- Home
- Sports
- Cricket
- ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲೂ ಕಿಂಗ್ ಕೊಹ್ಲಿಯೇ ನಂ.1; ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಹಿಂದಿಕ್ಕಿದ ವಿರಾಟ್..!
ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲೂ ಕಿಂಗ್ ಕೊಹ್ಲಿಯೇ ನಂ.1; ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಹಿಂದಿಕ್ಕಿದ ವಿರಾಟ್..!
ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಮತ್ತೆ ನಂ.1 ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಕ್ರೀಡೆ, ಸಿನಿಮಾ, ಸಂಗೀತ ಹಾಗೂ ಮನರಂಜನಾ ಪ್ರಪಂಚದ 25 ಪ್ರಮುಖ ಸೆಲಿಬ್ರಿಟಿಗಳನ್ನು ಒಳಗೊಂಡಿದ್ದು, ಯಾರೆಲ್ಲಾ ಯಾವ ಸ್ಥಾನದಲ್ಲಿದ್ದಾರೆ ನೋಡೋಣ ಬನ್ನಿ.

ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ ಭದ್ರ
ಭಾರತ ಕ್ರಿಕೆಟ್‌ನ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಮತ್ತೊಮ್ಮೆ ನಂ.1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸರ್ವೆಯಲ್ಲಿ ಬ್ರ್ಯಾಂಡ್‌ನ ತಾಕನ್ನು ಕೇವಲ ಹಣಕಾಸಿನ ಫರ್ಪಾಮೆನ್ಸ್ ಮಾತ್ರವಲ್ಲದೇ ಜನರ ನಿರೀಕ್ಷೆ ಹಾಗೂ ಪಾಲ್ಗೊಳ್ಳುವಿಕೆ, ಸಾಮಾಜಿಕ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಬ್ರ್ಯಾಂಡ್ ವ್ಯಾಲ್ಯೂ ಲೆಕ್ಕಾಚಾರ ಹಾಕಲಾಗುತ್ತದೆ.
ಬ್ರ್ಯಾಂಡ್ ಬ್ಯಾಲ್ಯೂ ವಿಚಾರದಲ್ಲಿ ಧೋನಿಗೆ 4ನೇ ಸ್ಥಾನ
ಭಾರತದ ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಕ್ರಿಕೆಟ್ ತನ್ನದೇ ಆದ ಪ್ರಭಾವನ್ನು ಭೀರಿದೆ. ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೇ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಧೋನಿ 4ನೇ ಸ್ಥಾನದಲ್ಲಿದ್ದರೇ, ಸಚಿನ್ 8ನೇ ಸ್ಥಾನದಲ್ಲಿದ್ದಾರೆ.
ಟಾಪ್-5 ಪಟ್ಟಿಯಲ್ಲಿ ರಣವೀರ್ ಸಿಂಗ್
ಸದ್ಯ ರಣವೀರ್ ಸಿಂಗ್ ತಮ್ಮ ಅದ್ಭುತ ನಟನೆಯ ಮೂಲಕ ಟ್ರೆಂಡ್‌ನಲ್ಲಿದ್ದು, ಯಶಸ್ವಿ ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವವರ ಪೈಕಿ ಐದನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಅಕ್ಷಯ್ ಕುಮಾರ್ ಆರನೇ ಸ್ಥಾನದಲ್ಲಿದ್ದರೇ, ಬಿಗ್ ಬಿ ಅಮಿತಾಬ್ ಬಚ್ಚನ್ ಏಳನೇ ಸ್ಥಾನದಲ್ಲಿದ್ದಾರೆ. ಇನ್ನು ಬಹುಭಾಷಾ ನಟಿ ಅಲಿಯಾ ಭಟ್ ಹಾಗೂ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಮಹಿಳಾ ಸೆಲಿಬ್ರಿಟಿಗಳಿಗೂ ಸ್ಥಾನ
ಇನ್ನು ಟಾಪ್ 25 ಪ್ರಖ್ಯಾತ ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ಸೆಲಿಬ್ರಿಟಿಗಳ ಪೈಕಿ ಕೆಲವು ಮಹಿಳಾ ನಟಿಯರು, ಕ್ರಿಕೆಟ್ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಈ ಪೈಕಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಕೃತಿ ಶೆನನ್, ಸ್ಮೃತಿ ಮಂಧನಾ ಹಾಗೂ ನಯನಾತಾರಾ ಕೂಡಾ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Top 25 ಪಟ್ಟಿಯಲ್ಲಿ ರೋಹಿತ್ ಶರ್ಮಾಗೆ ಸ್ಥಾನ
ಇನ್ನು ಈ ಲಿಸ್ಟ್‌ನಲ್ಲಿ ಖ್ಯಾತ ಸಂಗೀತ ಗಾಯಕ ಅರ್ಜಿತ್ ಸಿಂಗ್ ಕೂಡಾ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಸೌರವ್ ಗಂಗೂಲಿ, ಬಾಲಿವುಡ್ ನಟರಾದ ಕರಣ್ ಜೋಹರ್ ಹಾಗೂ ವಿಕ್ಕಿ ಕೌಶಲ್ ಕೂಡಾ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

