Cricket: ಆಯ್ಕೆಯಾದರೂ ಈ ಪ್ಲೇಯರ್ ಟೀಂ ಇಂಡಿಯಾದಿಂದ ಔಟ್? ಯುವ ಪ್ರತಿಭೆಗೆ ಬಿಸಿಸಿಐ ಶಾಕ್!
ಟೀಮ್ ಇಂಡಿಯಾದಲ್ಲಿ ಆಟಗಾರರ ಫಿಟ್ನೆಸ್ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಸೆಂಟರ್ ಆಫ್ ಎಕ್ಸಲೆನ್ಸ್ ಕಾರ್ಯವೈಖರಿ ಬಗ್ಗೆ ದೂರುಗಳು ಕೇಳಿಬಂದಿವೆ. 97 ಕೆಜಿ ತೂಕವಿದ್ದ ಆ ಆಟಗಾರನ್ನು ತಂಡಕ್ಕೆ ಆಯ್ಕೆ ಮಾಡಿದ್ದು ಹೊಸ ವಿವಾದಕ್ಕೆ ಕಾರಣವಾಗಿತ್ತು. ಆದರೆ ಅವರು ಈಗ ಅಲಭ್ಯವಾಗಿದ್ದಾರೆ.

ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆ!
ಶ್ರೀಲಂಕಾ ಪ್ರವಾಸಕ್ಕೆ ಜಸ್ಪ್ರೀತ್ ಬುಮ್ರಾ ಫಿಟ್ ಆಗಿರುತ್ತಾರೆ ಎಂದು ಸೆಂಟರ್ ಆಫ್ ಎಕ್ಸಲೆನ್ಸ್ ಆಯ್ಕೆ ಸಮಿತಿಗೆ ತಿಳಿಸಿದೆ. ಇದಾದ ನಂತರ, ಶ್ರೀಲಂಕಾ ಪ್ರವಾಸಕ್ಕೂ ಬುಮ್ರಾ ಆಯ್ಕೆಯಾದರು, ಆದರೆ ಬುಮ್ರಾ ಸಕಾಲದಲ್ಲಿ ಫಿಟ್ ಆಗದ ಕಾರಣ ತಂಡದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ.
ಗಿಲ್ ನೀಡಿದ ದೂರು ಏನು?
ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಹಾರ್ದಿಕ್ ಪಾಂಡ್ಯ ನಿರಂತರ ಗಾಯಗಳಿಂದಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ವಿವಾದದಲ್ಲಿ ಸಿಲುಕಿದ್ದಾರೆ. ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್ಮನ್ ಗಿಲ್ ಅವರು ಸೆಂಟರ್ ಆಫ್ ಎಕ್ಸಲೆನ್ಸ್‌ನ ವೈದ್ಯಕೀಯ ತಂಡದ ಬಗ್ಗೆ ದೂರು ನೀಡಿದ್ದಾರೆ ಎಂಬ ವರದಿಗಳೂ ಬಂದಿವೆ.
ಎಲ್ಲೆಡೆ ವ್ಯಕ್ತವಾದ ಟೀಕೆ!
ಸೆಂಟರ್ ಆಫ್ ಎಕ್ಸಲೆನ್ಸ್ ಬಗ್ಗೆ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿರುವಾಗಲೇ, ಮತ್ತೊಂದು ವಿವಾದ ಬೆಳಕಿಗೆ ಬಂದಿದೆ. ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ಆಟಗಾರನೊಬ್ಬ 97 ಕೆಜಿ ತೂಕ ಹೊಂದಿದ್ದ ಎಂದು ಹೇಳಲಾಗುತ್ತಿದೆ, ನಂತರ ಅವರನ್ನು ಮತ್ತೊಮ್ಮೆ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಕಳುಹಿಸಲಾಯಿತು.
ಹಾಗಾದರೆ ಆ ಪ್ಲೇಯರ್ ಯಾರು?
ಹರ್ಷಿತ್ ರಾಣಾ ಅವರನ್ನು ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು, ಆದರೆ ಆ ಸಮಯದಲ್ಲಿ ಅವರ ತೂಕ 97 ಕೆಜಿ ಇತ್ತು. ಟಿ20 ವಿಶ್ವಕಪ್ ಸಮಯದಲ್ಲಿ ರಾಣಾ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು, ಇದರಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ನಂತರ ಅವರು ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.
ಐಪಿಎಲ್ ನಂತರ ಆಯ್ಕೆ!
ಐಪಿಎಲ್ ಮುಗಿದ ನಂತರ ಹರ್ಷಿತ್ ರಾಣಾ ಅವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಲಾಯಿತು, ಆದರೆ ಅವರು ತಂಡಕ್ಕೆ ಮರಳಿದ ಸ್ವಲ್ಪ ಸಮಯದ ನಂತರ ಅವರಿಗೆ ಮಂಡಿರಜ್ಜು ಗಾಯವಾಯಿತು. ಹರ್ಷಿತ್ ರಾಣಾ 4 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ಹೇಳಿತ್ತು. ಕೆಲ ವರದಿಗಳ ಪ್ರಕಾರ, ಸೆಂಟರ್ ಆಫ್ ಎಕ್ಸಲೆನ್ಸ್ ಹೆಚ್ಚಿನ ಕಾಳಜಿ ವಹಿಸಬೇಕಿತ್ತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಂದಿನ ವಾರ ಸಿಗುತ್ತಾ ಕ್ಲಿಯರನ್ಸ್!
ಸೆಂಟರ್ ಆಫ್ ಎಕ್ಸಲೆನ್ಸ್ ಹರ್ಷಿತ್ ಅವರ ತೂಕ 96 ಕೆಜಿ ಮೀರಬಾರದು ಎಂದು ಹೇಳಿತ್ತು. ಪ್ರಸ್ತುತ ಅವರ ತೂಕ 94 ಕೆಜಿ. ಆದರೆ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಅವರ ತೂಕ 97 ಕೆಜಿ ಇತ್ತು. ಮುಂದಿನ ವಾರ ಅವರಿಗೆ ಕ್ಲಿಯರೆನ್ಸ್ ಸಿಗಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಅವರಿಗೆ ಕ್ಲಿಯರೆನ್ಸ್ ಸಿಗುವವರೆಗೆ ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

