MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • Ind vs WI ಸೋಲಿನಲ್ಲೂ ದಾಖಲೆ ಬರೆದ ಟೀಂ ಇಂಡಿಯಾ! 5 ಅನಗತ್ಯ ದಾಖಲೆಗೆ ಪಾತ್ರವಾದ ಪಾಂಡ್ಯ ಪಡೆ..!

Ind vs WI ಸೋಲಿನಲ್ಲೂ ದಾಖಲೆ ಬರೆದ ಟೀಂ ಇಂಡಿಯಾ! 5 ಅನಗತ್ಯ ದಾಖಲೆಗೆ ಪಾತ್ರವಾದ ಪಾಂಡ್ಯ ಪಡೆ..!

ಲಾಡರ್‌ಹಿಲ್‌(ಆ.15): ಸತತ 11 ಟಿ20 ಸರಣಿಗಳನ್ನುಗೆದ್ದಿದ್ದ ಟೀಂ ಇಂಡಿಯಾ ತನ್ನ ಎಡವಟ್ಟುಗಳಿಂದ, ಅನಗತ್ಯ ಪ್ರಯೋಗಗಳಿಂದ ವಿಂಡೀಸ್‌ ವಿರುದ್ಧ ಸರಣಿಯನ್ನು ಕೈಚೆಲ್ಲಿತು. 5ನೇ ಟಿ20ಯಲ್ಲಿ 8 ವಿಕೆಟ್‌ ಸೋಲು ಕಂಡ ಭಾರತ, ಹಲವು ಅನಗತ್ಯ ದಾಖಲೆಗಳಿಗೆ ಗುರಿಯಾಗಿದೆ. ಆ ದಾಖಲೆಗಳ ವಿವರ ಇಲ್ಲಿದೆ. 

1 Min read
Naveen Kodase
Published : Aug 15 2023, 11:50 AM IST| Updated : Aug 15 2023, 11:51 AM IST
Share this Photo Gallery
  • FB
  • TW
  • Linkdin
  • Whatsapp
15

1. 5 ಪಂದ್ಯಗಳನ್ನೊಳಗೊಂಡಿದ್ದ ಟಿ20 ಸರಣಿಯಲ್ಲಿ ಭಾರತ ಸೋಲು ಕಂಡಿದ್ದು ಇದೇ ಮೊದಲು. ಇನ್ನು2022ರ ಟಿ20 ವಿಶ್ವಕಪ್‌ಗೆ ಅರ್ಹತೆಯನ್ನೇ ಪಡೆಯದ ವಿಂಡೀಸ್ ಎದುರು ಟಿ20 ಸರಣಿ ಸೋತಿದ್ದು, ಅಭಿಮಾನಿಗಳ ಪಾಲಿಗೆ ಶಾಕ್ ಆಗಿ ಪರಿಣಮಿಸಿದೆ. 

25

2. ಒಂದು ಟಿ20 ಸರಣಿಯಲ್ಲಿ ಭಾರತ 3 ಪಂದ್ಯಗಳನ್ನು ಸೋತಿದ್ದು ಇದೇ ಮೊದಲು. ಭಾರತ ತಂಡವು ಈ ಹಿಂದೆ ಕೆಲವು 5 ಪಂದ್ಯಗಳ ಸರಣಿಯನ್ನಾಡಿದ್ದು, ಒಮ್ಮೆಯೂ ಎರಡಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ.

35

3. 25 ತಿಂಗಳಲ್ಲಿ ಭಾರತಕ್ಕೆ ಇದು ಮೊದಲ ಟಿ20 ಸರಣಿ ಸೋಲು. ಇದಕ್ಕೂ ಮುನ್ನ 2021ರ ಶ್ರೀಲಂಕಾ ಪ್ರವಾಸದಲ್ಲಿ 1-2ರಲ್ಲಿ ಸರಣಿ ಸೋಲು ಅನುಭವಿಸಿತ್ತು. ಇದಾದ ಮೊದಲ ಬಾರಿಗೆ ಟಿ20 ಸರಣಿಯಲ್ಲಿ ಭಾರತ ಸೋಲನುಭವಿಸಿದೆ.

45

4. 2017ರ ಬಳಿಕ ವಿಂಡೀಸ್‌ನಲ್ಲಿ ಎದುರಾದ ಮೊದಲ ಸರಣಿ ಸೋಲು. 2016ರಲ್ಲಿ 2 ಪಂದ್ಯಗಳ ಸರಣಿಯಲ್ಲಿ 0-1, 2017ರಲ್ಲಿ ಏಕೈಕ ಪಂದ್ಯದ ಸರಣಿಯನ್ನು 0-1ರಲ್ಲಿ ಸೋತಿತ್ತು. 2019ರಲ್ಲಿ 3 ಪಂದ್ಯಗಳ ಸರಣಿಯನ್ನು 3-0, 2022ರಲ್ಲಿ 5 ಪಂದ್ಯಗಳ ಸರಣಿಯನ್ನು 4-1ರಲ್ಲಿ ಭಾರತ ಗೆದ್ದಿತ್ತು.
 

55

5. ಇನ್ನು ದ್ವಿಪಕ್ಷೀಯ ಸರಣಿಯ ಬಗ್ಗೆ ಹೇಳುವುದಾದರೇ, ಭಾರತ ಕ್ರಿಕೆಟ್ ತಂಡವು ಬರೋಬ್ಬರಿ 17 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತ ತಂಡವು ಕೆರಿಬಿಯನ್ ಪಡೆ ಎದುರು ಮೊದಲ ಬಾರಿಗೆ ಮಂಡಿಯೂರಿ ಮುಖಭಂಗ ಅನುಭವಿಸಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಹಾರ್ದಿಕ್ ಪಾಂಡ್ಯ
ಬಿಸಿಸಿಐ
ರಾಹುಲ್ ದ್ರಾವಿಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved