MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2026 RCB vs GT: ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು!

IPL 2026 RCB vs GT: ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು!

Virat Kohli ಮತ್ತೊಮ್ಮೆ ಐಪಿಎಲ್‌ನಲ್ಲಿ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಕಳೆದ ನಾಲ್ಕು ಐಪಿಎಲ್‌ ಸೀಸನ್‌ಗಳಲ್ಲಿ ಸತತವಾಗಿ 600+ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಬರೆದಿದ್ದಾರೆ.GT ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ 43 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿದರು. 

1 Min read
Author : Ravi Janekal
Published : May 27 2026, 08:50 AM IST
Share this Photo Gallery
  • FB
  • TW
  • Linkdin
  • Whatsapp
14
ಐಪಿಎಲ್ ನಲ್ಲಿ ಮತ್ತೊಂದು ದಾಖಲೆ ಬರೆದ ಕಿಂಗ್ ಕೊಹ್ಲಿ!
Image Credit : ANI

ಐಪಿಎಲ್ ನಲ್ಲಿ ಮತ್ತೊಂದು ದಾಖಲೆ ಬರೆದ ಕಿಂಗ್ ಕೊಹ್ಲಿ!

ವಿರಾಟ್‌ ಕೊಹ್ಲಿ(Virat Kohli) ಪ್ರಾರಂಭಿಕ ಅಬ್ಬರದ ಬ್ಯಾಟಿಂಗ್ ಹಾಗೂ ನಂತರ ಬೌಲರ್‌ಗಳ ದಾಳಿಯಿಂದ ರಾಯಲ್ ಚಾಲೆಂಜರ್ಸ್(RCB) GT ಟೀಂನ ಬಗ್ಗುಬಡಿಯುವ ಮೂಲಕ ಐಪಿಎಲ್‌ 2026 ಫೈನಲ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. 255 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ ಎದುರು Gujarat Titans ಕೇವಲ 162 ರನ್‌ಗಳಿಗೆ ಆಲೌಟ್ ಆಯಿತು. ಧರ್ಮಶಾಲಾ ಸ್ಟೇಡಿಯಂನಲ್ಲಿ ಅಭಿಮಾನಿಗಳ ಕೂಗು, ಸಂಭ್ರಮ, ಭಾವನೆಗಳು ಎಲ್ಲವೂ ಒಂದೇ ಕ್ಷಣದಲ್ಲಿ ಮಿಶ್ರಣವಾದವು.

Add Asianetnews Kannada as a Preferred SourcegooglePreferred
24
ಸತತ ನಾಲ್ಕು ಸೀಸನ್‌ಗಳಲ್ಲಿ 600+ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಕಿಂಗ್
Image Credit : ANI

ಸತತ ನಾಲ್ಕು ಸೀಸನ್‌ಗಳಲ್ಲಿ 600+ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಕಿಂಗ್

ಈ ಪಂದ್ಯದಲ್ಲಿ ಕೊಹ್ಲಿ ಕೇವಲ 43 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೂ, ಅದೇ ಇತಿಹಾಸದ ಪುಟ ಸೇರಿತು. ಹೌದು ಐಪಿಎಲ್‌ನಲ್ಲಿ ಸತತ ನಾಲ್ಕು ಸೀಸನ್‌ಗಳಲ್ಲಿ 600+ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಅಪರೂಪದ ದಾಖಲೆ ಅವರದಾಯಿತು. ಕ್ರೀಸ್‌ನಲ್ಲಿ ಆತ್ಮವಿಶ್ವಾಸದಿಂದ ನಿಂತ ಕೊಹ್ಲಿ ಮತ್ತೊಮ್ಮೆ ತಾವು 'ಕಿಂಗ್ ಅನ್ನೋದು ಸಾಬೀತುಪಡಿಸಿದರು.

Related Articles

Related image1
ವಿರಾಟ್ ಕೊಹ್ಲಿಯಲ್ಲ, ಬೆಂಗಳೂರಿಗೆ ಬಂದ ಹೊಸ ಕಿಂಗ್! ಮ್ಯಾಚ್‌ಗೂ ಮೊದಲೇ ಲಖನೌಗೆ ಶುರುವಾಯ್ತು ನಡುಕ!
Related image2
ರಜತ್ ಪಾಟಿದಾರ್ ವಿವಾದಾತ್ಮಕ ಕ್ಯಾಚ್: ಅಂಪೈರ್ ತೀರ್ಪಿಗೆ ಕೆರಳಿದ ಕಿಂಗ್ ಕೊಹ್ಲಿ, ಮೈದಾನದಲ್ಲೇ ವಿರಾಟ್ ಕಿರಿಕ್!
34
ನಾಲ್ಕು ವರ್ಷಗಳಿಂದ ರನ್ ಮಷೀನ್‌ ಆಗಿರುವ ಕೊಹ್ಲಿ!
Image Credit : ANI

ನಾಲ್ಕು ವರ್ಷಗಳಿಂದ ರನ್ ಮಷೀನ್‌ ಆಗಿರುವ ಕೊಹ್ಲಿ!

ಕೊಹ್ಲಿಯ ರನ್ ಮಷಿನ್ ಎಂದೇ ಖ್ಯಾತಿ, ಕಳೆದ ನಾಲ್ಕು ವರ್ಷಗಳಿಂದಲೂ ಈ ವಿಚಾರದಲ್ಲಿ ಅವರ ಎನರ್ಜಿ ಕುಂದಿಲ್ಲ. ಇದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. 2023ರಲ್ಲಿ 639 ರನ್‌, 2024ರಲ್ಲಿ 741 ರನ್‌, 2025ರಲ್ಲಿ 657 ರನ್‌ ಗಳಿಸಿದ್ದ ಅವರು, ಈ ಸೀಸನ್‌ನಲ್ಲೂ 600ರ ಗಡಿ ದಾಟಿದ್ದಾರೆ. ಪ್ರತಿ ವರ್ಷವೂ ಒತ್ತಡದ ನಡುವೆ ತಂಡಕ್ಕೆ ಭರವಸೆಯಾಗಿ ನಿಂತಿರುವ ಕೊಹ್ಲಿ, ಆರ್‌ಸಿಬಿಯ ನಿಜವಾದ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ.

44
ಗೇಲ್‌, ಕೆಎಲ್ ರಾಹುಲ್‌ ಬಳಿಕ ಈಗ ‘ಕಿಂಗ್’ನ ಏಕಾಧಿಪತ್ಯ
Image Credit : ANI

ಗೇಲ್‌, ಕೆಎಲ್ ರಾಹುಲ್‌ ಬಳಿಕ ಈಗ ‘ಕಿಂಗ್’ನ ಏಕಾಧಿಪತ್ಯ

ಇದಕ್ಕೂ ಮೊದಲು ಕ್ರಿಸ್ ಗೇಲ್ (Chris Gayle) ಮತ್ತು ಕೆಎಲ್ ರಾಹುಲ್ (KL Rahul) ಮಾತ್ರ ಸತತ ಮೂರು ಐಪಿಎಲ್‌ ಸೀಸನ್‌ಗಳಲ್ಲಿ 600+ ರನ್ ಗಳಿಸಿದ್ದರು. ಆದರೆ ಈಗ ಕೊಹ್ಲಿ ಆ ದಾಖಲೆಗೂ ಮೀರಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಕೇವಲ ರನ್‌ಗಳಲ್ಲ, ಅವರ ಸ್ಥಿರತೆ, ಆಟದಲ್ಲಿನ ಅವರ ಸಮರ್ಪಣಾ ಭಾವ ಈಗ ಯುವ ಆಟಗಾರರಿಗೆ ದೊಡ್ಡ ಪ್ರೇರಣೆಯಾಗಿರುವುದು ನಿಜ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕ್ರಿಕೆಟ್
ಐಪಿಎಲ್
ವಿರಾಟ್ ಕೊಹ್ಲಿ
ಕ್ರೀಡೆಗಳು

Latest Videos
Recommended Stories
Recommended image1
ಇಂದು ಸನ್‌ರೈಸರ್ಸ್‌ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್‌ ಎಲಿಮಿನೇಟರ್‌ ಫೈಟ್! ಸೋತರೇ ಟೂರ್ನಿಯಿಂದ ಔಟ್!
Recommended image2
IPL 2026: ಆರ್‌ಸಿಬಿ 2ನೇ ಕಪ್‌ ಗೆಲ್ಲಲು ಇನ್ನೊಂದೇ ಹೆಜ್ಜೆ! ಬೆಂಗಳೂರು ಆರ್ಭಟಕ್ಕೆ ಗುಜರಾತ್ ಧೂಳೀಪಟ
Recommended image3
RCB vs GT Qualifier 1: ಪ್ಲೇ ಆಫ್‌ ಇತಿಹಾಸದಲ್ಲೇ ಗರಿಷ್ಠ ಸ್ಕೋರ್‌ ದಾಖಲಿಸಿ, ಭರ್ಜರಿ ಗೆಲುವಿನೊಂದಿಗೆ ಫೈನಲ್‌ಗೇರಿದ ಆರ್‌ಸಿಬಿ
Related Stories
Recommended image1
ವಿರಾಟ್ ಕೊಹ್ಲಿಯಲ್ಲ, ಬೆಂಗಳೂರಿಗೆ ಬಂದ ಹೊಸ ಕಿಂಗ್! ಮ್ಯಾಚ್‌ಗೂ ಮೊದಲೇ ಲಖನೌಗೆ ಶುರುವಾಯ್ತು ನಡುಕ!
Recommended image2
ರಜತ್ ಪಾಟಿದಾರ್ ವಿವಾದಾತ್ಮಕ ಕ್ಯಾಚ್: ಅಂಪೈರ್ ತೀರ್ಪಿಗೆ ಕೆರಳಿದ ಕಿಂಗ್ ಕೊಹ್ಲಿ, ಮೈದಾನದಲ್ಲೇ ವಿರಾಟ್ ಕಿರಿಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved