- Home
- Sports
- Cricket
- WPL ಉದ್ಘಾಟನಾ ಪಂದ್ಯದಲ್ಲಿಂದು ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಫೈಟ್; ಎಷ್ಟು ಗಂಟೆಗೆ ಆರಂಭ, ಎಲ್ಲಿ ವೀಕ್ಷಿಸಬಹುದು?
WPL ಉದ್ಘಾಟನಾ ಪಂದ್ಯದಲ್ಲಿಂದು ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಫೈಟ್; ಎಷ್ಟು ಗಂಟೆಗೆ ಆರಂಭ, ಎಲ್ಲಿ ವೀಕ್ಷಿಸಬಹುದು?
ನವಿ ಮುಂಬೈ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ಅಪ್ಡೇಟ್ಸ್ ಇಲ್ಲಿದೆ ನೋಡಿ.
- FB
- TW
- Linkdin

ಇಂದು ಹಾಲಿ ಚಾಂಪಿಯನ್‌ಗೆ ಮಾಜಿ ಚಾಂಪಿಯನ್ ಸವಾಲು
ಕಳೆದ ವರ್ಷ ಸೇರಿ ಎರಡು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ 2ನೇ ಆವೃತ್ತಿಯಲ್ಲಿ ಟ್ರೋಫಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು, ಶುಕ್ರವಾರ ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ.
ಸ್ಮೃತಿಗೆ ಹರ್ಮನ್‌ಪ್ರೀತ್ ಚಾಲೆಂಜ್
ಇತ್ತೀಚೆಗೆ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ, ದೇಶದ ಇಬ್ಬರು ತಾರೆ ಕ್ರಿಕೆಟರ್‌ಗಳಾದ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧನಾ ಪರಸ್ಪರ ಎದುರಾಗಲಿದ್ದಾರೆ.
ಮೇಲ್ನೋಟಕ್ಕೆ ಬಲಿಷ್ಠವಾಗಿದೆ ಮುಂಬೈ ಇಂಡಿಯನ್ಸ್
ಮುಂಬೈ ಕಳೆದ ವರ್ಷ ತಂಡದಲ್ಲಿದ್ದ ಬಹುತೇಕ ಆಟಗಾರ್ತಿಯನ್ನು ಈ ಆವೃತ್ತಿಗೆ ಉಳಿಸಿಕೊಂಡಿದ್ದು, ತಂಡ ಸದೃಢವಾಗಿದೆ. ಹರ್ಮನ್ ಜೊತೆಗೆ ಇಂಗ್ಲೆಂಡ್ ನಾಯಕಿ ನಥಾಲಿ ಸ್ಕೀವರ್ ಬ್ರಂಟ್, ವಿಂಡೀಸ್‌ನ ನಾಯಕಿ ಹೇಲಿ ಮ್ಯಾಥ್ಯೂಸ್‌ರ ಅನುಭವ ತಂಡಕ್ಕೆ ನೆರವಾಗಲಿದೆ.
ತಾರಾ ಆಟಗಾರ್ತಿಯರನ್ನು ಒಳಗೊಂಡಿರೋ ಮುಂಬೈ ಇಂಡಿಯನ್ಸ್
ನ್ಯೂಜಿಲೆಂಡ್‌ನ ಅಮೆಲಿಯ ಕೆರ್ರ್, ಆಸ್ಟ್ರೇಲಿಯಾದ ಮಿಲ್ಲಿ ಇಲ್ಲಿಂಗ್‌ವರ್ಥ್, ಭಾರತದ ಆಲ್ರೌಂಡರ್ ಅಮನ್‌ಜೋತ್ ಕೌರ್, ಯುವ ಆಟಗಾರ್ತಿ ಜಿ.ಕಮಲಿನಿ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಭರ್ಜರಿ ಲಯದಲ್ಲಿರುವ ಸ್ಮೃತಿ ಮಂಧನಾ
ಸ್ಮೃತಿ ಮಂಧನಾ ಉತ್ಕೃಷ್ಟ ಲಯದಲ್ಲಿರುವುದು ಆರ್‌ಸಿಬಿಗೆ ವರದಾನ ಎನಿಸಿದ್ದು, ಆಸ್ಟ್ರೇಲಿಯಾದ ಜಾರ್ಜಿಯಾ ವೊಲ್ ಸೇರ್ಪಡೆ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆಲ್ರೌಂಡರ್‌ಗಳಾದ ಗ್ರೇಸ್ ಹ್ಯಾರಿಸ್, ನದಿನೆ ಡಿ ಕ್ಲೆರ್ಕ್ ಆರ್‌ಸಿಬಿ ಬಲ ಎನಿಸಿದ್ದಾರೆ. ಪೆರ್ರಿಯ ಅನುಪಸ್ಥಿತಿ ರಿಚಾ ಘೋಷ್ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಲಿದೆ.
ಆರ್‌ಸಿಬಿ ಕೂಡಾ ಸಾಕಷ್ಟು ಬಲಿಷ್ಠವಾಗಿದೆ
ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಇಂಗ್ಲೆಂಡ್‌ನ ಲಾರೆನ್ ಬೆಲ್, ಲಿನ್ಸೆ ಸ್ಮಿತ್ ಬೌಲಿಂಗ್ ನಿಭಾಯಿಸಲಿದ್ದಾರೆ.
ಪಂದ್ಯ ಆರಂಭ ಎಷ್ಟು ಗಂಟೆಯಿಂದ?
ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯವು ಭಾರತೀಯ ಕಾಲಮಾನ ಸಂಜೆ 7..30ರಿಂದ ಆರಂಭವಾಗಲಿದೆ. ಈ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರವ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

