MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಏಕದಿನವ ಟಿ20 ನುಂಗಿತ್ತಾ ನೋಡಪ್ಪ ಫ್ಯಾನ್ಸ್; ODI ಅಂತ್ಯ, ವರ್ಲ್ಡ್ T20 ಚಾಂಪಿಯನ್ಸ್‌ಶಿಪ್‌ಗೆ ಐಸಿಸಿ ಪ್ಲಾನ್

ಏಕದಿನವ ಟಿ20 ನುಂಗಿತ್ತಾ ನೋಡಪ್ಪ ಫ್ಯಾನ್ಸ್; ODI ಅಂತ್ಯ, ವರ್ಲ್ಡ್ T20 ಚಾಂಪಿಯನ್ಸ್‌ಶಿಪ್‌ಗೆ ಐಸಿಸಿ ಪ್ಲಾನ್

ಏಕದಿನ ವಿಶ್ವಕಪ್ ಟೂರ್ನಿಗೆ ಒಂದೂವರೆ ವರ್ಷ ಬಾಕಿ ಇದೆ. ಆದರೆ ಐಸಿಸಿ ಇದೀಗ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಟಿ20 ಜನಪ್ರಿಯತೆಯಿಂದ ಇದೀಗ ಏಕದಿನ ಮಾದರಿಗೆ ಅಂತ್ಯ ಹಾಡಿ, ವರ್ಲ್ ಟಿ20 ಕ್ಲಬ್ ಚಾಂಪಿಯನ್‌ಶಿಪ್ ಟಿ20 ಟೂರ್ನಿಗೆ ಐಸಿಸಿ ಪ್ಲಾನ್ ಹಾಕಿದೆ.

2 Min read
Author : Chethan Kumar
Published : Jul 06 2026, 12:21 PM IST
Share this Photo Gallery
  • FB
  • TW
  • Linkdin
  • Whatsapp
16
ಏಕದಿನ ಕ್ರಿಕೆಟ್‌ಗೆ ಗುಡ್ ಬೈ
Image Credit : stockPhoto

ಏಕದಿನ ಕ್ರಿಕೆಟ್‌ಗೆ ಗುಡ್ ಬೈ

ಕ್ರಿಕೆಟ್ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡಿದೆ. ಹಲವು ದೇಶಗಳು ಕ್ರಿಕೆಟ್ ತಂಡ ಕಟ್ಟಿಕೊಂಡಿದೆ. ಒಲಿಂಪಿಕ್ಸ್ ವರೆಗೂ ಕ್ರಿಕೆಟ್ ವಿಸ್ತಾರಗೊಂಡಿದೆ. ಆದರೆ ಸದ್ಯ ಟಿ20 ಮಾದರಿ ಕ್ರಿಕೆಟ್‌ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಏಕದಿನ ಕ್ರಿಕೆಟ್ ಮೇಲೆ ಕರಿನೆರಳು ಬಿದ್ದಿದೆ. ಇದೀಗ ಐಸಿಸಿ ಹಂತ ಹಂತವಾಗಿ ಏಕದಿನ ಕ್ರಿಕೆಟ್ ಸರಣಿಗಳ ಸಂಖ್ಯೆ, ಪಂದ್ಯಗಳ ಸಂಖ್ಯೆ ಕಡಿತಗೊಳಿಸಿ ಗುಡ್ ಬೈ ಹೇಳಲು ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಲೀಗ್ ಟೂರ್ನಿ ಆಯೋಜಿಸಲು ಐಸಿಸಿ ಪ್ಲಾನ್
Image Credit : Getty

ಲೀಗ್ ಟೂರ್ನಿ ಆಯೋಜಿಸಲು ಐಸಿಸಿ ಪ್ಲಾನ್

ಐಸಸಿ ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದೆ. ಆದರೆ ಟಿ20 ಕ್ರಿಕೆಟ್ ಜನಪ್ರಿಯತೆ ಹೆಚ್ಚಿರುವ ಕಾರಣ ಹಾಗೂ ಏಕದಿನಕ್ಕೆ ಅಭಿಮಾನಿಗಳು ನಿರಾಸಕ್ತಿ ತೋರುತ್ತಿರುವ ಕಾರಣ ಏಕದಿನ ಪಂದ್ಯವನ್ನು ಸ್ಥಗಿತಗೊಳಿಸಲು ಪ್ಲಾನ್ ಮಾಡಿದೆ. ಇಷ್ಟೇ ಅಲ್ಲ ಪ್ರತಿ ಕ್ರಿಕೆಟ್ ದೇಶಗಳು ತಮ್ಮದೇ ಆದ ಲೀಗ್ ಟೂರ್ನಿ ಆಯೋಜಿಸುತ್ತಿದೆ. ಇದೀಗ ಐಸಿಸಿ ಕೂಡ ವಿಶ್ವ ಕ್ಲಬ್ ಟಿ20 ಚಾಂಪಿಯನ್‌ಶಿಪ್ ಆಯೋಜನೆಗೆ ಮುಂದಾಗಿದೆ.

