- Home
- Astrology
- Daily Horoscope
- ಇಂದು ಸಿಂಹ ರಾಶಿಯಲ್ಲಿ ಚಂದ್ರಗೋಚರ, ಧ್ರುವ ಯೋಗದಿಂದ 3 ರಾಶಿಗೆ ಸಂತೋಷ, ಈ ತಪ್ಪು ಮಾಡಬೇಡಿ
ಇಂದು ಸಿಂಹ ರಾಶಿಯಲ್ಲಿ ಚಂದ್ರಗೋಚರ, ಧ್ರುವ ಯೋಗದಿಂದ 3 ರಾಶಿಗೆ ಸಂತೋಷ, ಈ ತಪ್ಪು ಮಾಡಬೇಡಿ
23ನೇ ಮೇ 2026, ಶನಿವಾರದ ಈ ದಿನ ಭವಿಷ್ಯವು 12 ರಾಶಿಗಳ ಫಲಾಫಲಗಳನ್ನು ವಿವರಿಸುತ್ತದೆ. ಮಾಘ ನಕ್ಷತ್ರ ಮತ್ತು ಧ್ರುವ ಯೋಗದ ಪ್ರಭಾವದಿಂದಾಗಿ, ಕೆಲವು ರಾಶಿಗಳಿಗೆ ವೃತ್ತಿ ಸವಾಲುಗಳು ಎದುರಾದರೆ, ಇನ್ನು ಕೆಲವರಿಗೆ ಆರ್ಥಿಕ ಲಾಭ ಮತ್ತು ಕೌಟುಂಬಿಕ ಬೆಂಬಲ ಸಿಗಲಿದೆ.

ದಿನ ಭವಿಷ್ಯ
ಇಂದು ಶನಿವಾರ, 23ನೇ ಮೇ 2026 ಆಗಿದ್ದು, 9:29:45 ರವರೆಗೆ (ಮರುದಿನ ಬೆಳಿಗ್ಗೆ 4:29) ಇರುತ್ತದೆ, ನಂತರ ನವಮಿ ತಿಥಿ ಪ್ರಾರಂಭವಾಗುತ್ತದೆ. ಮಾಘ ನಕ್ಷತ್ರ 10:10:04 (ಬೆಳಗ್ಗೆ 2:10) ರವರೆಗೆ ಇರುತ್ತದೆ, ನಂತರ ಪೂರ್ವಫಲ್ಗುಣಿ ನಕ್ಷತ್ರವು ಪ್ರಾರಂಭವಾಗುತ್ತದೆ. ಬೆಳಗ್ಗೆ 6.13ರವರೆಗೆ ವಿಶೇಷ ಗ್ರಹ ಸ್ಥಾನಗಳಿಂದಾಗಿ ಧ್ರುವ ಯೋಗ ರೂಪಗೊಳ್ಳುತ್ತದೆ. ನಂತರ ವ್ಯಾಘಾಟ ಯೋಗ ಬರುತ್ತದೆ. ಸಂಜೆ 4.43ರವರೆಗೆ ವಿಷ್ಟಿಕರಣ ಜಾರಿಯಲ್ಲಿರುತ್ತದೆ.

