MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಲಂಕಾ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ತಳಮಳ, ಸ್ಟಾರ್ ಕ್ರಿಕೆಟಿಗ ಔಟ್

ಲಂಕಾ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ತಳಮಳ, ಸ್ಟಾರ್ ಕ್ರಿಕೆಟಿಗ ಔಟ್

ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಕೆಲ ದಿನ ಮಾತ್ರ. ಬಲಿಷ್ಠ ತಂಡವನ್ನು ಕಣಕ್ಕಿಳಿಸುವ ಟೀಂ ಇಂಡಿಯಾದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಪ್ರಮುಖ ಆಟಗಾರ ತಂಡದಿಂದ ಔಟ್ ಆಗಿದ್ದಾರೆ.

2 Min read
Author : Chethan Kumar
Published : Aug 02 2026, 03:12 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತ ಶ್ರೀಲಂಕಾ ಟೆಸ್ಟ್ ಪಂದ್ಯಕ್ಕೂ ಮುನ್ನ ಶಾಕ್
Image Credit : ANI

ಭಾರತ ಶ್ರೀಲಂಕಾ ಟೆಸ್ಟ್ ಪಂದ್ಯಕ್ಕೂ ಮುನ್ನ ಶಾಕ್

ಭಾರತ ಹಾಗೂ ಶ್ರೀಲಂಕಾ ನಡುವಿನ 2 ಟೆಸ್ಟ್ ಪಂದ್ಯಗಳ ಸರಣಿ ಆಗಸ್ಟ್ 15 ರಿಂದ ಆರಂಭಗೊಳ್ಳುತ್ತಿದೆ. ಟೀಂ ಇಂಡಿಯಾ ತಯಾರಿ ನಡುವೆ ಅತೀ ದೊಡ್ಡ ಹಿನ್ನಡೆಯಾಗಿದೆ. ಟೀಂ ಇಂಡಿಯಾ ಕೀ ಪ್ಲೇಯರ್, ಬೌಲಿಂಗ್ ವಿಭಾಗದ ಶಕ್ತಿಯಾಗಿ ಗುರುತಿಸಿಕೊಂಡಿರುವ ವೇಗಿ ಜಸ್‌ಪ್ರೀತ್ ಬುಮ್ರಾ ಗಾಯಗೊಂಡಿದ್ದಾರೆ. ಪರಿಣಾಮ ಬುಮ್ರಾ ಬಹುತೇಕ ಟೂರ್ನಿಯಿಂದ ಔಟ್ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬುಮ್ರಾಗೆ ಇಂಜುರಿ ಸಮಸ್ಯೆ
Image Credit : Getty

ಬುಮ್ರಾಗೆ ಇಂಜುರಿ ಸಮಸ್ಯೆ

ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಮೊಣಕಾಲು ನೋವಿನಿಂದ ಬಳಲುತ್ತಿರುವ ಬುಮ್ರಾ ಈಗಾಗಲೇ ಪುನವರ್ತಸಿ ಕೇಂದ್ರದಿಂದ ನೇರವಾಗಿ ಟೀಂ ಇಂಡಿಯಾ ಜೊತೆ ಪ್ರವಾಸ ಕುರಿತು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬುಮ್ರಾ ಮೊಣಕಾಲಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ಟೀಂ ಇಂಡಿಯಾ ಜೊತೆ ಬುಮ್ರಾ ಶ್ರೀಲಂಕಾ ಪ್ರವಾಸ ಅಸಾಧ್ಯ ಎಂದು ಟೀಂ ಇಂಡಿಯಾ ಮೂಲಗಳು ಹೇಳಿವೆ.

Related Articles

Related image1
ನೀರಜ್ ಚೋಪ್ರಾ ಸೋಲಿಸಿದ ಲಂಕಾ ಮಾಜಿ ವೇಗಿ; ಕ್ರಿಕೆಟ್ ಬಿಟ್ಟು ಜಾವಲಿನ್‌ನಲ್ಲಿ ಕಾಮನ್‌ವೆಲ್ತ್ ಚಿನ್ನದ ಪದಕ ಗೆದ್ದ ಅಥ್ಲೀಟ್!
Related image2
ಸಾಲು ಸಾಲು ಸೋಲು, ಅವಮಾನ.. ತಿರುಪತಿಗೆ ಬಂದು ಹರಕೆ ತೀರಿಸಿದ ಪಾಂಡ್ಯ
36
ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದ ಬುಮ್ರಾ
Image Credit : Getty

ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದ ಬುಮ್ರಾ

ಟೀಂ ಇಂಡಿಯಾ ಆಯ್ಕೆ ಸಮಿತಿ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು. ಆದರೆ ಬುಮ್ರಾ ಲಭ್ಯತೆ ಕುರಿತು ಹಲವು ಅನುಮಾನಗಳು ಮೂಡಿತ್ತು. ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಆಯ್ಕೆ ಸಮಿತಿ ಬುಮ್ರಾ ಆಯ್ಕೆ ಮಾಡಿ ಅಚ್ಚರಿ ನೀಡಿತ್ತು. ಸದ್ಯಕ್ಕೆ ಬುಮ್ರಾ ಟೀಂ ಇಂಡಿಯಾ ಸೇರಿಕೊಳ್ಳುತ್ತಿಲ್ಲ ಅನ್ನೋದು ಬಹುತೇಕ ಖಚಿತಗೊಂಡಿದೆ.

46
ಸಂಪೂರ್ಣ ಫಿಟ್ ಇದ್ದರೆ ಮಾತ್ರ ಸ್ಥಾನ
Image Credit : Getty

ಸಂಪೂರ್ಣ ಫಿಟ್ ಇದ್ದರೆ ಮಾತ್ರ ಸ್ಥಾನ

ಗಾಯ ಸಂಪೂರ್ಣವಾಗಿ ಚೇತರಿಸಿಕೊಳ್ಳದೆ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಪರಿಪಾಠವಿಲ್ಲ. ಈ ಹಿಂದೆ ಹಲವು ಕ್ರಿಕೆಟಿಗರು ಈ ರೀತಿ ಮಾಡಿ ಪ್ರಮುಖ ಘಟ್ಟದಲ್ಲಿ ಅಲಭ್ಯರಾಗಿದ್ದಾರೆ. ಜೊತೆಗೆ ಇಂಜುರಿ ಸಮಸ್ಯೆಗಳಿಂದ ಬಹುತೇಕ ಕರಿಯರ್‌ನಲ್ಲಿ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಸಂಪೂರ್ಣ ಫಿಟ್ ಆದ ಬಳಿಕವಷ್ಟೇ ಆಟಗಾರರ ತಂಡಕ್ಕೆ ಮರಳಲು ಸಾಧ್ಯ ಎಂದು ಬಿಸಿಸಿಐ ಮೂಲಗಳು ಹೇಳಿವೆ.

