MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2026: ಇಂದು ಸನ್‌ರೈಸರ್ಸ್ ಹೈದರಾಬಾದ್ ಎದುರು ಆರ್‌ಸಿಬಿ ಗೆದ್ದರೇ 4 ಅಪರೂಪದಲ್ಲೇ ಅಪರೂಪದ ದಾಖಲೆ ನಿರ್ಮಾಣ

IPL 2026: ಇಂದು ಸನ್‌ರೈಸರ್ಸ್ ಹೈದರಾಬಾದ್ ಎದುರು ಆರ್‌ಸಿಬಿ ಗೆದ್ದರೇ 4 ಅಪರೂಪದಲ್ಲೇ ಅಪರೂಪದ ದಾಖಲೆ ನಿರ್ಮಾಣ

ಹೈದರಾಬಾದ್: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್‌ನಲ್ಲಿ ಆರ್‌ಸಿಬಿ ಗೆದ್ದರೇ ನಾಲ್ಕು ಅಪರೂಪದ ದಾಖಲೆಗೆ ಪಾತ್ರವಾಗಲಿದೆ. ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

1 Min read
Author : Naveen Kodase
Published : May 22 2026, 10:33 AM IST
Share this Photo Gallery
  • FB
  • TW
  • Linkdin
  • Whatsapp
16
RCB vs SRH ಫೈಟ್
Image Credit : AI Generated

RCB vs SRH ಫೈಟ್

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಈಗಾಗಲೇ ಪ್ಲೇ ಆಫ್ ಹಾದಿಯನ್ನು ಖಚಿತಪಡಿಸಿಕೊಂಡಿದ್ದು, ಗೆಲುವಿನೊಂದಿಗೆ ಪ್ಲೇ ಆಫ್‌ಗೆ ಎಂಟ್ರಿಕೊಡಲು ಸಜ್ಜಾಗಿದೆ.

Add Asianetnews Kannada as a Preferred SourcegooglePreferred
26
ಇಂದು ನಾಲ್ಕು ಅಪರೂಪದ ದಾಖಲೆ ನಿರ್ಮಿಸಲು ಆರ್‌ಸಿಬಿ ರೆಡಿ
Image Credit : IPL-X Handle

ಇಂದು ನಾಲ್ಕು ಅಪರೂಪದ ದಾಖಲೆ ನಿರ್ಮಿಸಲು ಆರ್‌ಸಿಬಿ ರೆಡಿ

ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠವಾಗಿದ್ದು, ಇಂದು ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೇ ನಾಲ್ಕು ಅಪರೂಪದ ದಾಖಲೆಗಳು ನಿರ್ಮಾಣವಾಗಲಿವೆ. ಯಾವುದವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Related Articles

Related image1
ಮುಂದಿನ ಸೀಸನ್ IPL ಆಡ್ತಾರಾ ಧೋನಿ? ಎಲ್ಲಾ ಸಸ್ಪೆನ್ಸ್‌ಗೆ ತೆರೆ ಎಳೆದ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್!
Related image2
IPL 2026: ಆರ್‌ಸಿಬಿಗಿಂದು ಸನ್‌ರೈಸರ್ಸ್ ಚಾಲೆಂಜ್! ನಂ.1 ಸ್ಥಾನಕ್ಕಾಗಿ ಬಿಗ್ ಫೈಟ್
36
1. 2011ರ ಬಳಿಕ ಇದೇ ಮೊದಲ ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ.
Image Credit : ANI

1. 2011ರ ಬಳಿಕ ಇದೇ ಮೊದಲ ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ.

ಈಗಾಗಲೇ 18 ಅಂಕಗಳನ್ನು ಹೊಂದಿರುವ ಆರ್‌ಸಿಬಿ ಇಂದಿನ ಪಂದ್ಯ ಗೆದ್ದರೇ 20 ಅಂಕ ಗಳಿಸಲಿದೆ. ಈ ಮೂಲಕ 2011ರ ಐಪಿಎಲ್‌ ಬಳಿಕ ಲೀಗ್ ಹಂತ ಮುಕ್ತಾಯದ ವೇಳೆಗೆ ಅಗ್ರಸ್ಥಾನಿಯಾಗಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟ ಸಾಧನೆಯನ್ನು ಆರ್‌ಸಿಬಿ ಮಾಡಲಿದೆ.

