- Home
- News
- Crime
- ಮದುವೆಗೆ ಮುನ್ನವೇ ವರನ ಹತ್ಯೆಗೆ 3 ಬಾರಿ ಯತ್ನಿಸಿದ್ದ ಸಿಯಾ! ಪುಣೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸತ್ಯ
ಮದುವೆಗೆ ಮುನ್ನವೇ ವರನ ಹತ್ಯೆಗೆ 3 ಬಾರಿ ಯತ್ನಿಸಿದ್ದ ಸಿಯಾ! ಪುಣೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸತ್ಯ
ರಿಯಲ್ ಎಸ್ಟೇಟ್ ಕಂಪನಿ ನಿರ್ದೇಶಕ ಕೇತನ್ ವಿಶಾಲ್ ಅಗರ್ವಾಲ್ ಹತ್ಯೆ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಕೇತನ್ ತನ್ನ ಭಾವಿ ಪತ್ನಿಯನ್ನು ಎಷ್ಟು ಪ್ರೀತಿ ಮಾಡ್ತಿದ್ದರು ಎಂಬುದು ವಿಡಿಯೋ ಮೂಲಕ ಬಹಿರಂಗವಾಗಿದೆ. ಕೊಲೆಪಾತಕಿ ಸಿಯಾ ಮೊದ್ಲೂ ಕೇತನ್ ಹತ್ಯೆಗೆ ಪ್ರಯತ್ನಿಸಿ ವಿಫಲವಾಗಿದ್ಲು ಎಂಬುದು ಗೊತ್ತಾಗಿದೆ.

ಜೂನ್ 14 ರಂದೇ ನಡೆದಿತ್ತು ಮೊದಲ ಪ್ರಯತ್ನ
ಕೇತನ್ ಭಾವಿ ಪತ್ನಿ ಸಿಯಾ, ಕೇತನ್ ಕಥೆ ಮುಗಿಸೋದ್ರಲ್ಲಿ ಯಶಸ್ವಿಯಾಗಿದ್ದಾಳೆ. ಪ್ರೇಮಿ ಜೊತೆ ಸೇರಿ ತನ್ನನ್ನು ಅಪಾರವಾಗಿ ಪ್ರೀತಿ ಮಾಡ್ತಿದ್ದ ಕೇತನ್ ಜೀವ ಬಲಿ ಪಡೆದಿದ್ದಾಳೆ. ಜೂನ್ 19 ರಂದು ಕೇತನ್, ಸಿಯಾ ಮೋಸಕ್ಕೆ ಬಲಿಯಾಗಿದ್ದಾರೆ. ಆದ್ರೆ ಜೂನ್ 14 ರಂದು ಕೇತನ್ ಕೊಲ್ಲಲು ಮೊದಲ ಪ್ರಯತ್ನ ನಡೆದಿತ್ತು. ಸಿಯಾ ಕೇತನ್ ಅವರನ್ನು ಲೋಹಗಢ ಕೋಟೆಗೆ ಕರೆದೊಯ್ದಿದ್ದಳು. ಸಿಯಾ ಪ್ರೇಮಿ ಚೇತನ್ ಚೌಧರಿ ಈ ಪ್ಲಾನ್ ಭಾಗವಾಗಿದ್ದ. ಹಾವಿನ ನೆಪ ಹೇಳಿ ಸಿಯಾ, ಕೇತನ್ ಅವರನ್ನು ತಬ್ಬಿಕೊಳ್ಳುವ ನಾಟಕ ಆಡಿ ಪ್ರಪಾತಕ್ಕೆ ತಳ್ಳುವ ಪ್ರಯತ್ನ ನಡೆಸಿದ್ದಳು. ಆದ್ರೆ ಕೇತನ್ ಬಚಾವ್ ಆಗಿದ್ದ. ಸಿಯಾ, ಹಾವು ಅಂತ ಕಿರಿಚಿದ್ದರಿಂದ ಆತನ ಗಮನ ಬೇರೆಡೆ ಹೋಗಿದ್ದು. ಇದೊಂದು ಸಂಚು ಎಂಬ ಸತ್ಯ ಕೇತನ್ ಅರಿವಿಗೆ ಬರ್ಲಿಲ್ಲ.