56
ಏಕದಿನ ವಿಶ್ವಕಪ್ ದೃಷ್ಠಿಯಿಂದ ಎಚ್ಚರಿಕೆ ಹೆಜ್ಜೆ
Image Credit : Getty

ಏಕದಿನ ವಿಶ್ವಕಪ್ ದೃಷ್ಠಿಯಿಂದ ಎಚ್ಚರಿಕೆ ಹೆಜ್ಜೆ

ಶ್ರೀಲಂಕಾದ 2 ಟೆಸ್ಟ್ ಪಂದ್ಯದ ಸರಣಿಗೆ ಬುಮ್ರಾ ಆಯ್ಕೆ ಮಾಡಿ ಮುಂಬರುವ ಪ್ರಮುಖ ಟೂರ್ನಿಗಳಲ್ಲಿ ಅಲಭ್ಯರಾದರೆ ಸಮಸ್ಯೆಗಳು ತೀವ್ರಗೊಳ್ಳಲಿದೆ. ಹೀಗಾಗಿ ಬುಮ್ರಾಗೆ ಸಂಪೂರ್ಣ ವಿಶ್ರಾಂತಿ ನೀಡಿ ಸಂಪೂರ್ಣ ಫಿಟ್ ಆಗಲು ಅವಕಾಶ ನೀಡಲಾಗುತ್ತದೆ. ಇದರಿಂದ ಸುದೀರ್ಘ ಕರಿಯರ್ ಹಾಗೂ ಟೀಂ ಇಂಡಿಯಾಗೂ ನೆರವಾಗಲಿದೆ ಎಂದು ಬಿಸಿಸಿಐ ಹೇಳಿದೆ.

66
ಲಂಕಾದಲ್ಲಿ ಟೀಂ ಇಂಡಿಯಾ ಬೌಲಿಂಗ್ ಜವಾಬ್ದಾರಿ ಯಾರಿಗೆ
Image Credit : Getty

ಲಂಕಾದಲ್ಲಿ ಟೀಂ ಇಂಡಿಯಾ ಬೌಲಿಂಗ್ ಜವಾಬ್ದಾರಿ ಯಾರಿಗೆ

ಬುಮ್ರಾ ಅಲಭ್ಯತೆ ಕುರಿತು ಬಿಸಿಸಿಐ ಅಥವಾ ಜಸ್ಪ್ರೀತ್ ಬುಮ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬುಮ್ರಾ ಅಲಭ್ಯತೆ ಬಹುತೇಕ ಖಚಿತ ಅನ್ನೋ ಸುಳಿವು ನೀಡಿದೆ. ಇದೀಗ ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಬುಮ್ರಾ ಅಲಭ್ಯತೆಯಲ್ಲಿ ಬೌಲಿಂಗ್ ಮಾಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕ್ರಿಕೆಟ್
ಟೀಮ್ ಇಂಡಿಯಾ
ಜಸ್ಪ್ರೀತ್ ಬುಮ್ರಾ
ಬಿಸಿಸಿಐ
Latest Videos
Recommended Stories
Recommended image1
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆಗೆ ಬಿಸಿಸಿಐನಿಂದ ಪ್ರತಿ ತಿಂಗಳು ಸಿಗುವ ಪೆನ್ಷನ್ ಎಷ್ಟು?
Recommended image2
ಸಾಲು ಸಾಲು ಸೋಲು, ಅವಮಾನ.. ತಿರುಪತಿಗೆ ಬಂದು ಹರಕೆ ತೀರಿಸಿದ ಪಾಂಡ್ಯ
Recommended image3
RCB ಕ್ಯಾಪ್ಟನ್‌ ಪಾಟಿದಾರ್‍‌ಗೆ ದೊಡ್ಡ ಜವಾಬ್ದಾರಿ.. ಬೆಂಗಳೂರು ಅಭಿಮಾನಿಗಳಲ್ಲಿ ಮೂಡಿದ ಕುತೂಹಲ
Related Stories
Recommended image1
ನೀರಜ್ ಚೋಪ್ರಾ ಸೋಲಿಸಿದ ಲಂಕಾ ಮಾಜಿ ವೇಗಿ; ಕ್ರಿಕೆಟ್ ಬಿಟ್ಟು ಜಾವಲಿನ್‌ನಲ್ಲಿ ಕಾಮನ್‌ವೆಲ್ತ್ ಚಿನ್ನದ ಪದಕ ಗೆದ್ದ ಅಥ್ಲೀಟ್!
Recommended image2
ಸಾಲು ಸಾಲು ಸೋಲು, ಅವಮಾನ.. ತಿರುಪತಿಗೆ ಬಂದು ಹರಕೆ ತೀರಿಸಿದ ಪಾಂಡ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved