ಆರ್‌ಸಿಬಿ ನನ್ನನ್ನು ರೀಟೈನ್ ಮಾಡಿದ್ದು ಕೇಳಿ ಭಾವುಕಳಾದೆ: ಶ್ರೇಯಾಂಕಾ ಪಾಟೀಲ್
ಬೆಂಗಳೂರು: ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ರೀಟೈನ್ ಮಾಡಿಕೊಂಡ ಕ್ಷಣವನ್ನು ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ನೆನಪು ಮಾಡಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನಾಲ್ಕನೇ ಸೀಸನ್ WPL ಎದುರು ನೋಡುತ್ತಿರುವ ಶ್ರೇಯಾಂಕಾ
ಶುಕ್ರವಾರದಿಂದ ಆರಂಭಗೊಳ್ಳಲಿರುವ 4ನೇ ಆವೃತ್ತಿಯ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್, ಈ ಋತುವಿಗಾಗಿ ಬಹಳ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದರು.
ಟೀಂ ಇಂಡಿಯಾ ಕಮ್‌ಬ್ಯಾಕ್ ಮೇಲೆ ಕಣ್ಣಿಟ್ಟ ಶ್ರೇಯಾಂಕಾ
ಗುರುವಾರ ಆಯ್ದ ಮಾಧ್ಯಮಗಳ ಜೊತೆ ಮಾತುಕತೆ ನಡೆಸಿದ ಶ್ರೇಯಾಂಕಾ ಡಬ್ಲ್ಯುಪಿಎಲ್‌ಗೆ ಸಿದ್ಧತೆ, ಭಾರತ ತಂಡಕ್ಕೆ ಕಮ್‌ಬ್ಯಾಕ್, ಪದೇ ಪದೇ ಗಾಯಗೊಂಡಿದ್ದರಿಂದ ಅನುಭವಿಸಿದ ಮಾನಸಿಕ ಯಾತನೆ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
ಆರ್‌ಸಿಬಿ ರೀಟೈನ್ ಮಾಡಿಕೊಳ್ಳುತ್ತೆ ಅಂದುಕೊಂಡಿರಲಿಲ್ಲ
‘ಆರ್‌ಸಿಬಿ ನನ್ನನ್ನು ರೀಟೈನ್ ಮಾಡುತ್ತದೆ ಎಂದುಕೊಂಡಿರಲಿಲ್ಲ. ಆದರೆ ರೀಟೈನ್ ಆಗಿದ್ದೇನೆ ಎಂದು ವಿಷಯ ತಿಳಿದಾಗ ನಾನು ಭಾವುಕಳಾದೆ. ನನಗೆ ಕೆಲ ಹೊತ್ತು ಮಾತೇ ಹೊರಡಲಿಲ್ಲ’ ಎಂದರು.
ಬುಮ್ರಾ ನೆರವು ಸ್ಮರಿಸಿದ ಶ್ರೇಯಾಂಕಾ
2025ರಲ್ಲಿ ಬಹುತೇಕ ಸಮಯವನ್ನು ಗಾಯಾಳುವಾಗೇ ಕಳೆದ ಶ್ರೇಯಾಂಕಾ ಆರಂಭದಲ್ಲಿ ತಮ್ಮ ಕೊಠಡಿಯೊಳಗೇ ಬಂಧಿಯಾಗಿದ್ದರಂತೆ. ಆ ಬಳಿಕ ನಿಧಾನಕ್ಕೆ ಪುನಶ್ಚೇತನ ಶಿಬಿರಕ್ಕೆ ಕಾಲಿಟ್ಟ ಬಳಿಕ ಜಸ್ಪ್ರೀತ್ ಬುಮ್ರಾ ನೀಡಿದ ಸಲಹೆಗಳು ನೆರವಿಗೆ ಬಂದವು ಎಂದು ಶ್ರೇಯಾಂಕಾ ಹೇಳಿದ್ದಾರೆ.
ಒತ್ತಡ ನಿಭಾಯಿಸುವುದನ್ನು ಹೇಳಿಕೊಟ್ಟ ಬುಮ್ರಾ
ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಹಲವು ಸಲಹೆಗಳನ್ನು ನೀಡಿದರಂತೆ. ‘ಒತ್ತಡ, ಗಾಯದ ಸಮಸ್ಯೆಯನ್ನು ನಿಭಾಯಿಸುವುದನ್ನು ಬೂಮ್ರಾ ಬಹಳ ಚೆನ್ನಾಗಿ ವಿವರಿಸಿದರು’ ಎಂದು ಶ್ರೇಯಾಂಕ ಹೇಳಿದರು.
ಡಬ್ಯುಪಿಎಲ್ ಸಮರ್ಥವಾಗಿ ಬಳಸಿಕೊಳ್ಳಲು ರೆಡಿಯಾದ ಶ್ರೇಯಾಂಕಾ
ಇನ್ನು, ಈ ವರ್ಷ ಡಬ್ಯುಪಿಎಲ್ ಅವನ್ನು ಉತ್ತಮವಾಗಿ ಬಳಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದ ಶ್ರೇಯಾಂಕಾ, ಭಾರತ ತಂಡಕ್ಕೆ ವಾಪಸಾಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

