MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅಶುಭ ಎಂದವ್ರು ಎಲ್ಲಿದ್ದೀರಾ? RCB ಗೆಲುವಿಗೆ ಇವ್ರ ಕಾಲ್ಗುಣ ಕಾರಣ: ವೀರಕಪುತ್ರ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅಶುಭ ಎಂದವ್ರು ಎಲ್ಲಿದ್ದೀರಾ? RCB ಗೆಲುವಿಗೆ ಇವ್ರ ಕಾಲ್ಗುಣ ಕಾರಣ: ವೀರಕಪುತ್ರ

17 ವರ್ಷಗಳಿಂದ RCB ಟ್ರೋಫಿ ಗೆಲ್ಲಲಿಲ್ಲ ಎಂಬ ಕೊರಗು ಇತ್ತು. ಆಮೇಲೆ ಕಳೆದ ವರ್ಷ ಆರ್‌ಸಿಬಿ ಜೆರ್ಸಿ ಉದ್ಘಾಟನೆಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಆಗಮಿಸಿದ್ದರು. ಆದರೆ ಕೆಲವರು ಮಾತ್ರ ಅಶ್ವಿನಿ ಅವರಿಗೆ ಪತಿ ಇಲ್ಲ, ಅಶುಭ ಅಂತೆಲ್ಲ ಮನಸ್ಸಿನಲ್ಲಿರುವ ಕೊಳಕನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದರು.

2 Min read
Author : Padmashree Bhat
Published : Jun 01 2026, 03:53 PM IST
Share this Photo Gallery
  • FB
  • TW
  • Linkdin
  • Whatsapp
15
ಸತತ ಎರಡು ಬಾರಿ ಗೆಲುವು!
Image Credit : instagram

ಸತತ ಎರಡು ಬಾರಿ ಗೆಲುವು!

ಕಳೆದ ವರ್ಷ ಹಾಗೂ ಈ ವರ್ಷ ಆರ್‌ಸಿಬಿ ಬ್ಯಾಕ್‌ ಟು ಬ್ಯಾಕ್‌ ಟ್ರೋಫಿ ಗೆದ್ದಿದ್ದನ್ನು ಇಡೀ ದೇಶವೇ ನೋಡಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ, ವೀರಕಪುತ್ರ ಶ್ರೀನಿವಾಸ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವೀರಕಪುತ್ರ ಶ್ರೀನಿವಾಸ್‌ ಹೇಳಿದ್ದೇನು?
Image Credit : AFP

ವೀರಕಪುತ್ರ ಶ್ರೀನಿವಾಸ್‌ ಹೇಳಿದ್ದೇನು?

ಹೌದಲ್ವಾ… ಇದು ಮರೆತೇ ಹೋಗಿತ್ತು.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹಿಂದೊಮ್ಮೆ ಆರ್ಸಿಬಿಯ ಅನ್ಬಾಕ್ಸ್ ಈವೆಂಟ್‌ನಲ್ಲಿ ಭಾಗವಹಿಸಿದ್ದಾಗ, ಕೆಲವರು ಅವರ ವಿಧವೆ ಪಟ್ಟವನ್ನು ಹಿಡಿದು ಅವಮಾನಿಸಿದ್ದರು. “ಈಕೆ ಬಂದರೆ ಅಶುಭ” ಎಂದುಬಿಟ್ಟಿದ್ದರು. ಅಂದು ಅದೆಷ್ಟು ನೊಂದುಬಿಟ್ಟಿತೋ ಆ ಜೀವ. ಹಾಗಂತ ಇದು ಇವರೊಬ್ಬರ ವಿಷಯವಲ್ಲ. ಯಾವ್ ಯಾವುದೋ ಕಾರಣಕ್ಕೆ ಗಂಡನನ್ನು ಕಳೆದುಕೊಂಡವರೆಲ್ಲರೂ ವಯಸ್ಸಿನ ಹಂಗಿಲ್ಲದೆ ಇಂತಹ ನೋವುಗಳಿಗೆ ಒಳಗಾಗಿಬಿಟ್ಟಿದ್ದಾರೆ. ಎಲ್ಲೋ ಯಾಕೆ? ನಮ್ಮ ಮನೆಗಳಲ್ಲೇ ಇಂತಹ ಆಚರಣೆಗಳು ಇನ್ನೂ ಜೀವಂತವಾಗಿವೆ.