ಮೇಷ ರಾಶಿ
ಈ ರಾಶಿಯವರ ವೃತ್ತಿಜೀವನದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ದಿನ ಸಾಮಾನ್ಯಕ್ಕಿಂತ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಪ್ರತಿಕೂಲದ ಸಂದರ್ಭಗಳನ್ನು ಎದುರಿಸಬಹುದು. ದೂರದ ಪ್ರಯಾಣದಿಂದ ಲಾಭ ಹೆಚ್ಚಾಗುವ ಸಾಧ್ಯತೆಗಳಿವೆ. ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 9
ವೃಷಭ ರಾಶಿ
ಅಧ್ಯಯನ ಮತ್ತು ಬೌದ್ಧಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಶೈಕ್ಷಣಿಕ ವಲಯದಲ್ಲಿರುವ ಜನರು ಶುಭ ಸುದ್ದಿಗಳನ್ನು ಕೇಳುತ್ತಾರೆ. ಸೌಕರ್ಯ ಮತ್ತು ಅನುಕೂಲತೆಯ ಮೂಲಗಳು ಹೆಚ್ಚಾಗುತ್ತವೆ. ಇದರೊಂದಿಗೆ ನಿಮ್ಮ ಆದಾಯ ಮೂಲಗಳು ಹೆಚ್ಚಳಗೊಂಡು, ವೈಯಕ್ತಿಕ ಜೀವನದಲ್ಲಿನ ಸಂತೋಷ ಹೆಚ್ಚಳವಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 2
ಮಿಥುನ ರಾಶಿ
ಇಂದು ನೀವು ಆಡುವ ಮಾತುಗಳ ಮೇಲೆ ಎಚ್ಚರವಾಗಿರಿ. ಹಾಗೆಯೇ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳಲು ಪ್ರಯತ್ನಿಸೋದು ಸಹ ಒಳ್ಳೆಯದು. ಆದಾಯ ಹೆಚ್ಚಳಕ್ಕಾಗಿ ಹೊಸ ಮಾರ್ಗ ಕಂಡುಕೊಳ್ಳಲು ಸ್ನೇಹಿತರಿಂದ ಸಹಾಯ ಸಿಗಲಿದೆ. ದಿನನಿತ್ಯದ ವೆಚ್ಚಗಳು ಹೆಚ್ಚಾಗಿ, ಮಾನಸಿಕ ಆರೋಗ್ಯದಲ್ಲಿ ಏರುಪೇರು ಆಗಬಹುದು. ವಾಹನ ನಿರ್ವಹಣಾ ವೆಚ್ಚಗಳು ಹೆಚ್ಚಾಗಬಹುದು.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 5
ಕರ್ಕಾಟಕ ರಾಶಿ
ಇಂದು ಅನಗತ್ಯವಾದ ಕೋಪವನ್ನು ನಿಯಂತ್ರಿಸಿ, ಇಲ್ಲವಾದ್ರೆ ನಿಮ್ಮ ವೃತ್ತಿಜೀವನದ ಮೇಲೆ ನೆಗೆಟಿವ್ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಳೆಯ ಸ್ನೇಹಿತರ ಭೇಟಿ ಲಾಭದಾಯಕವಾಗಲಿದೆ. ಹಾಗೆಯೇ ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಖರ್ಚು ಮತ್ತು ವೆಚ್ಚಗಳ ಬಗ್ಗೆ ಹುಷಾರ್ ಆಗಿರಿ.
ಅದೃಷ್ಟ ಬಣ್ಣ: ಹಾಲಿನ ಬಿಳಿ
ಅದೃಷ್ಟ ಸಂಖ್ಯೆ: 7
ಸಿಂಹ ರಾಶಿ
ಐಷಾರಾಮಿ ಜೀವನದ ಸೌಲಭ್ಯಗಳು ನಿಮ್ಮದಾಗುತ್ತವೆ. ಇಡೀ ದಿನ ಸಂತೋಷಮಯವಾಗಿದ್ದು, ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ನಿಮ್ಮ ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಕುಟುಂಬ ನಿಮ್ಮೊಂದಿಗೆ ಇರುತ್ತದೆ. ನಿರಾಶೆ ಮತ್ತು ಅತೃಪ್ತಿ ಭಾವನೆಗಳು ಮನೆಯಲ್ಲಿ ಉದ್ವಿಗ್ನತೆಯ ವಾತಾವರಣವನ್ನುಂಟು ಸೃಷ್ಟಿಸಬಹುದು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ.
ಅದೃಷ್ಟ ಬಣ್ಣ: ಚಿನ್ನ
ಅದೃಷ್ಟ ಸಂಖ್ಯೆ: 1
ಕನ್ಯಾ ರಾಶಿ
ಇಂದು ನೀವು ಸಹೋದ್ಯೋಗಿಗಳಿಗೆ ಆತ್ಮವಿಶ್ವಾಸ ತುಂಬುತ್ತೀರಿ. ಉದ್ಯೋಗ ಬದಲಾವಣೆ ಅಥವಾ ಕೆಲಸ ಮಾಡುವ ಸ್ಥಳ ಬದಲಾಗುವ ಸಾಧ್ಯತೆಗಳಿವೆ. ಮೇಲಾಧಿಕಾರಿಗಳಿಂದ ಗಮನಾರ್ಹ ಬೆಂಬಲದೊಂದಿಗೆ ಸಂಬಳ ಏರಿಕೆಯಾಗುವ ಸಾಧ್ಯತೆಗಳಿವೆ. ಸಂಗೀತ, ಕಲೆ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹೂಡಿಕೆಗೆ ಇಂದು ಅನುಕೂಲಕರವಾದ ದಿನವಾಗಲಿದೆ. ಸಹೋದರರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಮಯ ಬರಬಹುದು.
ಅದೃಷ್ಟ ಬಣ್ಣ: ಗಾಢ ಹಸಿರು
ಅದೃಷ್ಟ ಸಂಖ್ಯೆ: 6
ತುಲಾ ರಾಶಿ
ಇಂದು ನೀವು ಹೆಚ್ಚು ಕೋಪಗೊಳ್ಳುವ ಸನ್ನಿವೇಶ ಸೃಷ್ಟಿಯಾಗಬಹುದು. ಆದ್ದರಿಂದ ಸಂಯಮದಿಂದ ವರ್ತಿಸಿ. ವ್ಯವಹಾರದಲ್ಲಿ ಉಂಟಾಗುವ ಗಮನಾರ್ಹ ಬದಲಾವಣೆಗಳು ನಿಮ್ಮನ್ನು ವಿಚಲಿತರನ್ನಾಗಿ ಮಾಡಬಹುದು. ಆದ್ರೆ ನಿಮ್ಮ ಕಠಿಣ ಪರಿಶ್ರಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗಲಿದ್ದು, ರಜೆ ಹಾಕಿ ಕುಟುಂಬದೊಂದಿಗೆ ಸಮಯ ಕಳೆಯಲು ಇದು ಸೂಕ್ತ ದಿನವಾಗಿದೆ. ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಬೇರೆ ದೃಷ್ಟಿಕೋನ ಹೊಂದಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟ ಬಣ್ಣ: ತಿಳಿ ನೀಲಿ
ಅದೃಷ್ಟ ಸಂಖ್ಯೆ: 8
ವೃಶ್ಚಿಕ ರಾಶಿ
ಇಂದು ಈ ರಾಶಿಯವರಿಗೆ ಮಿಶ್ರ ದಿನವಾಗಿದೆ. ಆದ್ರೆ ಸಮಾಜದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿರಲಿದ್ದ, ನಿಮ್ಮ ಉಪಸ್ಥಿತಿ ತುಂಬಾ ಪ್ರಮುಖವಾಗಿರುತ್ತದೆ. ಹೊಸ ವ್ಯಾಪಾರಗಳನ್ನು ಆರಂಭಿಸಲು ಸೂಕ್ತ ವಾತಾವರಣ ನಿರ್ಮಾಣವಾಗಲಿದೆ. ಕುಟುಂಬ ಸಂಬಂಧಗಳಲ್ಲಿ ಮಾಧುರ್ಯದ ವಾತಾವರಣ ನಿರ್ಮಾಣವಾಗಲಿದೆ. ವ್ಯವಹಾರದಲ್ಲಿ ಕೆಲ ವಿಷಯಗಳು ಇದ್ದಕ್ಕಿದ್ದಂತೆ ಜಟಿಲವಾಗಬಹುದು, ಆದ್ದರಿಂದ ಬುದ್ಧಿವಂತಿಕೆಯಿಂದ ವರ್ತಿಸಿ ಮತ್ತು ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ
ಅದೃಷ್ಟ ಬಣ್ಣ: ಕೆಂಗಂದು
ಅದೃಷ್ಟ ಸಂಖ್ಯೆ: 3
ಧನು ರಾಶಿ
