- Home
- Sports
- Cricket
- ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೋತಿಲ್ವಾ? ನನ್ನ ತಮ್ಮನಿಗೆ ಯಾಕೆ ಬೈಯ್ತೀರಿ?: Shreyas Iyer ಅಕ್ಕ ವಾಗ್ದಾಳಿ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೋತಿಲ್ವಾ? ನನ್ನ ತಮ್ಮನಿಗೆ ಯಾಕೆ ಬೈಯ್ತೀರಿ?: Shreyas Iyer ಅಕ್ಕ ವಾಗ್ದಾಳಿ
Shreyas Iyer siblings: ಟೀಂ ಇಂಡಿಯಾ ಪದೇ ಪದೇ ಸೋಲು ಕಾಣುತ್ತಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲೂ ಭಾರತ ತಂಡ ಹೀನಾಯವಾಗಿ ಸೋತಿದೆ. ಅನೇಕರು ಶ್ರೇಯಸ್ ಅಯ್ಯರ್ ಆಟ ಚೆನ್ನಾಗಿಲ್ಲ ಎಂದು ದೂರುತ್ತಿದ್ದಾರೆ. ಇತ್ತೀಚೆಗೆ ಶ್ರೇಯಸ್ ಅಕ್ಕ ಸಂದರ್ಶನವೊಂದರಲ್ಲಿ ಅವರ ಆಟದ ಬಗ್ಗೆ ಮಾತನಾಡಿದ್ದಾರೆ.

ಶ್ರೇಷ್ಠ ಅಯ್ಯರ್ ಬೆಂಬಲ
ಪೂರ್ಣಾವಧಿ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡ ಆರಂಭದಲ್ಲೇ ಸರಣಿ ಹಿನ್ನಡೆ ಅನುಭವಿಸುತ್ತಿರುವ ಶ್ರೇಯಸ್ ಬೆಂಬಲಕ್ಕೆ ಈಗ ಅವರ ಸಹೋದರಿ ಶ್ರೇಷ್ಠಾ ಅಯ್ಯರ್ ಧಾವಿಸಿದ್ದಾರೆ.
ಬೇರೆಯವರು ಸೋತಿಲ್ವಾ?
"ಶುಭಮನ್ ಗಿಲ್ ಇರಲಿ, ವಿರಾಟ್ ಕೊಹ್ಲಿ ಇರಲಿ ಅಥವಾ ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್ ಅವರೇ ಇರಲಿ... ಇವರೆಲ್ಲರೂ ಕ್ರಿಕೆಟ್ ಲೋಕದ ದಿಗ್ಗಜರು. ಇವರೂ ಕೂಡ ತಮ್ಮ ನಾಯಕತ್ವದಲ್ಲಿ ಸಾಕಷ್ಟು ಪಂದ್ಯಗಳನ್ನು ಸೋತಿದ್ದಾರೆ. ಹಾಗಿರುವಾಗ ನೀವು ಕೇವಲ ಶ್ರೇಯಸ್ ಅಯ್ಯರ್ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದರೆ, ಅದು ನಿಮ್ಮಲ್ಲಿರುವ ಸಮಸ್ಯೆಯೇ ಹೊರತು ಅವರದ್ದಲ್ಲ. ಶ್ರೇಯಸ್ ಒಬ್ಬ ಅದ್ಭುತ ಆಟಗಾರ" ಎಂದು ಶ್ರೇಷ್ಠ ಅಯ್ಯರ್ ಹೇಳಿದ್ದಾರೆ.
ಬೆಸ್ಟ್ ಕ್ಯಾಪ್ಟನ್‌ಗಳಲ್ಲಿ ಒಬ್ಬರು
“ಶ್ರೇಯಸ್ ಅಯ್ಯರ್ ವ್ಯಕ್ತಿತ್ವವೇ ವಿಭಿನ್ನವಾಗಿದ್ದು, ಭಾರತೀಯ ಕ್ರಿಕೆಟ್‌ಗೆ ಕೊಡುಗೆ ನೀಡಲು ಅವರ ಬಳಿ ಸಾಕಷ್ಟು ಹೊಸ ಯೋಜನೆಗಳಿವೆ. "ಶ್ರೇಯಸ್ ಅಯ್ಯರ್ ಭಾರತದ ಬೆಸ್ಟ್ ಕ್ಯಾಪ್ಟನ್‌ಗಳಲ್ಲಿ ಒಬ್ಬರು" ಎಂದು ಇಡೀ ಜಗತ್ತೇ ಕೊಂಡಾಡುವ ದಿನ ದೂರವಿಲ್ಲ, ಅದು ಈಗಾಗಲೇ ಶುರುವಾಗಿದೆ ಎಂದು ಶ್ರೇಷ್ಠಾ ಹೇಳಿದ್ದಾರೆ.
ಶ್ರೇಯಸ್ ಅಯ್ಯರ್‌ಗೆ ಸೋಲು
ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 125 ರನ್‌ಗಳ ಬೃಹತ್ ಸೋಲು ಕಂಡಿತ್ತು. ರನ್‌ಗಳ ಆಧಾರದಲ್ಲಿ ಟಿ20 ಇತಿಹಾಸದಲ್ಲೇ ಭಾರತ ಅನುಭವಿಸಿದ ಅತ್ಯಂತ ದೊಡ್ಡ ಸೋಲು ಇದಾಗಿದೆ. ಜುಲೈನಲ್ಲಿ ಟಿ20 ತಂಡದ ಪೂರ್ಣಾವಧಿ ನಾಯಕತ್ವ ವಹಿಸಿಕೊಂಡ ಶ್ರೇಯಸ್ ಅವರಿಗೆ ಈ ಸೋಲು ದೊಡ್ಡ ಆಘಾತ ನೀಡಿದೆ.
ಕ್ಯಾಪ್ಟನ್ ಆಗಿ ಅಯ್ಯರ್ ಅವರ ಟ್ರ್ಯಾಕ್ ರೆಕಾರ್ಡ್
ಐರ್ಲೆಂಡ್ ಸರಣಿ: ಪೂರ್ಣಾವಧಿ ನಾಯಕರಾಗಿ ಇವರ ಮೊದಲ ಸರಣಿಯಲ್ಲೇ ಭಾರತ 2-0 ಇತಿಹಾಸದಲ್ಲಿ ಸೋಲು ಕಂಡಿತು.
ಇಂಗ್ಲೆಂಡ್ ಪ್ರವಾಸ: ಐದು ಪಂದ್ಯಗಳ ಈ ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ನಂತರದ ಎರಡೂ ಪಂದ್ಯಗಳನ್ನು ಸೋತು ಭಾರತ ಸದ್ಯ 0-2 ಹಿನ್ನಡೆಯಲ್ಲಿದೆ.
ಕಳೆದ 12 ಪಂದ್ಯಗಳ ರಿಪೋರ್ಟ್: ನಾಯಕರಾಗಿ ಆಡಿದ ಕಳೆದ 12 ಟಿ20 ಪಂದ್ಯಗಳಲ್ಲಿ ಅಯ್ಯರ್ ಕೇವಲ 1 ಗೆಲುವು ಕಂಡಿದ್ದು, ಬರೋಬ್ಬರಿ 10 ಪಂದ್ಯಗಳಲ್ಲಿ ಸೋತಿದ್ದಾರೆ (1 ಪಂದ್ಯ ರದ್ದಾಗಿದೆ).
ಐದು ಪಂದ್ಯಗಳ ಈ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ, ಬ್ರಿಸ್ಟಲ್‌ನಲ್ಲಿ ನಡೆಯಲಿರುವ ಮುಂದಿನ 4ನೇ ಟಿ20 ಪಂದ್ಯದಲ್ಲಿ ಭಾರತ ಕಡ್ಡಾಯವಾಗಿ ಗೆಲ್ಲಬೇಕಾದ ಒತ್ತಡದಲ್ಲಿದೆ. ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಭವಿಷ್ಯಕ್ಕೂ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