Related Articles

Related image1
ಅಯ್ಯೋ, ಇದೆಂಥಾ ದುರಂತ? ಕ್ರಿಕೆಟ್ ಆಡುತ್ತಿರುವಾಗಲೇ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಲಂಕಾ ಕ್ರಿಕೆಟಿಗ! ವಿಡಿಯೋ ವೈರಲ್
Related image2
ಕ್ರಿಕೆಟ್ ಬಳಿಕ ಪೃಥ್ವಿ ಶಾ ವೈಯುಕ್ತಿಕ ಬದುಕಿನಲ್ಲೂ ಕೋಲಾಹಲ, ಮೋಸ ಹೋದೆ ಎಂದ ಗರ್ಲ್‌ಫ್ರೆಂಡ್ ಆಕೃತಿ
36
CLT20 ವಿಂಡೋದಲ್ಲಿ ಕ್ಲಬ್ ಟಿ20 ಟೂರ್ನಿ
Image Credit : BCCI

CLT20 ವಿಂಡೋದಲ್ಲಿ ಕ್ಲಬ್ ಟಿ20 ಟೂರ್ನಿ

12 ಐಸಿಸಿ ತಂಡಗಳ ಟಿ20 ವಿಶ್ವ ಚಾಂಪಿಯನ್‌ಶಿಪ್ ಟೂರ್ನಿ ಆಯೋಜಿಸಲು ಐಸಿಸಿ ಪ್ಲಾನ್ ಮಾಡುತ್ತಿದೆ.ಇದು ಫ್ರಾಂಚೈಸಿ ಆಧಾರಿತ ಲೀಗ್ ಮಾದರಿಯಲ್ಲೇ ಇರಲಿದೆ. ಸದ್ಯ ಚಾಂಪಿಯನ್ಸ್ ಲೀಗ್ (CLT20) ಟೂರ್ನಿ ಸ್ಥಗಿತಗೊಂಡಿರುವ ಕಾರಣ ಈ ವಿಂಡೋ ಲಭ್ಯವಿದೆ. ಇದರ ಹಕ್ಕು ಬಿಸಿಸಿಐ ಬಳಿ ಇದ್ದರೂ ಇದೇ ಅವಧಿಯಲ್ಲಿ ಐಸಿಸಿ ಚಾಂಪಿಯನ್ಸ್ ಕ್ಲಬ್ ಟಿ20 ಟೂರ್ನಿ ಆಯೋಜಿಸಲು ಮುಂದಾಗುತ್ತಿದೆ. ಬಿಸಿಸಿಐಗೆ ಸಿಂಹಪಾಲು ಸಿಗಲಿದೆ.

46
ಜುಲೈ 8ಕ್ಕೆ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆ
Image Credit : X

ಜುಲೈ 8ಕ್ಕೆ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆ

ಐಸಿಸಿ ವಾರ್ಷಿಕ ಸಾಮಾನ್ಯ ಸಭೆ ಜುಲೈ 8 ರಂದು ದುಬೈನಲ್ಲಿ ನಡೆಯಲಿದೆ.ಈ ಸಭೆಯಲ್ಲಿ ಭವಿಷ್ಯದ ಕ್ರಿಕೆಟ್ ಮಾದರಿ, ಟೂರ್ನಿ ಕುರಿತು ಸಂಪೂರ್ಣ ವರದಿ ಚರ್ಚೆಯಾಗಲಿದೆ. ಈ ಚರ್ಚೆಯಲ್ಲಿ ಏಕದಿನ ಮಾದರಿಗೆ ಹಂತ ಹಂತವಾಗಿ ಅಂತ್ಯಹಾಡಿ ಟಿ20 ಲೀಗ್ ಟೂರ್ನಿ ರೀತಿಯ ಸರಣಿ ಆಯೋಸುವ ಕುರಿತು ಐಸಿಸಿ ಚರ್ಚಿಸಲಿದೆ.

56
2031ರಿಂದ ಜಾರಿಗೆ ಬರವು ಸಾಧ್ಯತೆ
Image Credit : Getty

2031ರಿಂದ ಜಾರಿಗೆ ಬರವು ಸಾಧ್ಯತೆ

ಸದ್ಯ ಐಸಿಸಿಯ ಹಲವು ಟೂರ್ನಿಗಳು, ಇನ್ನು ದ್ವಿಪಕ್ಷೀಯ ಏಕದಿನ ಸರಣಿಗಳು 2031ರ ವರೆಗೆ ಆಯೋಜನೆಗೊಂಡಿದೆ. ಹೀಗಾಗಿ 2031ರ ಬಳಿಕ ಏಕದಿನ ಪಂದ್ಯ ನಡೆಯಲಿದೆ. ಆದರೆ ಏಕದಿನ ಸರಣಿಯಲ್ಲಿ ಪಂದ್ಯಗಳ ಸಂಖ್ಯೆ ಕಡಿತಗೊಳ್ಳುವ ಸಾಧ್ಯತೆ ಇದೆ. ಬಳಿಕ ನಿಧಾನವಾಗಿ ಮಾಯವಾಗಲಿದೆ.

66
ಆರ್ ಅಶ್ವಿನ್ ತೀವ್ರ ವಿರೋಧ
Image Credit : Getty

ಆರ್ ಅಶ್ವಿನ್ ತೀವ್ರ ವಿರೋಧ

ಏಕದಿನ ಮಾದರಿಗೆ ಅಂತ್ಯ ಹಾಡುವ ನಿರ್ಧಾರ, ಚರ್ಚೆಗಳಿಗೆ ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.. ಫೀಫಾ ವಿಶ್ವಕಪ್ ಫುಟ್ಬಾಲ್ ರೀತಿ, ನಾಲ್ಕು ವರ್ಷಗಳಿಗೊಮ್ಮೆ ಬರುವ ಐಸಿಸಿ ಏಕದಿನ ವಿಶ್ವಕಪ್ ಜನಪ್ರಿಯವಾಗಿದೆ. ಏಕದಿನ ಮಾದರಿ ಅಂತ್ಯಗೊಳಿಸಿದರೆ ಜನಪ್ರಿಯತೆ ಮಾತ್ರವಲ್ಲ ಕ್ರಿಕೆಟ್ ಕುಸಿಯಲಿದೆ ಎಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ)
ಕ್ರಿಕೆಟ್
ಬಿಸಿಸಿಐ

Latest Videos
Recommended Stories
Recommended image1
ಅಯ್ಯೋ, ಇದೆಂಥಾ ದುರಂತ? ಕ್ರಿಕೆಟ್ ಆಡುತ್ತಿರುವಾಗಲೇ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಲಂಕಾ ಕ್ರಿಕೆಟಿಗ! ವಿಡಿಯೋ ವೈರಲ್
Recommended image2
ಭಾರತ ಇಂಗ್ಲೆಂಡ್ ಲೈವ್‌ನಲ್ಲಿ ಕಾಂಡೋಮ್ ಜಾಹೀರಾತು ಯಾಕೆ? ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ ಮಾಜಿ ಕ್ರಿಕೆಟಿಗ
Recommended image3
ಟೀಂ ಇಂಡಿಯಾದ ಈ ಆಟಗಾರನ ಗರ್ಲ್‌ಫ್ರೆಂಡ್‌ ಜತೆ ವೈಭವ್ ಹೆಸರು ಥಳುಕು..! ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ನಾ 15 ವರ್ಷದ ಪೋರಾ?
Related Stories
Recommended image1
ಅಯ್ಯೋ, ಇದೆಂಥಾ ದುರಂತ? ಕ್ರಿಕೆಟ್ ಆಡುತ್ತಿರುವಾಗಲೇ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಲಂಕಾ ಕ್ರಿಕೆಟಿಗ! ವಿಡಿಯೋ ವೈರಲ್
Recommended image2
ಕ್ರಿಕೆಟ್ ಬಳಿಕ ಪೃಥ್ವಿ ಶಾ ವೈಯುಕ್ತಿಕ ಬದುಕಿನಲ್ಲೂ ಕೋಲಾಹಲ, ಮೋಸ ಹೋದೆ ಎಂದ ಗರ್ಲ್‌ಫ್ರೆಂಡ್ ಆಕೃತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved