- Home
- Sports
- Cricket
- IPL 2026: ಆರ್‌ಸಿಬಿ ತವರು ಮೈದಾನ ಬೆಂಗಳೂರಿನಿಂದ ಶಿಫ್ಟ್ ಆಗುತ್ತಾ? ಪುಣೆ ಬಳಿಕ ಮತ್ತೆ 2 ಸ್ಟೇಡಿಯಂ ಎಂಟ್ರಿ!
IPL 2026: ಆರ್‌ಸಿಬಿ ತವರು ಮೈದಾನ ಬೆಂಗಳೂರಿನಿಂದ ಶಿಫ್ಟ್ ಆಗುತ್ತಾ? ಪುಣೆ ಬಳಿಕ ಮತ್ತೆ 2 ಸ್ಟೇಡಿಯಂ ಎಂಟ್ರಿ!
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತನ್ನ ತವರು ಮೈದಾನವನ್ನಾಗಿ ಚಿನ್ನಸ್ವಾಮಿ ಸ್ಟೇಡಿಯಂ ಬಿಟ್ಟು ಬೇರೆ ಸ್ಟೇಡಿಯಂ ಆಯ್ಕೆ ಮಾಡುತ್ತಾ? ಇದೀಗ ಹೊಸದೊಂದು ಬೆಳವಣಿಗೆ ನಡೆದಿದೆ.

ಹೊಸ ತವರು ಮೈದಾನದ ಹುಡುಕಾಟದಲ್ಲಿ ಆರ್‌ಸಿಬಿ ಫ್ರಾಂಚೈಸಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮುಂಬರುವ 2026ರ ಐಪಿಎಲ್ ಟೂರ್ನಿಯಲ್ಲಿ ಹೊಸ ತವರು ಮೈದಾನದ ಹುಡುಕಾಟದಲ್ಲಿದೆ ಎಂದು ವರದಿಯಾಗಿದೆ.
ಕಾಲ್ತುಳಿತದ ಬಳಿಕ ಯಾವುದೇ ಮ್ಯಾಚ್ ನಡೆದಿಲ್ಲ
ಕಳೆದ ವರ್ಷ ನಡೆದ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇದಾದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಕ್ರಿಕೆಟ್ ಚಟುವಟಿಕೆ ನಡೆದಿಲ್ಲ. ಇನ್ನು ಆರ್‌ಸಿಬಿ ಫ್ರಾಂಚೈಸಿ ಕೂಡಾ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಸುವ ಕುರಿತಂತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ವರದಿಯಾಗಿದೆ.
ಆರ್‌ಸಿಬಿಗೆ ಆತಿಥ್ಯ ವಹಿಸಲು ಮತ್ತೆರಡು ಸ್ಟೇಡಿಯಂ ಎಂಟ್ರಿ:
ಇತ್ತೀಚಿಗಿನ ವರದಿ ಪ್ರಕಾರ ರಾಯ್ಪುರ ಹಾಗೂ ಇಂದೋರ್ ಸ್ಟೇಡಿಯಂಗಳು ಆರ್‌ಸಿಬಿ ಪಂದ್ಯಗಳಿಗೆ ಆತಿಥ್ಯ ವಹಿಸಲು ಒಲವು ತೋರಿವೆ ಎಂದು ವರದಿಯಾಗಿದೆ.
ಪುಣೆ ಕೂಡಾ ರೇಸ್‌ನಲ್ಲಿ
ಇನ್ನು ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂ ಕೂಡಾ ಆರ್‌ಸಿಬಿ ತಂಡದ ಪಂದ್ಯಗಳಿಗೆ ಆಸಕ್ತಿ ತೋರಿಸಿದ್ದು, ಅಧಿಕೃತವಾಗಿಯೂ ಈ ಬಗ್ಗೆ ಟ್ವೀಟ್ ಮಾಡಿದೆ.
ರಾಜಸ್ಥಾನ ರಾಯಲ್ಸ್ ತಂಡದ ತವರು ಮೈದಾನ ಶಿಫ್ಟ್?
ಇನ್ನು ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಜತೆಗಿನ ತಿಕ್ಕಾಟದಿಂದಾಗಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೂಡಾ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತಮ್ಮ ತವರು ಮೈದಾನವನ್ನಾಗಿ ಬೇರೆ ಸ್ಟೇಡಿಯಂ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇನ್ನೂ ಅಂತಿಮ ನಿರ್ಧಾರವಾಗಿಲ್ಲ
ಆರ್‌ಸಿಬಿ ಫ್ರಾಂಚೈಸಿಯು ತಮ್ಮ ತವರು ಮೈದಾನವನ್ನಾಗಿ ಬೇರೆ ಸ್ಟೇಡಿಯಂ ಆಯ್ಕೆ ಮಾಡಿಕೊಳ್ಳಲಿದೆಯೇ ಅಥವಾ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೇ 2026ರ ಐಪಿಎಲ್ ಪಂದ್ಯಗಳು ನಡೆಯಲಿವೆಯೇ ಎನ್ನುವ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

