ಟಿ20 ವಿಶ್ವಕಪ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ನಿರ್ಮಿಸಿದ ಉಗಾಂಡದ 43 ವರ್ಷದ ಆಟಗಾರ..!
ಗಯಾನಾ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಗಾಂಡ ತಂಡವು ಪಪುವಾ ನ್ಯೂ ಗಿನಿ ಎದುರು ಗೆಲುವಿನ ಖಾತೆ ತೆರೆದಿದೆ. ಇನ್ನು ಇದೇ ಪಂದ್ಯದಲ್ಲಿ ಉಗಾಂಡದ 43 ವರ್ಷದ ಬೌಲರ್, ಟಿ20 ವಿಶ್ವಕಪ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಉಗಾಂಡ ತಂಡವು ಚೊಚ್ಚಲ ಗೆಲುವು ದಾಖಲಿಸಿದೆ. ಪಪುವಾ ನ್ಯೂ ಗಿನಿ ಎದುರಿನ ಪಂದ್ಯದಲ್ಲಿ ಉಗಾಂಡ ತಂಡವು ಸುಲಭ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಉಗಾಂಡ ತಂಡವು ಮಾರಕ ದಾಳಿ ನಡೆಸುವ ಮೂಲಕ ಪಪುವಾ ನ್ಯೂ ಗಿನಿ ತಂಡವನ್ನು ಕೇವಲ 77 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಇದಾದ ಬಳಿಕ ಸುಲಭ ಗುರಿ ಬೆನ್ನತ್ತಿದ ಉಗಾಂಡ ಕ್ರಿಕೆಟ್ ತಂಡವು 7 ವಿಕೆಟ್ ಕಳೆದುಕೊಂಡು ಇನ್ನೂ 10 ಎಸೆತ ಬಾಕಿ ಇರುವಂತೆಯೇ ಸ್ಮರಣೀಯ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಉಗಾಂಡ ಮೊದಲ ಗೆಲುವು ದಾಖಲಿಸಿ ಸ್ಮರಣೀಯವಾಗಿಸಿಕೊಂಡಿದ್ದು ಮಾತ್ರವಲ್ಲದೇ, ತಂಡದ 43 ವರ್ಷದ ಆಫ್‌ಸ್ಪಿನ್ನರ್ ಫ್ರಾಂಕ್ ನುಬುಗಾ, ಟಿ20 ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಅನುಭವಿ ಆಫ್‌ಸ್ಪಿನ್ನರ್ ಫ್ರಾಂಕ್ ನುಬುಗಾ, ಇದುವರೆಗೂ ನಡೆದ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಶಿಸ್ತುಬದ್ದ ಸ್ಪೆಲ್(ಮೋಸ್ಟ್ ಎಕನಮಿಕಲ್ ಸ್ಪೆಲ್) ಮಾಡಿ ಹೊಸ ದಾಖಲೆ ಬರೆದಿದ್ದಾರೆ.
ಪಪುವಾ ನ್ಯೂ ಗಿನಿ ಎದುರು ಉಗಾಂಡ ಆಫ್‌ಸ್ಪಿನ್ನರ್ ಫ್ರಾಂಕ್ ನುಬುಗಾ, 4 ಓವರ್ ಬೌಲಿಂಗ್ ಮಾಡಿ ಎರಡು ಮೇಡನ್ ಓವರ್ ಸಹಿತ ಕೇವಲ 4 ರನ್ ನೀಡಿ 2 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತ್ಯಂತ ಎಕನಮಿಕಲ್ ಸ್ಪೆಲ್ ಎಸೆದ ದಾಖಲೆ ದಕ್ಷಿಣ ಆಫ್ರಿಕಾ ವೇಗಿ ಏನ್ರಿಚ್ ನೋಕಿಯ ಹೆಸರಿನಲ್ಲಿದೆ. ಇದೇ ವಿಶ್ವಕಪ್‌ನಲ್ಲಿ ನೋಕಿಯ ಲಂಕಾ ಎದುರು ಕೇವಲ 7 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.