Related Articles

Related image1
Breaking: ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದ RCB, ಟೀಮ್‌ನಲ್ಲಿ ಬದಲಾವಣೆ ಆಗಿದ್ಯಾ?
Related image2
Breaking: ಇತಿಹಾಸ ಸೃಷ್ಟಿಸಿದ ರಾಯಲ್ ಚಾಲೆಂಜರ್ಸ್: ಈ ಸಲನೂ ಕಪ್ ನಮ್ದೆ ಎಂದ RCB; ಸತತ 2ನೇ ಬಾರಿ ಬೆಂಗ್ಳೂರಿಗೆ ಐಪಿಎಲ್ ಟ್ರೋಫಿ
35
ತಾಯಿಯಾದ್ರೂ ಅಶುಭ ಎನ್ನುತ್ತೇವೆ!
Image Credit : X@ipl

ತಾಯಿಯಾದ್ರೂ ಅಶುಭ ಎನ್ನುತ್ತೇವೆ!

ಗಂಡನನ್ನು ಕಳೆದುಕೊಂಡವಳು ನಮ್ಮ ತಾಯಿಯೇ ಆಗಿದ್ದರೂ ಆಕೆಯನ್ನು ನಾವು 'ಅಶುಭ'ದ ಮುದ್ರೆ ಹೊತ್ತಿ ಹೊರಗಿಟ್ಟುಬಿಡುತ್ತೇವೆ. ಇನ್ನೂ ವಿಚಿತ್ರವೆಂದರೆ ತಾಯಿಗಿಂತ ದೇವರಿಲ್ಲ ಎಂದೆಲ್ಲಾ ಬಡಬಡಿಸುವ ನಾವು, ಗಂಡ ಸತ್ತ ತಕ್ಷಣ ಅದೇ ತಾಯಿಯನ್ನು ಆಚರಣೆಗಳಿಂದ, ಶುಭಕಾರ್ಯಗಳಿಂದ, ಬದುಕಿನ ಮಧ್ಯದಿಂದ ದೂರ ತಳ್ಳಿಬಿಡುತ್ತೇವೆ. ದೇವತೆ ಪಟ್ಟವನ್ನು ಸಿದ್ದರಾಮಯ್ಯನವರ ಪಟ್ಟ ಬದಲಾದಷ್ಟು ಸಲೀಸಾಗಿ ಬದಲಾಯಿಸಿಬಿಡುತ್ತೇವೆ. ಅಂದರೆ ಆಕೆ ದೇವತೆಯಾಗಿರುವುದು ಗಂಡನಿದ್ದಾಗ ಮಾತ್ರವೇನಾ? ಗಂಡನಿಲ್ಲದಿದ್ದರೆ ಆಕೆಗೆ ಘನತೆಯೇ ಇಲ್ಲವೇ? ನೋಡಿ, ಎಷ್ಟು ಸೂಕ್ಷ್ಮವಾಗಿ, ಗಂಡಸ್ತನವನ್ನು ನಮ್ಮ ನಂಬಿಕೆಗಳೊಳಗೆ ಹೊಕ್ಕಿಸಿಬಿಟ್ಟಿದ್ದೇವೆ.

45
RCB 2 ಬಾರಿ ಕಪ್‌ ಗೆದ್ದಿದೆ
Image Credit : IPL MEDIA

RCB 2 ಬಾರಿ ಕಪ್‌ ಗೆದ್ದಿದೆ

ಆದರೆ ಕೆಲವು ಸತ್ಯಗಳು ತಲೆಮೇಲೆ ಹೊಡೆದ್ಹಂಗೆ ನಮಗೆ ಎದುರಾಗಿಬಿಡುತ್ತವೆ. ನಾವು ಅವುಗಳನ್ನು ನಿರಾಕರಿಸಲು ಆಗುವುದೇ ಇಲ್ಲ. ಅಶ್ವಿನಿ ಮೇಡಂ ಕಾಲಿಟ್ಟ ನಂತರ ಹದಿನೇಳು ವರ್ಷ ಮರೀಚಿಕೆಯಾಗಿದ್ದ ಆರ್ಸಿಬಿ ಕನಸು ಸಾಕಾರಗೊಂಡಿದೆ. ಒಂದಲ್ಲ ಎರಡು ಸಲ ಆರ್ಸಿಬಿ ಕಪ್ ಗೆದ್ದು ಬೀಗಿದೆ. ಇದು ಕೇವಲ ಕ್ರಿಕೆಟ್ ಜಯವಲ್ಲ ಮೂಢನಂಬಿಕೆಗಳ ಮೇಲಿನ ಗೆಲುವೂ ಹೌದು.

