ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ದಾಖಲೆ ಬರೆದ ಸನ್‌ರೈಸರ್ಸ್ ಹೈದರಾಬಾದ್; 58 ಕೋಟಿಯಲ್ಲಿ ಹೆನ್ರಿಚ್‌ಗೆ ಸಿಂಹಪಾಲು
ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು 23 ಕೋಟಿ ರೂ.ಗಳಿಗೆ ಹೆನ್ರಿಚ್ ಕ್ಲಾಸೆನ್‌ರನ್ನು ಉಳಿಸಿಕೊಂಡಿದೆ. ಅವರ ಜೊತೆಗೆ ಆಲ್‌ರೌಂಡರ್ ನಿತೀಶ್ ರೆಡ್ಡಿಯನ್ನು 6 ಕೋಟಿ ರೂ.ಗಳಿಗೆ ತಂಡದಲ್ಲಿಯೇ ಉಳಿಸಿಕೊಂಡಿದೆ. ಭುವನೇಶ್ವರ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್‌ಗೆ ಶಾಕ್ ನೀಡಿದೆ.
SRH ಐಪಿಎಲ್ 2025 ತಂಡ
ಐಪಿಎಲ್ 2025ರ ಮುನ್ನ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಹೆನ್ರಿಚ್ ಕ್ಲಾಸೆನ್ ಅತಿ ಹೆಚ್ಚು ಮೊತ್ತಕ್ಕೆ ಉಳಿಸಿಕೊಳ್ಳಲಾದ ಆಟಗಾರ ಎಂಬ ಹೊಸ ದಾಖಲೆ ನಿರ್ಮಿಸಿದ್ದಾರೆ.
ಪ್ರತಿ ಪಂದ್ಯದಲ್ಲೂ ತನ್ನದೇ ಆದ ಛಾಪು ಮೂಡಿಸುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್‌ರನ್ನು SRH 23 ಕೋಟಿ ರೂ.ಗಳಿಗೆ ಉಳಿಸಿಕೊಂಡಿದೆ. ಕಳೆದ ಸೀಸನ್‌ನಲ್ಲಿ ಅದ್ಭುತ ನಾಯಕತ್ವದೊಂದಿಗೆ ತಂಡವನ್ನು ಫೈನಲ್‌ಗೆ ತೆಗೆದುಕೊಂಡು ಹೋಗಿದ್ದ ಪ್ಯಾಟ್ ಕಮಿನ್ಸ್‌ರನ್ನೂ ಹೈದರಾಬಾದ್ ತಂಡ ಉಳಿಸಿಕೊಂಡಿದೆ.
ಐಪಿಎಲ್ ಫೈನಲ್
ಕಳೆದ ಐಪಿಎಲ್ ಸೀಸನ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತು. ಆಲ್‌ರೌಂಡರ್ ನಿತೀಶ್ ರೆಡ್ಡಿಯನ್ನು 6 ಕೋಟಿ ರೂ.ಗಳಿಗೆ ಉಳಿಸಿಕೊಂಡಿದೆ.
ಕಮಿನ್ಸ್ ಬ್ಯಾಟ್
ಐಪಿಎಲ್ ಮೆಗಾ ಹರಾಜಿನ ಮುನ್ನ SRH ಐದು ಆಟಗಾರರನ್ನು ಉಳಿಸಿಕೊಂಡಿದೆ. ಆದ್ದರಿಂದ ಅವರಿಗೆ ಒಂದು ರೈಟ್ ಟು ಮ್ಯಾಚ್ (RTM) ಕಾರ್ಡ್ ಇರುತ್ತದೆ.
SRH vs RR
SRH ಉಳಿಸಿಕೊಂಡ ಆಟಗಾರರ ಪಟ್ಟಿ
ಹೆನ್ರಿಚ್ ಕ್ಲಾಸೆನ್ (23 ಕೋಟಿ ರೂ.)
ಪ್ಯಾಟ್ ಕಮಿನ್ಸ್ (18 ಕೋಟಿ ರೂ.)
ಅಭಿಷೇಕ್ ಶರ್ಮ (14 ಕೋಟಿ ರೂ.)
ಟ್ರಾವಿಸ್ ಹೆಡ್ (14 ಕೋಟಿ ರೂ.)
ನಿತೀಶ್ ಕುಮಾರ್ ರೆಡ್ಡಿ (6 ಕೋಟಿ ರೂ.)