ಅಂಡರ್ 19 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ರನ್ ಬೇಟೆಯಲ್ಲಿ ದಾಖಲೆ ನಿರ್ಮಿಸಿದ್ದಾರೆ.
cricket-sports Jan 18 2026
Author: Naveen Kodase Image Credits:stockPhoto
Kannada
ಯುವ ಕ್ರಿಕೆಟ್‌ನಲ್ಲಿ ನಂಬರ್ ಒನ್
ಯುವ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ವೈಭವ್ ಇಂದು ತಮ್ಮದಾಗಿಸಿಕೊಂಡಿದ್ದಾರೆ.
Image credits: X@Vaibhavsooryava
Kannada
ಕೊಹ್ಲಿಯ ದಾಖಲೆ ಬ್ರೇಕ್
ಯುವ ಏಕದಿನ ಪಂದ್ಯಗಳಲ್ಲಿ ಭಾರತದ ಪರ 978 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ವೈಭವ್ ತಮ್ಮ 19ನೇ ಪಂದ್ಯದಲ್ಲಿ ಮುರಿದರು.
Image credits: X@BCCI
Kannada
ಮೊದಲ ಪಂದ್ಯದಲ್ಲಿ ನಿರಾಸೆ
ಅಂಡರ್ 19 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ನಾಲ್ಕು ಎಸೆತಗಳಲ್ಲಿ 2 ರನ್ ಗಳಿಸಿ ಔಟಾಗುವ ಮೂಲಕ ವೈಭವ್ ನಿರಾಸೆ ಮೂಡಿಸಿದ್ದರು.
Image credits: Getty
Kannada
ಐಪಿಎಲ್‌ನಲ್ಲೂ ದಾಖಲೆ
ಕಳೆದ ಐಪಿಎಲ್‌ನಲ್ಲಿ ರಾಜಸ್ಥಾನ ಪರ ಆಡಿದ್ದ ವೈಭವ್, ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Image credits: Getty
Kannada
ಅತ್ಯಂತ ಕಿರಿಯ ಶತಕವೀರ
14 ವರ್ಷದ ವೈಭವ್ ಸೂರ್ಯವಂಶಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯಂತ ಕಿರಿಯ ಶತಕವೀರ. ಅರುಣಾಚಲ ಪ್ರದೇಶ ವಿರುದ್ಧ 84 ಎಸೆತಗಳಲ್ಲಿ 190 ರನ್ ಗಳಿಸಿ ವೈಭವ್ ದಾಖಲೆ ಬರೆದಿದ್ದರು.
Image credits: X@Vaibhavsooryava
Kannada
ರಣಜಿಯಲ್ಲೂ ಅಪರೂಪದ ಸಾಧನೆ
12ನೇ ವಯಸ್ಸಿನಲ್ಲಿ ಬಿಹಾರ ಪರ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೈಭವ್, ರಣಜಿ ಟ್ರೋಫಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದರು.