಲ ಪಕ್ಷದ (ವೃಷಭ ರಾಶಿಯ ಹಂತ) ಅಷ್ಟಮಿ ತಿಥಿ . ನಕ್ಷತ್ರಪುಂಜಗಳಿಗೆ ಸಂಬಂಧಿಸಿದಂತೆ, ನಾಳೆ ಮಾಘ ನಕ್ಷತ್ರದ ಪ್ರಭಾವದಲ್ಲಿರುತ್ತದೆ ಮತ್ತು ವಿಶೇಷ ಗ್ರಹ ಸ್ಥಾನಗಳು ವ್ಯಾಘಾತ ಯೋಗ ಸೃಷ್ಟಿಸುತ್ತಿವೆ. ಖ್ಯಾತ ಜ್ಯೋತಿಷಿ ಡಾ. ಅನೀಶ್ ವ್ಯಾಸ್ ಪ್ರಕಾರ, ಇಡೀ ದಿನ ಚಂದ್ರನು ಸಿಂಹ ರಾಶಿ ಮೂಲಕ ಸಂಚರಿಸುತ್ತಾನೆ. ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

ಮೇಷ ರಾಶಿ
ಇಂದು ಇಡೀ ದಿನ ನೀವು ಸಂತೋಷದಲ್ಲಿರುತ್ತೀರಿ. ಮಾಡುವ ಕೆಲಸಗಳ ಮೇಲೆ ಶ್ರದ್ಧೆ ಹೆಚ್ಚಾಗಿ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ವ್ಯವಹಾರಗಳಿಗೆ ಸಂಬಂಧಿಸಿದ ವೆಚ್ಚಗಳು ಹೆಚ್ಚಾಗುತ್ತವೆ. ದೂರದ ಪ್ರಯಾಣದಿಂದ ಲಾಭ ಸಾಧ್ಯತೆ. ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 9
ವೃಷಭ ರಾಶಿ
ಶೈಕ್ಷಣಿಕ ಕೆಲಸಗಳಲ್ಲಿ ಗಮಮಾರ್ಹ ಆಸಕ್ತಿ ಹೆಚ್ಚಳವಾಗುತ್ತದೆ. ಮೂಲಸೌಕರ್ಯ ಮತ್ತು ಅನುಕೂಲತೆಗಳು ಹೆಚ್ಚಾಗಿ, ಆದಾಯ ಮೂಲದ ಸಂಖ್ಯೆ ಏರಿಕೆಯಾಗುತ್ತದೆ. ಆದ್ರೆ ತಾಳ್ಮೆ ಕಡಿಮೆಯಾಗಿ ಆಪ್ತರ ಜೊತೆ ಮನಸ್ತಾಪ ಉಂಟಾಗಬಹುದು. ಮಕ್ಕಳ ಆರೋಗ್ಯ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 2
ಮಿಥುನ ರಾಶಿ
ಇಂದು ಮಾತು ಮತ್ತು ನಡವಳಿಕೆ ಮೇಲೆ ನಿಗಾ ಇರಲಿ. ನಿಮ್ಮ ಕೋಪ ಅನಗತ್ಯ ಕಲಹಕ್ಕೆ ಕಾರಣವಾಗಬಹುದು. ಸ್ನೇಹಿತರ ಸಹಾಯದಿಂದ ಆರ್ಥಿಕವಾಗಿ ಸದೃಢರಾಗುತ್ತೀರಿ. ಈ ಸಮಯದಲ್ಲಿ ಆದಾಯದ ಮೂಲಗಳು ಬದಲಾಗಬಹುದು. ಇದು ಅತಿಯಾದ ಖರ್ಚುಗಳಿಗೆ ಕಾರಣವಾಗಬಹುದು.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 5
ಕರ್ಕಾಟಕ ರಾಶಿ
ಇಂದು ಸಂಯಮದಿಂದ ಕಾಪಾಡಿಕೊಳ್ಳದಿದ್ರೆ ನಿಮ್ಮ ದೀರ್ಘಕಾಲದ ಯೋಜನೆಗಳು ವಿಫಲವಾಗಬಹುದು. ಕೆಲಸದ ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಕಿರಿಕಿರಿ, ಆರೋಗ್ಯ ಸುಧಾರಣೆ ಮತ್ತು ದಿನನಿತ್ಯದ ಖರ್ಚುಗಳು ಹೆಚ್ಚಾಗಬಹುದು. ಇಂದು ನಿಮ್ಮಿಷ್ಟದ ದೇವರ ನಾಮಸ್ಮರಣೆ ಮಾಡಿದ್ರೆ ಒಳಿತು. ಸಾಧ್ಯವಾದ್ರೆ ಶಿವಾಲಯಕ್ಕೆ ಭೇಟಿ ನೀಡಿ ಪ್ರಾರ್ಥಿಸಿ.
ಅದೃಷ್ಟ ಬಣ್ಣ: ಹಾಲಿನ ಬಿಳಿ
ಅದೃಷ್ಟ ಸಂಖ್ಯೆ: 7
ಸಿಂಹ ರಾಶಿ
ವಿಲಾಸಿಮಯ ಜೀವನ ನಿಮ್ಮದಾಗಲಿದ್ದು, ಜೀವನದಲ್ಲಿ ಪ್ರಗತಿ ಕಾಣುತ್ತೀರಿ. ಶಿಕ್ಷಣ ಕ್ಷೇತ್ರದಲ್ಲಿರುವ ಸಿಂಹ ರಾಶಿಯವರು ಶುಭ ಸುದ್ದಿ ಕೇಳುತ್ತಾರೆ. ಕೆಲಸದ ಸ್ಥಳದಲ್ಲಿ ಹೊಸ ಸವಾಲುಗಳು ಎದುರಾಗೋದರಿಂದ ನಾಯಕತ್ವ ಗುಣ ಹೊರ ಬರಲಿದೆ. ಕುಟುಂಬದಲ್ಲಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದರಿಂದ ಒಳ್ಳೆಯದಾಗಲಿದೆ. ನಿರಾಶೆ ಮತ್ತು ಅತೃಪ್ತ ಭಾವನೆಗಳಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು.
ಅದೃಷ್ಟ ಬಣ್ಣ: ಚಿನ್ನ
ಅದೃಷ್ಟ ಸಂಖ್ಯೆ: 1
ಕನ್ಯಾ ರಾಶಿ
ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಾಗೆಯೇ ಉದ್ಯೋಗ ಶೈಲಿ ಅಥವಾ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೀರಿ. ಅತಿಯಾದ ಅತ್ಮವಿಶ್ವಾಸ ಸೋದರರ ಜೊತೆಗಿನ ಮನಸ್ತಾಪಕ್ಕೆ ಕಾರಣವಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಿ.
ಅದೃಷ್ಟ ಬಣ್ಣ: ಗಾಢ ಹಸಿರು
ಅದೃಷ್ಟ ಸಂಖ್ಯೆ: 6
ತುಲಾ ರಾಶಿ
ಇಂದು ಸ್ನೇಹಿತರ ಸಹಾಯದಿಂದ ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬರುತ್ತವೆ. ಹೊಸತನಕ್ಕೆ ನಿಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳಿ. ಇಂದು ಜೀವನ ಸ್ವಲ್ಪ ಕಷ್ಟ ಎನಿಸಬಹುದು. ಹಾಗಾಗಿ ಸಣ್ಣಪುಟ್ಟ ವಿಷಯಗಳಿಗೂ ನೀವು ಕೋಪಗೊಳ್ಳುತ್ತೀರಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟ ಬಣ್ಣ: ತಿಳಿ ನೀಲಿ
ಅದೃಷ್ಟ ಸಂಖ್ಯೆ: 8
ವೃಶ್ಚಿಕ ರಾಶಿ
ಇಂದು ಈ ರಾಶಿಯವರಿಗೆ ಮಿಶ್ರಫಲ ಸಿಗಲಿದ್ದು, ಯಾವುದೇ ಕಾರಣಕ್ಕೂ ಹತಾಶೆಗೊಳ್ಳಬೇಡಿ. ನಿಮ್ಮ ಧ್ವನಿ ಎಲ್ಲಾ ಭಾಗದಲ್ಲಿಯೂ ಪ್ರತಿಧ್ವನಿಸುತ್ತದೆ. ವ್ಯವಹಾರದಲ್ಲಿ ಲಾಭ, ಸ್ನೇಹಿತರ ಭೇಟಿ,ಆಸ್ತಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಸಹೋದರ ಮತ್ತು ಸಹೋದರಿಯರ ಸಹಾಯದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ವ್ಯವಹಾರದಲ್ಲಿ ಕೆಲವು ವಿಷಯಗಳು ಇಂದು ಕೊಂಚ ಜಟಿಲವಾಗಿ ಕಾಣಿಸಬಹುದು. ಪ್ರತಿಯೊಂದು ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಿ.
