- Home
- Sports
- IPL
- ಆಂಟಿಲಿಯಾದಲ್ಲಿ ಫ್ಲಾಟ್, ಮಾಲ್ಡೀವ್ಸ್ ನಲ್ಲಿ ಐಲ್ಯಾಂಡ್ ಜೊತೆ 30 ಕೋಟಿ ಚೆಕ್ ! ಮುಂಬೈ ಇಂಡಿಯನ್ಸ್ ಸೇರ್ತಾರಾ ವೈಭವ್ ಸೂರ್ಯವಂಶಿ?
ಆಂಟಿಲಿಯಾದಲ್ಲಿ ಫ್ಲಾಟ್, ಮಾಲ್ಡೀವ್ಸ್ ನಲ್ಲಿ ಐಲ್ಯಾಂಡ್ ಜೊತೆ 30 ಕೋಟಿ ಚೆಕ್ ! ಮುಂಬೈ ಇಂಡಿಯನ್ಸ್ ಸೇರ್ತಾರಾ ವೈಭವ್ ಸೂರ್ಯವಂಶಿ?
vaibhav sooryavanshi : ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಮಿಂಚಿದ ವೈಭವ್ ಸೂರ್ಯವಂಶಿ ಮುಂಬೈ ತಂಡ ಸೇರ್ತಾರಾ? ಸದ್ಯ ಹೀಗೊಂದು ಚರ್ಚೆ ನಡೆಯುತ್ತಿದೆ. ನೀತಾ ಅಂಬಾನಿ, ವೈಭವ್ ಗೆ ಆಫರ್ ನೀಡಿದ್ದೇನು? ಮುಂದೇನಾಗುತ್ತೆ?

ವೈಭವ್ ಸೂರ್ಯವಂಶಿ ಅಬ್ಬರ
2026 ರ ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಮೂಲಕ ಭಾರಿ ಸದ್ದು ಮಾಡ್ತಿದ್ದಾರೆ. ಐಪಿಎಲ್ ನಲ್ಲಿ ವೈಭವ್ ಸೂರ್ಯವಂಶಿ ರನ್ಗಳ ಮಳೆ ಸುರಿಸುತ್ತಿದ್ದಾರೆ. ರಾಜಸ್ತಾನ್ ರಾಯಲ್ಸ್ ಮತ್ತು ಎಸ್ ಆರ್ ಎಚ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇವಲ 29 ಎಸೆತಗಳಲ್ಲಿ 97 ರನ್ ಗಳಿಸಿದ ವೈಭವ್ ಕೇವಲ ಮೂರು ರನ್ ಗಳಲ್ಲಿ ದಾಖಲೆ ಮುರಿಯುವ ಅವಕಾಶ ಕಳೆದುಕೊಂಡ್ರು. ಒಂದ್ವೇಳೆ ವೈಭವ್ ಶತಕ ಸಿಡಿಸಿದ್ದರೆ, ಕ್ರಿಸ್ ಗೇಲ್ ಶತಕದ ದಾಖಲೆ ಮುರಿಯುತ್ತಿತ್ತು. 30 ಎಸೆತಗಳಲ್ಲಿ ಕ್ರಿಸ್ಗೇಲ್ ಶತಕ ಗಳಿಸಿ, ಐಪಿಎಲ್ ಇತಿಹಾಸದಲ್ಲಿ ವೇಗದ ಶತಕದ ದಾಖಲೆಯನ್ನು ಹೊಂದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಿಂದ ಆಫರ್?
ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ಪರ ಆಟವಾಡ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಅವರನ್ನು 1.10 ಕೋಟಿಗೆ ಖರೀದಿಸಿತ್ತು. ಈಗ ವೈಭವ್ ಸೂರ್ಯವಂಶಿ ಬಗ್ಗೆ ವದಂತಿಯೊಂದು ಹಬ್ಬಿದೆ. ಮುಂಬೈ ಇಂಡಿಯನ್ಸ್ ತಂಡ ವೈಭವ್ ಸೂರ್ಯವಂಶಿ ಅವರಿಗೆ 30 ಕೋಟಿ ರೂಪಾಯಿ ಮತ್ತು ಆಂಟಿಲಿಯಾದಲ್ಲಿ ಫ್ಲಾಟ್ ನೀಡುವ ಆಫರ್ ನೀಡಿದೆ ಎನ್ನಲಾಗ್ತಿದೆ. ನೀತಾ ಅಂಬಾನಿ, ಮಾಲ್ಡೀವ್ಸ್ ನಲ್ಲಿ ಒಂದು ಖಾಸಗಿ ಐಲ್ಯಾಂಡ್ ನೀಡುವ ಆಫರ್ ನೀಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಇಷ್ಟೇ ಅಲ್ಲ, ನಿರ್ಧಾರ ತೆಗೆದುಕೊಳ್ಳಲು ವೈಭವ್ ಸೂರ್ಯವಂಶಿ ಸಮಯ ಕೇಳಿದ್ರೆ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕ ಹಸ್ತಕ್ಷೇಪ ಮಾಡ್ತಿದ್ದಾರೆ ಎಂಬ ಸುದ್ದಿ ಕಾಲುಬಾಲ ಪಡೆದಿದೆ.
ಮಾಜಿ ಅಧ್ಯಕ್ಷ ಲಲಿತ್ ಮೋದಿ ಸ್ಪಷ್ಟನೆ
ಈ ಪೋಸ್ಟ್ ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕಣ್ಣಿಗೆ ಬಿದ್ದಿದೆ. ಅವರು ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸುದ್ದಿ ಸುಳ್ಳು. ಹಾಗೆ ತಂಡ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಐಪಿಎಲ್ ನಿಯಮ ಏನು?
ಲಲಿತ್ ಮೋದಿ ಪ್ರಕಾರ, ಆಟಗಾರರ ಬದಲಾವಣೆಗೆ ಸಂಬಂಧಿಸಿದಂತೆ ಐಪಿಎಲ್ ನಲ್ಲಿ ನಿಯಮಗಳಿವೆ. ಆಟಗಾರರು ತಮ್ಮಿಷ್ಟದಂತೆ ತಂಡ ಬದಲಿಸಲು ಸಾಧ್ಯವಿಲ್ಲ. ಆಟಗಾರರನ್ನು ಹೀಗೆ ತಂಡದಿಂದ ತಂಡಕ್ಕೆ ಬದಲಿಸಲು ಸಾಧ್ಯವಿಲ್ಲ. ರಾಜಸ್ಥಾನ ರಾಯಲ್ಸ್ ಟೀಂ ವೈಭವ್ ಸೂರ್ಯವಂಶಿ ಅವರನ್ನು ಬಿಡುಗಡೆ ಮಾಡಿದ್ರೆ ವೈಭವ್ ಹರಾಜಿಗೆ ಹೋಗ್ಬೇಕು. ಹರಾಜಿನಲ್ಲಿ ಅವರನ್ನು ಬೇರೆ ತಂಡಗಳು ಖರೀದಿ ಮಾಡ್ಬಹುದು ಎಂದು ಲಲಿತ್ ಮೋದಿ ಹೇಳಿದ್ದಾರೆ. ಹೆಚ್ಚಿನ ಹಣದ ಆಫರ್ ನೀಡಿ, ಮಧ್ಯದಲ್ಲಿ ಆಟಗಾರರನ್ನು ವಿನಿಮಯ ಮಾಡುವ ನಿಯಮ ಐಪಿಎಲ್ ನಲ್ಲಿ ಇಲ್ಲ ಎಂದು ಲಲಿತ್ ಮೋದಿ ತಿಳಿಸಿದ್ದಾರೆ.
ದಾಖಲೆ ಬಗ್ಗೆ ಸೂರ್ಯವಂಶಿ ಹೇಳಿದ್ದೇನು?
ನಿನ್ನೆಯ ಮ್ಯಾಚ್ ನಲ್ಲಿ ವೈಭವ್ ಸೂರ್ಯವಂಶಿ ದಾಖಲೆ ಬರೆಯಲಾಗ್ಲಿಲ್ಲ. ಆದ್ರೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ ರಾಜಸ್ಥಾನ ರಾಯಲ್ಸ್ ಕ್ವಾಲಿಫೈಯರ್ 2ಗೆ ಪ್ರವೇಶ ಮಾಡಿದೆ. ತನ್ನ ದಾಖಲೆಗಿಂತ ತಂಡದ ಗೆಲುವು ಮುಖ್ಯ. ಔಟ್ ಆಗಿ ಹೊರಗೆ ಬಂದ್ಮೇಲೆ ದಾಖಲೆ ಬಗ್ಗೆ ನನಗೆ ತಿಳಿದಿದ್ದು ಎನ್ನುವ ಮೂಲಕ 15 ವರ್ಷದ ವೈಭವ್ ಸೂರ್ಯವಂಶಿ, ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
