ಆದಿ ಕೈಲಾಸ ದರ್ಶನದ ಫೋಟೋ ಹಂಚಿಕೊಂಡ ರಿಷಬ್ ಪಂತ್, ಎಲ್ಲವೂ ಶಿವನ ಕೃಪೆ ಎಂದ ಕ್ರಿಕೆಟಿಗ
ಐಪಿಎಲ್ ಟೂರ್ನಿ ಬಳಿಕ ವಿಶ್ರಾಂತಿಯಲ್ಲಿದ್ದ ರಿಷಬ್ ಪಂತ್, ಸದ್ದಿಲ್ಲದೆ ಆದಿ ಕೈಲಾಸ ಹಾಗೂ ಓಂ ಪರ್ವತ ದರ್ಶನ ಪಡೆದಿದ್ದಾರೆ. ಓಂ ನಮಃ ಶಿವಾಯ ಎಂದು ಪ್ರಯಾಣದ ಕೆಲ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ.

ರಹಸ್ಯವಾಗಿ ತೆರಳಿ ದರ್ಶನ ಪಡೆದಿದ್ದ ರಿಷಬ್ ಪಂತ್
ಐಪಿಎಲ್ ಟೂರ್ನಿಯಲ್ಲಿ ತೀವ್ರ ಹಿನ್ನಡೆ, ನಾಯಕತ್ವದಿಂದ ಹಿಂದೆ ಸರಿದ ಬಳಿಕ ರಿಷಬ್ ಪಂತ್ ಬ್ರೇಕ್ ಪಡೆದುಕೊಂಡಿದ್ದಾರೆ. ಈ ವಿಶ್ರಾಂತಿಯಲ್ಲಿ ರಿಷಬ್ ಪಂತ್ ಉತ್ತರಖಂಡ ಪ್ರವಾಸ ಮಾಡಿದ್ದಾರೆ. ವಿಶೇಷ ಅಂದರೆ ಆದಿ ಕೈಲಾಸ, ಓಂ ಪರ್ವತ ದರ್ಶನ ಮಾಡಿದ್ದಾರೆ. ಇತ್ತೀಚೆಗೆ ರಹಸ್ಯವಾಗಿ ತೆರಳಿ ಶಿವನ ದರ್ಶನ ಪಡೆದಿದ್ದ ರಿಷಬ್ ಪಂತ್ ಇದೀಗ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ.
ಆದಿ ಕೈಲಾಸ, ಓಂ ಪರ್ವತ ದರ್ಶನ
ಶಿವ ಮಾನಸಸರೋವರದ ಕೈಲಾಸ ಪರ್ವತದಲ್ಲಿ ತಪಸ್ಸು ಮಾಡುವ ಮೊದಲು ಉತ್ತರಖಂಡದ ಪಿತೋರಘಡ ಜಿಲ್ಲೆಯಲ್ಲಿರುವ ಆದಿ ಕೈಲಾಸದಲ್ಲಿ ತಪಸ್ಸು ಮಾಡಿದ್ದರು ಎಂಬುದು ಪುರಾಣಗಳಲ್ಲಿ ಉಲ್ಲೇಖವಿದೆ. ಇದರ ಪಕ್ಕದಲ್ಲೇ ಇರುವ ಕುಟಿ ಅನ್ನೋ ಗ್ರಾಮಕ್ಕೆ ಪಾಂಡವರ ಕುಂತಿಯಿಂದ ಈ ಹೆಸರು ಬಂದಿದೆ ಅನ್ನೋ ನಂಬಿಕೆ ಇದೆ.
ಓಂ ಪರ್ವತ ದರ್ಶನ ಪಡೆದ ರಿಷಬ್ ಪಂತ್
ಶಿವ ಪಾರ್ವತಿಯ ಮದುವೆ ಮೆರವಣಿಗೆ ತಂಗಿದ್ದು ಇದೇ ಸ್ಥಳದಲ್ಲಿ. ಹೀಗಾಗಿ ಇದು ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಈ ಪವಿತ್ರ ಕ್ಷೇತ್ರಕ್ಕೆ ರಿಷಬ್ ಫಂತ್ ಭೇಟಿ ನೀಡಿದ್ದಾರೆ. ಇದೇ ವೇಳೆ ಓಂ ಪರ್ವತ ದರ್ಶನ ಪಡೆದಿದ್ದಾರೆ. ಹಿಮಗಳಿಂದ ಆವೃತ್ತವಾಗಿರುವ ಈ ಪರ್ವತಗಳಲ್ಲಿ ಓಂ ಅಕ್ಷರ ಕಾಣುತ್ತದೆ. ಹೀಗಾಗಿ ಈ ಸ್ಥಳ ಅತ್ಯಂತ ಪವಿತ್ರವಾಗಿದೆ.
ದೇವ ಭೂಮಿ ಅತ್ಯಂತ ವಿಶೇಷ
ಪ್ರವಾಸದ ಅದ್ಭುತ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ದೇವರ ದರ್ಶನ, ಪ್ರಕೃತಿಯ ಸುಂದರ ತಾಣ, ಕಾರು ಪ್ರಯಾಣದ ಹಲವು ಅದ್ಭುತ ಚಿತ್ರಗಳು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ವೇಳೆ ನಮ್ಮ ಉತ್ತರಖಂಡ ಅತ್ಯಂತ ವಿಶೇಷ ಎಂದು ಬಣ್ಣಿಸಿದ್ದಾರೆ.
ರಹಸ್ಯವಾಗಿ ತೆರಳಿದ್ದ ರಿಷಬ್ ಪಂತ್
ರಿಷಬ್ ಪಂತ್ ಯಾರಿಗೂ ಮಾಹಿತಿ ನೀಡದೆ ಗೌಪ್ಯವಾಗಿ ಆದಿ ಕೈಲಾಸಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯ ಅಧಿಕಾರಿಗಳು, ಪೋಲೀಸರಿಗೂ ಯಾವುದೇ ಮಾಹಿತಿ ಇರಲಿಲ್ಲ. ಇನ್ನು ಸ್ಥಳೀಯ ಹೋಮ್ ಸ್ಟೇಯಲ್ಲಿ ರಿಷಬ್ ಪಂತ್ ತಂಗಿದ್ದರು. ಈ ವೇಳೆ ಅಲ್ಲಿನ ಸ್ಥಳೀಯರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.
ಪಂತ್ ಅಬ್ಬರಿಸುವ ನಿರೀಕ್ಷೆಯಲ್ಲಿ ಫ್ಯಾನ್ಸ್
ಇತ್ತ ಅಭಿಮಾನಿಗಳು ರಿಷಬ್ ಪಂತ್ ಟೀಂ ಇಂಡಿಯಾದಲ್ಲಿ ಅಬ್ಬರಿಸುವುದನ್ನು ನೋಡಲು ಎದುರು ನೋಡುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಪಂತ್ ನಾಯಕತ್ವ ಲಖನೌ ಕಳಪೆ ಪ್ರದರ್ಶನ ನೀಡಿತ್ತು. ಇದರ ಬೆನ್ನಲ್ಲೇ ಪಂತ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