ಅದೇ ಜಾಗದಲ್ಲಿ ಎರಡನೇ ಪ್ರಯತ್ನ
ಸಿಯಾ ತನ್ನ ಹುಟ್ಟುಹಬ್ಬದಂದು ಮತ್ತೆ ಅದೇ ಜಾಗವನ್ನು ಹತ್ಯೆಗೆ ಆಯ್ಕೆ ಮಾಡ್ಕೊಂಡಿದ್ದಾಳೆ. ಕೇತನ್ ತಲೆಯಲ್ಲಿ ಬೇರೆ ಪ್ಲಾನ್ ಇದ್ರೂ ಸಿಯಾಗಾಗಿ ಪ್ಲಾನ್ ಬದಲಿಸಿದ್ದ ಕೇತನ್ ಲೋಹಗಡ್ ಕೋಟೆಗೆ ಕರೆದೊಯ್ದಿದ್ದರು. ಅಲ್ಲಿ ಸಾಕಷ್ಟು ಸರ್ಪ್ರೈಸ್ ಸಿಯಾಗೆ ಕಾದಿತ್ತು. ಆದ್ರೆ ಸಿಯಾ, ಪ್ರೇಮಿ ಜೊತೆ ಸೇರಿ ಕೇತನ್ ಅವರನ್ನು ಪ್ರಪಾತಕ್ಕೆ ತಳ್ಳಿ, ಇದೊಂದು ಅಪಘಾತ ಎಂಬಂತೆ ಕಥೆ ಕಟ್ಟಿದ್ದಳು.
ಪೂರ್ವ ಬರ್ತ್ ಡೇ ವಿಡಿಯೋ ವೈರಲ್
ಕೇತನ, ಸಿಯಾಳನ್ನು ಮನಸ್ಪೂರ್ವಕವಾಗಿ ಪ್ರೀತಿ ಮಾಡ್ತಿದ್ದರು. ಕೇತನ್ ಹಾಗೂ ಸಿಯಾ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಒಂದು ವಿಡಿಯೋದಲ್ಲಿ ಕೇತನ್ ಸಿಯಾಳ ಬರ್ತ್ ಡೇ ಆಚರಿಸ್ತಿದ್ದಾರೆ. ಕಾರಿನಲ್ಲಿ ಕುಳಿತು ಸಿಯಾಗೆ ಹೂ ನೀಡುವ ಕೇತನ್ ಕಾರಿನ್ ಸನ್ ರೂಫ್ ತೆಗೆಯುತ್ತಾರೆ. ಅಲ್ಲಿ ಹೂವಿನ ಚಿತ್ತಾರ ನೋಡ್ಬಹುದು. ನಂತ್ರ ಇಬ್ಬರೂ ಡೇಟ್ ಗೆ ಹೋಗಿದ್ದು, ಅದ್ರ ಒಂದಿಷ್ಟು ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಪಾಲಕರ ಕಣ್ಣೀರು
ಸಿಯಾ ಮತ್ತು ಕೇತನ ಮದುವೆ ಜೈಪುರದಲ್ಲಿ ಅದ್ಧೂರಿಯಾಗಿ ನಡೆಯಲಿತ್ತು. ಎರಡೂ ಕುಟುಂಬಗಳು ಮದುವೆಗೆ ಭರ್ಜರಿ ತಯಾರಿ ನಡೆಸಿದ್ದವು. ಸಮಾರಂಭಕ್ಕಾಗಿ ಜೈಪುರದಲ್ಲಿ ಐಷಾರಾಮಿ ಅರಮನೆ ಬುಕ್ ಆಗಿತ್ತು. ಅತಿಥಿಗಳಿಗಾಗಿ ಎರಡು ಚಾರ್ಟರ್ಡ್ ವಿಮಾನದ ವ್ಯವಸ್ಥೆ ನಡೆದಿತ್ತು. ಆದ್ರೆ ಕೇತನ ಸಾವು ಇಡೀ ಕುಟುಂಬವನ್ನು ತೀವ್ರ ಆಘಾತಕ್ಕೆ ದೂಡಿದೆ. ಮದುವೆ ಮನೆ ಸ್ಮಶಾನ ಮೌನದಲ್ಲಿದೆ. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಆಪ್ತರು ದುಃಖದಲ್ಲಿ ಮುಳುಗಿದ್ದಾರೆ. ಸಿಯಾ ಈ ಮದುವೆಗೆ ಸಿದ್ಧವಾಗಿಲ್ಲದಿದ್ದರೆ, ಅವಳು ನಿರಾಕರಿಸಬಹುದಿತ್ತು. ನನ್ನ ಮಗನ ಜೀವ ತೆಗೆಯುವ ಅಗತ್ಯವೇನಿತ್ತು ಅಂತ ಪಾಲಕರು ಗೋಳಾಡ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

