- Home
- Sports
- Cricket
- IPL 2026: ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಈ 6 ಸ್ಟಾರ್ ಆಟಗಾರರಿಗೆ ತಂಡದಿಂದ ಗೇಟ್‌ಪಾಸ್ ಕನ್ಫರ್ಮ್!
IPL 2026: ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಈ 6 ಸ್ಟಾರ್ ಆಟಗಾರರಿಗೆ ತಂಡದಿಂದ ಗೇಟ್‌ಪಾಸ್ ಕನ್ಫರ್ಮ್!
ಬೆಂಗಳೂರು: 2026ರ ಐಪಿಎಲ್ ಟೂರ್ನಿಯು ಲೀಗ್ ಹಂತದ ಮುಕ್ತಾಯದ ಹೊಸ್ತಿಲಲ್ಲಿದೆ. ಹೀಗಿರುವಾಗಲೇ 2027ರ ಐಪಿಎಲ್ ಹರಾಜಿಗೂ ಮೊದಲೇ ಕೆಲ ಆಟಗಾರರಿಗೆ ತಂಡದಿಂದ ಗೇಟ್‌ಪಾಸ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಲಿಸ್ಟ್‌ನಲ್ಲಿರುವ ಆರು ಸ್ಟಾರ್ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

1. ಹಾರ್ದಿಕ್ ಪಾಂಡ್ಯ:
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಸ್ಟಾರ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದರೂ, ಈ ಬಾರಿಯ ಪ್ರದರ್ಶನ ಮುಂಬೈ ಫ್ರಾಂಚೈಸಿ ಕಣ್ಣು ಕೆಂಪಾಗುವಂತೆ ಮಾಡಿದೆ. ನಾಯಕನಾಗಿ ತಂಡವನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿರುವ ಪಾಂಡ್ಯ, ಬ್ಯಾಟಿಂಗ್‌ನಲ್ಲಿ 9 ಪಂದ್ಯಗಳಿಂದ ಕೇವಲ 172 ರನ್ ಹಾಗೂ ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಮುಂಬೈ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯಗೆ ಗೇಟ್‌ಪಾಸ್ ನೀಡುವ ಸಾಧ್ಯತೆ ದಟ್ಟವಾಗಿದೆ.

2. ಎಂ ಎಸ್ ಧೋನಿ:
ಚೆನ್ನೈಗೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಎಂ ಎಸ್ ಧೋನಿ ಮುಂಬರುವ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳೋದೇ ಅನುಮಾನ. ಲೀಗ್ ಹಂತದ ಎಲ್ಲಾ ಪಂದ್ಯಗಳಿಗೆ ಅಲಭ್ಯರಾಗಿರುವ ಧೋನಿ, ಮುಂಬರುವ ಐಪಿಎಲ್ ಟೂರ್ನಿಗೂ ಮೊದಲು ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಧೋನಿ ಐಪಿಎಲ್‌ಗೆ ಗುಡ್ ಬೈ ಹೇಳಿದರೂ ತಂಡದ ಸಹಾಯಕ ಸಿಬ್ಬಂದಿಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
3. ಮಿಚೆಲ್ ಸ್ಟಾರ್ಕ್:
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಮೊನಚು ಕಳೆದುಕೊಂಡಿದ್ದು, ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳುವುದು ಅನುಮಾನ ಎನಿಸಿದೆ.
4. ಇಶಾಂತ್ ಶರ್ಮಾ:
ದಿಗ್ಗಜ ಕ್ರಿಕೆಟಿಗ ಇಶಾಂತ್ ಶರ್ಮಾ ಕೂಡಾ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನಿಸಿದೆ. ಸದ್ಯ ನೀಳಕಾಯದ ಅನುಭವಿ ವೇಗಿ ಇಶಾಂತ್ ಶರ್ಮಾ, ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದಾರೆ. ವಯಸ್ಸಿನ ಕಾರಣದಿಂದ ಆಡುವ ಹನ್ನೊಂದರ ಬಳಗದಲ್ಲಿ ಇಶಾಂತ್‌ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಮುಂಬರುವ ಐಪಿಎಲ್‌ಗೂ ಮುನ್ನ ಇಶಾಂತ್‌ಗೆ ಗೇಟ್‌ಪಾಸ್ ಬಹುತೇಕ ಕನ್ಫರ್ಮ್ ಎನ್ನಲಾಗುತ್ತಿದೆ.
5. ಟ್ರೆಂಟ್ ಬೌಲ್ಟ್:
ಕಿವೀಸ್ ಮೂಲದ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಈ ಬಾರಿಯ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮ್ಯಾಜಿಕ್ ಮಾಡಲು ವಿಫಲವಾಗಿದ್ದಾರೆ. ಹೀಗಾಗಿ ಮುಂಬೈ ಫ್ರಾಂಚೈಸಿಯು ಬೌಲ್ಟ್‌ಗೆ ಗೇಟ್‌ಪಾಸ್ ನೀಡುವುದು ಬಹುತೇಕ ಪಕ್ಕಾ.
6. ಪೃಥ್ವಿ ಶಾ:
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರತಿಭಾನ್ವಿತ ಆಟಗಾರ ಪೃಥ್ವಿ ಶಾಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಲು ಒಂದೇ ಒಂದು ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ. ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಫ್ರಾಂಚೈಸಿಯು ಪೃಥ್ವಿಯನ್ನು ತಂಡದಿಂದ ರಿಲೀಸ್ ಮಾಡುವ ಸಾಧ್ಯತೆ ದಟ್ಟವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
