MS Dhoni ತಮಿಳು ಚಿತ್ರರಂಗಕ್ಕೆ ; Nayanthara ನಾಯಕಿ?
ಈ ದಿನಗಳಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಸುದ್ದಿಯಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2022ಯಲ್ಲಿನ ಅವರ ಪ್ರದರ್ಶನ ಇದಕ್ಕೆ ಕಾರಣವಲ್ಲ. ಮತ್ತೇನು? ಅಷ್ಟಕ್ಕೂ ಧೋನಿ ನ್ಯೂಸ್ ಆಗಲು ಕಾರಣ ಅವರು ತಮಿಳು ಚಿತ್ರರಂಗಕ್ಕೆ ಸೇರಲು ಯೋಜಿಸುತ್ತಿದ್ದಾರಂತೆ. ಪೂರ್ತಿ ವಿವರ ಇಲ್ಲಿದೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಎಂಎಸ್ ಧೋನಿ ತಮಿಳು ಚಿತ್ರರಂಗಕ್ಕೆ ಸೇರಲು ಯೋಜಿಸುತ್ತಿದ್ದಾರೆ ಎಂದು ಹಲವು ವರದಿಗಳು ಸೂಚಿಸುತ್ತವೆ. ಹಾಗಾದರೆ ಧೋನಿಯನ್ನು ತೆರೆ ಮೇಲೆ ಕಾಣಿಸಿಕೊಂಡು ನಟನೆಯಲ್ಲಿ ತಮ್ಮ ಆದೃಷ್ಟ ಪರೀಕ್ಷೆ ಮಾಡುತ್ತಾರಾ?
ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ, ಭಾರತದ ಮಾಜಿ ನಾಯಕ ಎಂಎಸ್ ಧೋನಿ ಶೀಘ್ರದಲ್ಲೇ ನಿರ್ಮಾಪಕರಾಗಿ ತಮಿಳು ಚಲನಚಿತ್ರರಂಗಕ್ಕೆ ಪ್ರವೇಶಿಸಬಹುದು. ಈ ಹಿಂದೆ ಎಂಎಸ್ ಧೋನಿ ಅವರು ಚಲನಚಿತ್ರಗಳೊಂದಿಗೆ ಸಂಬಂಧ ಹೊಂದಿರುವ ಜನರೊಂದಿಗೆ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ.
MS ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ, ಅವರ ಕುರಿತಾದ ಚಲನಚಿತ್ರವನ್ನು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ಅವರು ಹೆಚ್ಚು ಪ್ರಚಾರ ಮಾಡಿದರು.ಈ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದಾರೆ ಮತ್ತು ಸುಶಾಂತ್ ಸಿಂಗ್ ರಜಪೂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆ ಸಮಯದಲ್ಲಿ, ಚಿತ್ರವು ತಮಿಳಿನಲ್ಲೂ ಬಿಡುಗಡೆಯಾಯಿತು ಮತ್ತು ಇದು ಸಾರ್ವಜನಿಕರಿಂದ ಸಕಾರಾತ್ಮಕ ಸ್ವಾಗತವನ್ನು ಗಳಿಸಿತು. ಈಗ ಕ್ಯಾಪ್ಷನ್ ಕೂಲ್ ತಮಿಳು ಚಿತ್ರರಂಗಕ್ಕೆ ಸೇರಲು ಯೋಜಿಸುತ್ತಿದ್ದಾರಂತೆ.
ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ತಮಿಳು ಚಲನಚಿತ್ರ ವ್ಯವಹಾರಕ್ಕೆ ಪ್ರವೇಶಿಸಬಹುದು, ಆದರೆ ನಟನಾಗಿ ಅಲ್ಲ. ಅವರು ಕಾಲಿವುಡ್ ಚಲನಚಿತ್ರವನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ, ಇದು ವೀಕ್ಷಕರ ಆಸಕ್ತಿಯನ್ನು ಕೆರಳಿಸಿದೆ ಎಂದು ನ್ಯೂಸ್ 18 ರ ಇತ್ತೀಚಿನ ವರದಿ ಹೇಳುತ್ತದೆ.
2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದಾಗಿನಿಂದ, ಧೋನಿ ತಮಿಳುನಾಡಿನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಈ ಅಂಶ ಎಮ್‌ಎಸ್ ಧೋನಿ ಅವರ ಚಲನಚಿತ್ರಕ್ಕೆ ಅನುಕೂಲವಾಗುವ ಸಾಧ್ಯತೆಯಿದೆ.
ಮಾಧ್ಯಮ ವರದಿಗೆ ಹತ್ತಿರವಿರುವ ಮೂಲಗಳ ಪ್ರಕಾರ, ಎಂಎಸ್ ಧೋನಿ ಈಗಾಗಲೇ ಸಂಜಯ್ ಅವರನ್ನು ನಿರ್ಮಾಣ ತಂಡದ ಸದಸ್ಯರಾಗಿ ನೇಮಿಸಿಕೊಂಡಿದ್ದಾರೆ. ಈ ಸಂಜಯ್ ಅವರು ರಜನಿಕಾಂತ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ.
ಮುಂದಿನ ಚಿತ್ರದಲ್ಲಿ ನಯನತಾರಾ ಪ್ರಮುಖ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಉಳಿದ ಪಾತ್ರವರ್ಗವನ್ನು ಇನ್ನೂ ಖಚಿತಪಡಿಸಲಾಗಿಲ್ಲ. ಪ್ರಸಕ್ತ ಐಪಿಎಲ್ ಸೀಸನ್ ನಂತರ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.