55
ಆರ್ಸಿಬಿಯ ಗೆಲುವಿಗೆ ನಿಮ್ಮ ಕಾಲ್ಗುಣವೂ ಕಾರಣ
Image Credit : IPL

ಆರ್ಸಿಬಿಯ ಗೆಲುವಿಗೆ ನಿಮ್ಮ ಕಾಲ್ಗುಣವೂ ಕಾರಣ

ಒಬ್ಬ ಮಹಿಳೆಯ ಮೌಲ್ಯ ಅವಳ ಮಂಗಳಸೂತ್ರದಲ್ಲಿಲ್ಲ ಅನ್ನೋದು ನಮಗೆ ಅದ್ಯಾವಾಗ ಅರ್ಥವಾಗುತ್ತೋ ಕಾಣೆ. ಮದುವೆ, ವಿಧವೆ, ಶುಭ, ಅಶುಭ… ಇವೆಲ್ಲಾ ನಾವು ಕಟ್ಟಿಕೊಂಡ ಕಥೆಗಳು. ಆ ಎಲ್ಲದರಾಚೆ, ಆಕೆಯೂ ನಮ್ಮ ನಿಮ್ಮಂತೆಯೇ ಒಂದು ಜೀವ ಅಥವಾ ನಮಗಿಂತ ಚೂರು ಹೆಚ್ಚೇ ತೂಕದ ಜೀವ ಅನ್ನೋದು ಅರ್ಥವಾದರೆ ಅದಕ್ಕಿಂತ ಹೆಚ್ಚಿನ ಉಪಕಾರ ಆಕೆಗೆ ನಾವೇನು ಮಾಡಬೇಕಿಲ್ಲ.

ಥ್ಯಾಂಕ್ಯೂ ಅಶ್ವಿನಿ ಮೇಡಂ…

ಆರ್ಸಿಬಿಯ ಗೆಲುವಿಗೆ ನಿಮ್ಮ ಕಾಲ್ಗುಣವೂ ಕಾರಣ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಕ್ರಿಕೆಟ್
ಕ್ರಿಕೆಟ್ ಕ್ರೀಡಾಂಗಣ
ಐಪಿಎಲ್
ಆರ್‌ಸಿಬಿ
ಅಶ್ವಿನಿ ಪುನೀತ್ ರಾಜ್‌ಕುಮಾರ್

Latest Videos
Recommended Stories
Recommended image1
IPL 2026 ಟ್ರೋಫಿ ಗೆದ್ದರೂ ಆರ್‌ಸಿಬಿ ಈ ಮೂವರಿಗೆ ಗೇಟ್‌ಪಾಸ್ ಫಿಕ್ಸ್! ಕಠಿಣ ನಿರ್ಧಾರಕ್ಕೆ ರೆಡಿಯಾದ ಆರ್‌ಸಿಬಿ ಫ್ರಾಂಚೈಸಿ
Recommended image2
Vaibhav Sooryavanshi: ರನ್ ಮಷಿನ್ ವೈಭವ್ ಸೂರ್ಯವಂಶಿಗೆ ಅಷ್ಟೊಂದು ಶಕ್ತಿ ಎಲ್ಲಿಂದ ಬರುತ್ತೆ ಗೊತ್ತಾ? ಈ ಪೋರ ಇದನ್ನೇ ತಿನ್ನೋದು!
Recommended image3
ಸತತ ಎರಡನೇ ಸಲ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ; ಬೆಂಗಳೂರಲ್ಲಿ ವಿಕ್ಟರಿ ಪೆರೇಡ್ ಇದೆಯಾ? ಇಲ್ಲಿದೆ ಮಹತ್ವದ ಅಪ್‌ಡೇಟ್ಸ್
Related Stories
Recommended image1
Breaking: ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದ RCB, ಟೀಮ್‌ನಲ್ಲಿ ಬದಲಾವಣೆ ಆಗಿದ್ಯಾ?
Recommended image2
Breaking: ಇತಿಹಾಸ ಸೃಷ್ಟಿಸಿದ ರಾಯಲ್ ಚಾಲೆಂಜರ್ಸ್: ಈ ಸಲನೂ ಕಪ್ ನಮ್ದೆ ಎಂದ RCB; ಸತತ 2ನೇ ಬಾರಿ ಬೆಂಗ್ಳೂರಿಗೆ ಐಪಿಎಲ್ ಟ್ರೋಫಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved