ನಾಲ್ಕನೇ ಬಾರಿಗೆ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಶುಭ್‌ಮನ್ ಗಿಲ್!
ಇಂಗ್ಲೆಂಡ್ ಟೆಸ್ಟ್ ಸೀರೀಸ್‌ನಲ್ಲಿ ಸೂಪರ್ ಆಟ ಆಡಿದ್ದ ಶುಭಮನ್ ಗಿಲ್ ಐಸಿಸಿ ಜುಲೈ ತಿಂಗಳಿನ ಅತ್ಯುತ್ತಮ ಆಟಗಾರ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
14

Image Credit : Getty
5 ಪಂದ್ಯಗಳ ಇಂಗ್ಲೆಂಡ್ ಸರಣಿಯನ್ನ 2-2 ರೊಂದಿಗೆ ಭಾರತ ಡ್ರಾ ಮಾಡ್ಕೊಂಡಿದೆ. ಗಿಲ್ ನಾಯಕತ್ವದ ಯುವ ತಂಡ ಈ ಸಾಧನೆ ಮಾಡಿದೆ. ಡಬಲ್ ಸೆಂಚುರಿ ಸೇರಿ 754 ರನ್ ಗಳಿಸಿದ ಶುಭ್‌ಮಮನ್ ಗಿಲ್ ನಾಯಕತ್ವದಲ್ಲೂ ಮಿಂಚಿದ್ರು.
24
Image Credit : X/@Loyalsachfan10
ಇಂಗ್ಲೆಂಡ್ ಸರಣಿಯಲ್ಲಿ ಸೂಪರ್ ಆಟಕ್ಕಾಗಿ ಗಿಲ್‌ಗೆ ಜುಲೈ ತಿಂಗಳ ಐಸಿಸಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಸಿಕ್ಕಿದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್‌ರನ್ನ ಹಿಂದಿಕ್ಕಿ ಗಿಲ್ ಈ ಪ್ರಶಸ್ತಿ ಗೆದ್ದಿದ್ದಾರೆ. ಗಿಲ್ ಗೆದ್ದ 4ನೇ ಐಸಿಸಿ ತಿಂಗಳ ಪ್ರಶಸ್ತಿ ಇದಾಗಿದೆ.
34
Image Credit : Getty
ಗಿಲ್ ಈ ಹಿಂದೆ ಜನವರಿ 2023, ಸೆಪ್ಟೆಂಬರ್ 2023 ಮತ್ತು ಫೆಬ್ರವರಿ 2025ರಲ್ಲೂ ಐಸಿಸಿ ಮಾಸಿಕ ಪ್ರಶಸ್ತಿ ಗೆದ್ದಿದ್ರು. "ಜುಲೈ ತಿಂಗಳ ಪ್ರಶಸ್ತಿ ಗೆದ್ದಿದ್ದು ಖುಷಿ ತಂದಿದೆ. ನಾಯಕನಾಗಿ ನನ್ನ ಮೊದಲ ಟೆಸ್ಟ್ ಸರಣಿಯಲ್ಲಿ ಈ ಪ್ರಶಸ್ತಿ ಬಂದಿದ್ದು ಮಹತ್ವದ್ದು" ಅಂತ ಗಿಲ್ ಹೇಳಿದ್ದಾರೆ.
44
Image Credit : Getty
“ಇಂಗ್ಲೆಂಡ್ ಸರಣಿ ನನಗೆ ನಾಯಕನಾಗಿ ಒಳ್ಳೆ ಅನುಭವ ಕೊಟ್ಟಿದೆ. ಎರಡೂ ತಂಡಗಳಿಂದ ಸೂಪರ್ ಆಟ ಕಂಡುಬಂದಿದೆ. ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು” ಅಂತ ಗಿಲ್ ಹೇಳಿದ್ದಾರೆ. ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಜುಲೈ ತಿಂಗಳ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ.
Latest Videos