46
2. ಐಪಿಎಲ್‌ನ ಲೀಗ್‌ ಹಂತದಲ್ಲಿ ಇದೇ ಮೊದಲ ಬಾರಿ 10 ಪಂದ್ಯಗಳಲ್ಲಿ ಗೆಲುವು
Image Credit : Getty

2. ಐಪಿಎಲ್‌ನ ಲೀಗ್‌ ಹಂತದಲ್ಲಿ ಇದೇ ಮೊದಲ ಬಾರಿ 10 ಪಂದ್ಯಗಳಲ್ಲಿ ಗೆಲುವು

ಆರ್‌ಸಿಬಿ ಇದುವರೆಗೂ ಐಪಿಎಲ್‌ ಲೀಗ್ ಹಂತದಲ್ಲಿ ಒಮ್ಮೆಯೂ 10 ಪಂದ್ಯಗಳನ್ನು ಗೆದ್ದಿಲ್ಲ. ಈಗಾಗಲೇ ಲೀಗ್‌ನಲ್ಲಿ 9 ಪಂದ್ಯ ಗೆದ್ದಿರುವ ಆರ್‌ಸಿಬಿ, ಹೊಸ ಇತಿಹಾಸ ಬರೆಯಲು ತುದಿಗಾಲಿನಲ್ಲಿ ನಿಂತಿದೆ.

56
3. ಮೊದಲ ಬಾರಿ 20+ ಅಂಕ ಗಳಿಸಿದ ಸಾಧನೆ.
Image Credit : X (Twitter)

3. ಮೊದಲ ಬಾರಿ 20+ ಅಂಕ ಗಳಿಸಿದ ಸಾಧನೆ.

ಆರ್‌ಸಿಬಿ ತಂಡವು ಈ ಮೊದಲು 2011, 2025ರಲ್ಲಿ ತಲಾ 19 ಅಂಕಗಳನ್ನು ಗಳಿಸಿತ್ತು. ಈಗಾಗಲೇ 18 ಅಂಕ ಗಳಿಸಿರುವ ಆರ್‌ಸಿಬಿ ಇದೇ ಮೊದಲ ಬಾರಿಗೆ 20+ ಅಂಕ ಗಳಿಸುವ ಸುವರ್ಣಾವಕಾಶವನ್ನು ಹೊಂದಿದೆ

66
4. ಐಪಿಎಲ್‌ ಇತಿಹಾಸದಲ್ಲೇ 4ನೇ ಬಾರಿ ಅಗ್ರ-2 ಸ್ಥಾನಿಯಾಗಿ ಕ್ವಾಲಿಫೈಯರ್‌-1ಗೆ ಅರ್ಹತೆ
Image Credit : ANI

4. ಐಪಿಎಲ್‌ ಇತಿಹಾಸದಲ್ಲೇ 4ನೇ ಬಾರಿ ಅಗ್ರ-2 ಸ್ಥಾನಿಯಾಗಿ ಕ್ವಾಲಿಫೈಯರ್‌-1ಗೆ ಅರ್ಹತೆ

ಆರ್‌ಸಿಬಿ ತಂಡವು ಇದೀಗ ಈ ಪಂದ್ಯವನ್ನು ಗೆದ್ದರೇ, ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ಬಾರಿಗೆ ಕ್ವಾಲಿಫೈಯರ್ 1 ಆಡುವ ಅರ್ಹತೆ ಪಡೆದ ತಂಡ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಆರ್‌ಸಿಬಿ
ಸನ್ ರೈಸರ್ಸ್ ಹೈದರಾಬಾದ್

Latest Videos
Recommended Stories
Recommended image1
ಮುಂದಿನ ಸೀಸನ್ IPL ಆಡ್ತಾರಾ ಧೋನಿ? ಎಲ್ಲಾ ಸಸ್ಪೆನ್ಸ್‌ಗೆ ತೆರೆ ಎಳೆದ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್!
Recommended image2
IPL 2026: ಆರ್‌ಸಿಬಿಗಿಂದು ಸನ್‌ರೈಸರ್ಸ್ ಚಾಲೆಂಜ್! ನಂ.1 ಸ್ಥಾನಕ್ಕಾಗಿ ಬಿಗ್ ಫೈಟ್
Recommended image3
IPL 2026: ನಿನ್ನೆ ನಡೆದ ಸಿಎಸ್‌ಕೆ-ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
Related Stories
Recommended image1
ಮುಂದಿನ ಸೀಸನ್ IPL ಆಡ್ತಾರಾ ಧೋನಿ? ಎಲ್ಲಾ ಸಸ್ಪೆನ್ಸ್‌ಗೆ ತೆರೆ ಎಳೆದ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್!
Recommended image2
IPL 2026: ಆರ್‌ಸಿಬಿಗಿಂದು ಸನ್‌ರೈಸರ್ಸ್ ಚಾಲೆಂಜ್! ನಂ.1 ಸ್ಥಾನಕ್ಕಾಗಿ ಬಿಗ್ ಫೈಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved