MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಸತತ 2 ಸೋಲಿನ ಬಳಿಕ ಆರ್‌ಸಿಬಿ, ಸತತ 4 ಗೆಲುವಿನಿಂದ ಕೆಕೆಆರ್ ಪ್ಲೇ ಆಫ್ ಚಾನ್ಸ್ ಬದಲಾಗಿದ್ದು ಹೇಗೆ?

ಸತತ 2 ಸೋಲಿನ ಬಳಿಕ ಆರ್‌ಸಿಬಿ, ಸತತ 4 ಗೆಲುವಿನಿಂದ ಕೆಕೆಆರ್ ಪ್ಲೇ ಆಫ್ ಚಾನ್ಸ್ ಬದಲಾಗಿದ್ದು ಹೇಗೆ?

ಐಪಿಎಲ್ 2026 ಟೂರ್ನಿಯ ಪ್ಲೇ ಆಫ್ ಲೆಕ್ಕಾಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರ್‌ಸಿಬಿ ಸತತ 2 ಸೋಲಿನ ಬಳಿಕ ಹಾಗೂ ಕೆಕೆಆರ್ ಸತತ 4 ಗೆಲುವಿನ ಬಳಿಕ ಸದ್ಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ, ಯಾರಿಗಿದೆ ಚಾನ್ಸ್?

2 Min read
Author : Chethan Kumar
Published : May 09 2026, 02:56 PM IST
Share this Photo Gallery
  • FB
  • TW
  • Linkdin
  • Whatsapp
16
ಐಪಿಎಲ್ ಟೂರ್ನಿ ಲೀಗ್ ಲೆಕ್ಕಾಚಾರ
Image Credit : ANI

ಐಪಿಎಲ್ ಟೂರ್ನಿ ಲೀಗ್ ಲೆಕ್ಕಾಚಾರ

ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ರೋಚಕ ಘಟ್ಟ ತಲುಪಿದೆ. ಪ್ರತಿ ತಂಡಕ್ಕೆ ಗೆಲುವು ಅನಿವಾರ್ಯವಾಗುತ್ತಿದೆ. ಒಂದು ಸಣ್ಣ ಎಡವಟ್ಟು ಕೂಡ ತಂಡವನ್ನು ಲೀಗ್‌ನಿಂದಲೇ ಹೊರಗೆ ದಬ್ಬುವ ಸಾಧ್ಯತೆ ಹೆಚ್ಚಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್‌ಸಿಬಿ ಸತತ 2 ಸೋಲು ಕಂಡು 3ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಸೋಲಿನಿಂ ಕಂಗೆಟ್ಟ ಕೆಕೆಆರ್ ಸತತ 4 ಗೆಲುವಿನ ಮೂಲಕ ಪ್ಲೇ ಆಫ್ ರೇಸ್‌ನಲ್ಲಿ ಕಾಣಿಸಿಕೊಂಡಿದೆ.

Add Asianetnews Kannada as a Preferred SourcegooglePreferred
26
ಆರ್‌ಸಿಬಿ ಪ್ಲೇ ಆಫ್ ಚಾನ್ಸ್
Image Credit : X (Twitter)

ಆರ್‌ಸಿಬಿ ಪ್ಲೇ ಆಫ್ ಚಾನ್ಸ್

ಲಖನೌ ವಿರುದ್ಧದ ಸೋಲಿನಿಂದ ಆರ್‌ಸಿಬಿ ಸತತ 2 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 12 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ ನೆಟ್‌ ರನ್‌ರೇಟ್ +1.234 ಇರುವ ಕಾರಣ 3ನೇ ಸ್ಥಾನದಲ್ಲಿದೆ. ಸದ್ಯ ಪರಿಸ್ಥಿತಿಯಲ್ಲಿ ಆರ್‌‍ಸಿಬಿಗೆ ಇನ್ನೊಂದು ಗೆಲುವು ಅನಿವಾರ್ಯವಾಗಿದೆ. ಬಳಿಕ ಎಲ್ಲಾ ನೆಟ್ ರನ್‌ರೇಟ್ ಲೆಕ್ಕಾಚಾರ ನಡೆಯಲಿದೆ. ಆದರೆ 2 ಅಥವ ಅದಕ್ಕಿಂತ ಹೆಚ್ಚಿನ ಗೆಲುವು ಆರ್‌ಸಿಬಿ ತಂಡವನ್ನು ಯಾವುದೇ ಅಡೆ ತಡೆ ಇಲ್ಲದೆ ಪ್ಲೇ ಆಫ್ ಟಾಪ್ 2 ಸ್ಥಾನಕ್ಕೆ ಕೊಂಡೊಯ್ಯಲಿದೆ.

Related Articles

Related image1
ಗೆಲುವಿನ ಬಳಿಕ ಆರ್‌ಸಿಬಿ, ವಿರಾಟ್ ಕೊಹ್ಲಿ ಅಣಕಿಸಿದ ಶುಬಮನ್ ಗಿಲ್, ಶುರುವಾಯ್ತು ವಿವಾದ
Related image2
ಆರ್‌ಸಿಬಿ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್: ಸರ್ಕಾರದ ಪಾತ್ರ ಇಲ್ಲ, ವಾಣಿಜ್ಯ ಕಾರಣವಿರಬಹುದು: ಗೃಹ ಸಚಿವ ಪರಮೇಶ್ವರ
36
ನಾಲ್ಕರಲ್ಲಿ ಆರ್‌‌ಸಿಬಿ ಭವಿಷ್ಯ ನಿರ್ಧಾರ
Image Credit : ANI

ನಾಲ್ಕರಲ್ಲಿ ಆರ್‌‌ಸಿಬಿ ಭವಿಷ್ಯ ನಿರ್ಧಾರ

ಆರ್‌ಸಿಬಿ ತಂಡಕ್ಕೆ ಮುಂಬೈ ಇಂಡಿಯನ್ಸ್, ಕೆಕೆಆರ್, ಪಂಜಾಬ್, ಹಾಗೂ ಎಸ್ಆರ್‌ಹೆಚ್ ತಂಡಗಳ ವಿರುದ್ದ ಪಂದ್ಯ ಬಾಕಿ ಇದೆ. ನಾಲ್ಕು ಪಂದ್ಯದಲ್ಲಿ 1 ಗೆಲುವು ದಾಖಲಿಸಿದರೆ 14 ಅಂಕದೊಂದಿಗೆ ಆರ್‌ಸಿಬಿ ಪ್ರಯಾಸದಲ್ಲಿ ಪ್ಲೇ ಆಫ್ ಸಾಧ್ಯತೆ ಪಡೆಯಲಿದೆ. 14 ಅಂಕ ಪಡೆದರೆ ನೆಟ್ ರನ್ ರೇಟ್ ಆಧಾರದಲ್ಲಿ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಕನಿಷ್ಠ 2 ಗೆಲುವು 16 ದೊಂದಿಗೆ ಪ್ಲೇ ಆಫ್ ಹಾದಿ ಸುಗಮಗೊಳಿಸಲಿದೆ.

46
ಐಪಿಎಲ್ 2026 ಪ್ಲೇ ಆಫ್ ಪಾಯಿಂಟ್ಸ್ ಲೆಕ್ಕಾಚಾರ
Image Credit : Getty

ಐಪಿಎಲ್ 2026 ಪ್ಲೇ ಆಫ್ ಪಾಯಿಂಟ್ಸ್ ಲೆಕ್ಕಾಚಾರ

ಪ್ರತಿ ಐಪಿಎಲ್ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ, ಗೆಲುವಿನ ಆಧಾರದಲ್ಲಿ ಪ್ಲೇ ಆಫ್ ಕಟ್ ಆಫ್ ಪಾಯಿಂಟ್ ನಿರ್ಧಾರವಾಗುತ್ತದೆ. ಈ ಬಾರಿ ಸದ್ಯದ ಪರಿಸ್ಥಿತಿ ನೋಡಿದರೆ ಕನಿಷ್ಠ 14 ಅಂಕ ಬೇಕೇ ಬೇಕು, 18 ಅಂಕ ಸಂಪಾದಿಸಿದರೆ ಹೆಚ್ಚಿನ ಆತಂಕವಿಲ್ಲದೆ ಪ್ಲೇ ಆಫ್ ಹಂತಕ್ಕೆ ಎಂಟ್ರಿಕೊಡಲು ಸಾಧ್ಯವಾಗಲಿದೆ.

56
ಕೆಕೆಆರ್ ಪ್ಲೇ ಆಫ್ ಲೆಕ್ಕಾಚಾರ
Image Credit : ANI

ಕೆಕೆಆರ್ ಪ್ಲೇ ಆಫ್ ಲೆಕ್ಕಾಚಾರ

ಕೆಕೆಆರ್ ಪ್ಲೇ ಆಫ್ ರೇಸ್‌ನಿಂದ ಬಹುತೇಕ ದೂರ ಉಳಿದಿತ್ತು. ಆದರೆ ಅಜಿಂಕ್ಯ ರಹಾನೆ ನಾಯಕತ್ವದ ತಂಡ ಸತತ 4 ಗೆಲುವು ದಾಖಲಿಸಿ 9 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನುಳಿದ 4 ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಒಟ್ಟು ಅಂಕ 17 ಆಗಲಿದೆ. ಈ ಮೂಲಕ ಕೆಕೆಆರ್ ಕೊನೆಯ ಅವಕಾಶ ಒಂದನ್ನು ಪಡೆಯುವ ಸಾಧ್ಯತೆ ಇದೆ.

66
ಪ್ಲೇ ಆಫ್ ಸಿನಾರಿಯೋ
Image Credit : ANI

ಪ್ಲೇ ಆಫ್ ಸಿನಾರಿಯೋ

  1. ಬಾಕಿ ಉಳಿದ ಎಲ್ಲಾ ಪಂದ್ಯ ಗೆದ್ದರೆ, 20 ಅಂಕದೊಂದಿಗೆ ಪ್ಲೇಆಫ್ ಟಾಪ್ 2 ಸ್ಥಾನ
  2. ಮೂರು ಪಂದ್ಯ ಗೆದ್ದರೆ, 18 ಅಂಕದೊಂದಿಗೆ ಪ್ಲೇ ಆಫ್ ಹಾದಿ ಸುಗಮ
  3. 2 ಪಂದ್ಯ ಗೆದ್ದರೆ, 16 ಅಂಕದೊಂದಿಗೆ ಪ್ಲೇ ಆಪ್ ಸ್ಥಾನ ಖಚಿತಪಡಿಸುವ ಅವಕಾಶ
  4. 1 ಪಂದ್ಯ ಗೆದ್ದರೆ, 14 ಅಂಕದ ಜೊತೆಗೆ ನೆಟ್ ರನ್‌ರೇಟ್ ಮೂಲಕ ಪ್ಲೇ ಆಫ್ ಅವಕಾಶ
  5. ಬಾಕಿ ಉಳಿದ ನಾಲ್ಕು ಪಂದ್ಯ ಸೋತರೆ, 12 ಅಂಕದೊಂದಿಗೆ ಎಲಿಮಿನೇಶನ್

ಪ್ಲೇ ಆಫ್ ಸಿನಾರಿಯೋ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಐಪಿಎಲ್
ಕ್ರಿಕೆಟ್
ಆರ್‌ಸಿಬಿ
ಕೆಕೆಆರ್

Latest Videos
Recommended Stories
Recommended image1
ರಾಜಕೀಯ ಪ್ರಭಾವ ಬಳಸಿ ಐಪಿಎಲ್‌ ಫೈನಲ್ ಶಿಫ್ಟ್‌: ಬಿಸಿಸಿಐ ಹೇಳಿಕೆಯೇ ಬೋಗಸ್ ಎಂದ ಡಿಕೆಶಿ!
Recommended image2
BCCI Warns: ಐಪಿಎಲ್ ವೇಳೆ ಹನಿಟ್ರ್ಯಾಪ್ ಬಗ್ಗೆ ಆಟಗಾರರಿಗೆ ಬಿಸಿಸಿಐ ನೀಡಿದ ಗುಪ್ತ ಎಚ್ಚರಿಕೆ ಏನು?
Recommended image3
ವಿಮಾನದಲ್ಲಿ ಚಾಹಲ್ ಕೈಯಲ್ಲಿ ಇ-ಸಿಗರೇಟ್? ಅರ್ಶದೀಪ್ ವಿಡಿಯೋದಿಂದ ಶುರುವಾಯ್ತು ಸಂಕಷ್ಟ
Related Stories
Recommended image1
ಗೆಲುವಿನ ಬಳಿಕ ಆರ್‌ಸಿಬಿ, ವಿರಾಟ್ ಕೊಹ್ಲಿ ಅಣಕಿಸಿದ ಶುಬಮನ್ ಗಿಲ್, ಶುರುವಾಯ್ತು ವಿವಾದ
Recommended image2
ಆರ್‌ಸಿಬಿ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್: ಸರ್ಕಾರದ ಪಾತ್ರ ಇಲ್ಲ, ವಾಣಿಜ್ಯ ಕಾರಣವಿರಬಹುದು: ಗೃಹ ಸಚಿವ ಪರಮೇಶ್ವರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved