ಭಾರತೀಯ ತಂಡಕ್ಕೆ ಸ್ಪೆಷಲ್ ಬಾಲ್: ರಾಜಾ ಕಮೆಂಟ್‌ಗೆ ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಗರಂ!
2023 ರ ವಿಶ್ವಕಪ್‌ನಲ್ಲಿ ಭಾರತದ ತಂಡ ಗೆಲುವಿನ ಓಟವನ್ನುಯಾವುದೇ ತಡೆಯಿಲ್ಲದೆ ಮುಂದುವರಿಸಿದೆ. ಇದುವರೆಗೆ ಆಡಿದ 7 ಪಂದ್ಯಗಳಲ್ಲೂ ಭಾರತದ ಗೆಲುವು ಸಾಧಿಸಿದೆ. ಈ ಹಿನ್ನಲೆಯಲ್ಲಿ ಭಾರತವು ವಿಭಿನ್ನ ಚೆಂಡುಗಳನ್ನು ಬಳಸುತ್ತದೆ' ಈಸಿಸಿ ಮತ್ತು ಬಿಸಿಸಿಐ (BCCI) ವಿಶೇಷ ಚೆಂಡುಗಳನ್ನು ನೀಡುವ ಮೂಲಕ ಭಾರತ ತಂಡಕ್ಕೆ ಒಲವು ತೋರುತ್ತಿವೆ ಎಂದು ಪಾಕಿಸ್ತಾನದ ಆಟಗಾರ ಹಸನ್ ರಜಾ ಇತ್ತೀಚೆಗೆ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಆರೋಪಿಸಿದ್ದರು. ಇದಕ್ಕೆ ಪಾಕಿಸ್ತಾನದ ಮಾಜಿ ಆಟಗಾರ ವಾಸೀಂ ಅಕ್ರಂ ಪ್ರತಿಕ್ರಿಯೆ ನೀಡಿದ್ದಾರೆ.
2023ರ ವಿಶ್ವಕಪ್‌ನಲ್ಲಿ ಭಾರತ ತಂಡವು ಎದುರಿಸಿದ ಪ್ರತಿಯೊಂದೂ ತಂಡವನ್ನು ಸಲೀಸಾಗಿ ಸೋಲಿಸಿ ಸೇಮಿಸ್ ತುಪಿದ್ದಾರೆ. 358 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾವನ್ನು ಕೇವಲ 55 ರನ್‌ಗಳಿಗೆ ಬೌಲರ್‌ಗಳು ಆಲೌಟ್ ಮಾಡಿದ್ದಾರೆ.
ಭಾರತದ ಬ್ಯಾಟರ್‌ಗಳು ಅಸಾಧಾರಣ ಫಾರ್ಮ್‌ನಲ್ಲಿದ್ದರೂ, ಬೌಲಿಂಗ್ ದಾಳಿಯು ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಮುಖ್ಯ ಪಾತ್ರವಹಿಸಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನ ವಿಶ್ವದ ಮೂಲೆ ಮೂಲೆಗಳಿಂದ ಪ್ರಶಂಸೆ ಗಳಿಸುತ್ತಿದ್ದಾರೆ.
ಆದರೆ, ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜಾ ಅವರ ಅರ್ಥಹೀನ ಹೇಳಿಕೆ ಸಖತ್ ಸದ್ದು ಮಾಡಿದೆ. ICC ಮತ್ತು BCCI ಭಾರತ ತಂಡಕ್ಕೆ ವಿಶೇಷ ಚೆಂಡುಗಳನ್ನು ನೀಡುವ ಮೂಲಕ ವಿಶೇಷ ಒಲವು ತೋರುತ್ತಿವೆ ಎಂದು ಹಸನ್ ರಾಜಾ ಇತ್ತೀಚೆಗೆ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪಾಕಿಸ್ತಾನದ ಮಾಜಿ ನಾಯಕ ಮತ್ತು ವೇಗದ ಬೌಲಿಂಗ್ ದಂತಕಥೆ, ವಾಸಿಂ ಅಕ್ರಂ, ರಾಜಾ ಅವರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ ಮತ್ತು ತಮ್ಮಗೆ ನಾಚೆಕೆಯಾಗುವಂತೆ ಪ್ರತಿಕ್ರಿಯೆ ನೀಡಿ, ಇಡೀ ದೇಶವನ್ನು ಮುಜುಗರಕ್ಕೀಡು ಮಾಡಬೇಡಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.
'ಇದು ತುಂಬಾ ಸರಳವಾದ ವಿಷಯ. ಟಾಸ್ ಮಾಡಿದ ನಂತರ ಅಂಪೈರ್ ಮೊದಲು ಬೌಲಿಂಗ್ ಮಾಡುವ ತಂಡಕ್ಕೆ 12 ಬಾಲ್ ತುಂಬಿದ ಬಾಕ್ಸ್‌ನೊಂದಿಗೆ ಹೋಗುತ್ತಾರೆ. ಅಲ್ಲಿ ನಾಲ್ವರು ಅಂಪೈರ್‌ಗಳು ಮತ್ತು ರೆಫರಿ ಮತ್ತು ಇನ್ನೂ ಕೆಲವು ಜನರಿರುತ್ತಾರೆ. ಮೊದಲು ನಾನು ಬೌಲಿಂಗ್ ಮಾಡುತ್ತಿದ್ದರೆ, ಒಂದು ಚೆಂಡನ್ನು ನನ್ನ ಮೊದಲ ಆಯ್ಕೆಯಾಗಿ ಮತ್ತು ಇನ್ನೊಂದನ್ನು ನನ್ನ ಎರಡನೆಯ ಆಯ್ಕೆಯಾಗಿ ಆರಿಸಿಕೊಳ್ಳಬೇಕು. ಎರಡೂ ಆಯ್ಕೆಗಳನ್ನು ಅಂಪೈರ್ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ಮೊದಲ ಚೆಂಡು ಕೆಟ್ಟದಾದರೆ, ಎರಡನೆಯ ಆಯ್ಕೆಯೂ ಅಲ್ಲಿಯೇ ಇರುತ್ತದೆ,' ಎಂದು ಪಂದ್ಯದ ಮೊದಲು ಚೆಂಡುಗಳು ಹೇಗೆ ಆಯ್ಕೆಯಾಗುತ್ತವೆ ಎಂಬುದನ್ನು ವಾಸಿಂ ವಿವರಿಸಿದ್ದಾರೆ.
ನಂತರ ಅವರು ಪೆಟ್ಟಿಗೆಯನ್ನು ಇನ್ನೊಂದು ಡ್ರೆಸ್ಸಿಂಗ್ ಕೋಣೆಗೆ ತೆಗೆದುಕೊಂಡು ಹೋಗುತ್ತಾರೆ. ಆಗ ಅವರೊಂದಿಗೆ ಬಹಳಷ್ಟು ಜನರಿರುತ್ತಾರೆ. ಅವರು ಎರಡು ಚೆಂಡುಗಳನ್ನು ಆಯ್ಕೆ ಮಾಡುತ್ತಾರೆ. ಅವರು ನಾಲ್ಕನೇ ಅಂಪೈರ್ ಬಳಿಗೆ ಹೋಗುತ್ತಾರೆ ಮತ್ತು ಅದೇ ಕೋಣೆಯಲ್ಲಿ ರೆಫರಿ ಮತ್ತು ಇತರ ಕೆಲವು ಜನರು ಕುಳಿತು ಎರಡು ಆಯ್ಕೆಗಳನ್ನು ನೀಡುತ್ತಾರೆಂದು ವಾಸೀಂ ಅಕ್ರಂ ವಿವರಿಸಿದ್ದಾರೆ.
ಭಾರತದ ವೇಗಿಗಳು ಅನುಮಾನಿಸುವ ಬದಲು ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಹೊಗಳಬೇಕು ಎಂದು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದು, ಇಲ್ಲಸಲ್ಲದ ಕಾಮೆಂಟ್ಸ್ ಮಾಡಿದವರಿಗೆ ಸೊಪ್ಪು ಹಾಕದಂತೆ ನೋಡಿಕೊಂಡಿದ್ದಾರೆ.
'ಕಳೆದ ಕೆಲವು ದಿನಗಳಿಂದ ವಾದವೆಂದರೆ, ವಿಶೇಷವಾಗಿ ನಮ್ಮ ದೇಶದಲ್ಲಿ ಯಾವುದೇ ಬೌಲರ್‌ಗಳು ಈ ರೀತಿ ಸ್ವಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಈ ಭಾರತೀಯ ಬೌಲರ್‌ಗಳು, ಬಹುಶಃ ಅವರು ಏನನ್ನಾದರೂ ಹೆಚ್ಚು ಕಲಿತಿರಬಹುದು .ಇತರರಿಗಿಂತ ಉತ್ತಮವಾಗಿದ್ದಾರೆ ಎಂದು ಏಕೆ ಯೋಚಿಸಬಾರದು'ಎಂದು ಅವರು ಹೇಳಿದರು.