ಅದೃಷ್ಟ ಬಣ್ಣ: ಕೆಂಗಂದು
ಅದೃಷ್ಟ ಸಂಖ್ಯೆ: 3
ಧನು ರಾಶಿ
ಇಂದು ಮನಸ್ಸಿನ ಶಾಂತಿ ನಿಮಗೆ ತೃಪ್ತಿಯ ಅನುಭವವನ್ನುಂಟು ಮಾಡುತ್ತದೆ. ವ್ಯವಹಾರದಲ್ಲಿನ ಹಠಾತ್ ಆರ್ಥಿಕ ಲಾಭದಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ವಾಹನ ವೆಚ್ಚಗಳನ್ನು ನಿಯಂತ್ರಿಸಿ. ಹಳೆ ಸ್ನೇಹಿತರ ಭೇಟಿ ಮತ್ತು ಮಾತುಕತೆಯಿಂದ ಮನಸ್ಸು ಹಗುರವಾಗುತ್ತದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗೋದಿರಂದ ಸಾಧ್ಯವಾದಷ್ಟು ಮೌನವಾಗಿ ಪರಿಸ್ಥಿತಿಯನ್ನು ನಿಭಾಯಿಸಿ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 4
ಮಕರ ರಾಶಿ
ಕುಟುಂಬದೊಂದಿಗೆ ಧಾರ್ಮಿಕ ಅಥವಾ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡುತ್ತೀರಿ. ಇಂದು ಧಾರ್ಮಿಕ ಚಟುವಟಿಕೆಯಲ್ಲಿ ಇಡೀ ದಿನ ಕಳೆಯುತ್ತೀರಿ. ಆತ್ಮವಿಶ್ವಾಸದ ಕೊರತೆಯಿಂದಾಗಿ ಮಾನಸಿಕ ಒತ್ತಡ ಹೆಚ್ಚಳವಾಗಬಹುದು. ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ.
ಅದೃಷ್ಟ ಬಣ್ಣ: ಕಪ್ಪು
ಅದೃಷ್ಟ ಸಂಖ್ಯೆ: 10
ಕುಂಭ ರಾಶಿ
ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ನಿಮ್ಮ ಕಾರ್ಯನಿರತ ವೇಳಾಪಟ್ಟಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ಇಡೀ ದಿನ ವಿಚಲಿತರಾಗುತ್ತೀರಿ. ವಿದ್ಯಾರ್ಥಿಗಳಿಗೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಮಾತುಗಳ ಮೇಲೆ ನಿಗಾ ಇರಲಿ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 11
ಮೀನ ರಾಶಿ
ನಿರುದ್ಯೋಗಿಗಳಿಗೆ ಸಂದರ್ಶನದ ಕರೆ ಬರಲಿದೆ. ನಿಮ್ಮಿಷ್ಟದ ಸ್ಥಳದಲ್ಲಿ ಕೆಲಸ ಸಿಗುವ ಅವಕಾಶಗಳು ಬರಲಿವೆ. ಸ್ನೇಹಿತರೊಂದಿಗೆ ಅನಿರೀಕ್ಷಿತ ಭೇಟಿ ಸಂತೋಷವನ್ನುಂಟು ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳಿಗೆ ಅವಕಾಶ ಕೊಡಬೇಡಿ. ಯಾವುದೋ ಒಂದು ವಿಷಯದ ಬಗ್ಗೆ ಹೆಚ್ಚು ಚಿಂತಿತರಾಗುತ್ತೀರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಿ.
ಅದೃಷ್ಟ ಬಣ್ಣ: ಕೇಸರಿ
ಅದೃಷ್ಟ ಸಂಖ್ಯೆ: 12