ಕುಟುಂಬದಲ್ಲಿನ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ.ಇದರಿಂದ ಮಾನಸಿಕ ಶಾಂತಿ ನಿಮ್ಮದಾಗುತ್ತದೆ. ಕುಟುಂಬದಲ್ಲಿ ಉತ್ತಮ ಸಾಮರಸ್ಯ ಮತ್ತು ಸಮನ್ವಯ ಇರಲಿದೆ. ವ್ಯವಹಾರದಲ್ಲಿ ಹಠಾತ್ ಲಾಭ, ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡುತ್ತವೆ. ಹಳೆಯ ಆಪ್ತರನ್ನು ಭೇಟಿಯಾಗೋದರಿಂದ ನಿಮ್ಮಲ್ಲಿನ ಉತ್ಸಾಹ ಹೆಚ್ಚಾಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟ ಬಣ್ಣ:ಹಳದಿ
ಅದೃಷ್ಟ ಸಂಖ್ಯೆ: 4
ಮಕರ ರಾಶಿ
ಇಂದು ನಿಮಗೆ ಸಂಗೀತ, ಕಲೆ ಅಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿಮಗೆ ಆಸಕ್ತಿಯನ್ನುಂಟು ಮಾಡಬಹುದು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಸಾಧ್ಯತೆ. ಆದ್ರೆ ಇಂದು ಸ್ವಲ್ಪ ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು. ಸಹೋದರರ ಜೊಯೆ ಸೈದಾಂತಿಕ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಅದೃಷ್ಟ ಬಣ್ಣ: ಕಪ್ಪು
ಅದೃಷ್ಟ ಸಂಖ್ಯೆ: 10
ಕುಂಭ ರಾಶಿ
ಮನಸ್ಸನ್ನು ಸಕಾರಾತ್ಮಕವಾಗಿಟ್ಟುಕೊಳ್ಳಲು ಯೋಚಿಸಿ. ಇದರಿಂದ ನಿಮ್ಮಲ್ಲಿನ ಮಾನಸಿಕ ತೃಪ್ತಿಯ ಹೆಚ್ಚಳವಾಗುತ್ತದೆ. ಹಳೆ ಸ್ನೇಹಿತರ ಸಹಾಯದಿಂದಾಗಿ ಹೊಸ ಮತ್ತು ವಿಶಿಷ್ಟ ಮಾರ್ಗದ ಮೂಲಕ ಹಣ ಗಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ತಾಯಿಯ ಆರೋಗ್ಯದಲ್ಲಿ ದೊಡ್ಡ ಚೇತರಿಕೆ ಕಂಡು ಬರಲಿದೆ. ಇಂದು ನಿಮ್ಮ ಶ್ರಮ ಹೆಚ್ಚು ವ್ಯಯವಾಗಲಿದೆ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 11
ಮೀನ ರಾಶಿ
ಇಂದು ಮೀನ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಪಾದರಸದಂತೆ ಆಕ್ಟಿವ್ ಆಗಿ ಕೆಲಸ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತೀರಿ. ಆದ್ರೆ ಯಾವುದೋ ಒಂದು ವೈಯಕ್ತಿಕ ಸಮಸ್ಯೆ ನಿಮ್ಮನ್ನು ಬಾಧಿಸುತ್ತದೆ. ನಿರುದ್ಯೋಗಿಗಳಿಗೆ ಸಂದರ್ಶನದಲ್ಲಿ ಮೆಚ್ಚುಗೆ ಸಿಗಲಿದೆ. ಇಂದು ರುಚಿಕರವಾದ ಊಟ ಮಾಡಲಿದ್ದೀರಿ. ಇಂದು ಯಾವುದೇ ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆವರಿಸಿಕೊಳ್ಳಲು ಬಿಡಬೇಡಿ. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಅದೃಷ್ಟ ಬಣ್ಣ: ಕೇಸರಿ
ಅದೃಷ್ಟ ಸಂಖ್ಯೆ: 12

