ಸುನಿಲ್ ಗವಾಸ್ಕರ್ ಮೇಲೆ ರೋಹಿತ್ ಶರ್ಮಾ ಗರಂ; ಬಿಸಿಸಿಐಗೆ ಕಂಪ್ಲೆಂಟ್ ಕೊಟ್ರಾ ಹಿಟ್‌ಮ್ಯಾನ್?
ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದಾರಂತೆ. ಏನಿದು ವಿಷಯ?

ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 5 ಟೆಸ್ಟ್ ಪಂದ್ಯಗಳನ್ನಾಡಿತ್ತು. ಮೊದಲ ಪಂದ್ಯದಲ್ಲಿ ಗೆದ್ದ ಭಾರತ, ಮುಂದಿನ 3 ಪಂದ್ಯಗಳಲ್ಲಿ ಸೋತಿತ್ತು. ರೋಹಿತ್, ಕೊಹ್ಲಿ ಸೇರಿದಂತೆ ತಂಡದ ಕಳಪೆ ಪ್ರದರ್ಶನ ಸೋಲಿಗೆ ಕಾರಣ. ರೋಹಿತ್ ಹೆಚ್ಚು ರನ್ ಗಳಿಸಲಿಲ್ಲ. ನಾಯಕತ್ವದಲ್ಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಕಾರಣ ಕೊನೆಯ ಟೆಸ್ಟ್ನಿಂದ ಅವರನ್ನು ಕೈಬಿಡಲಾಗಿತ್ತು. ರೋಹಿತ್ ನಿವೃತ್ತಿ ಬಗ್ಗೆ ವದಂತಿಗಳಿದ್ದರೂ, ಅದನ್ನು ಅವರು ಅಲ್ಲಗಳೆದಿದ್ದಾರೆ.
ಆಸೀಸ್ ವಿರುದ್ಧ ಸೋಲಿನ ಬಳಿಕ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ರೋಹಿತ್ ಅವರನ್ನು ಟೀಕಿಸಿದ್ದರು. ಗವಾಸ್ಕರ್ ಕೂಡಾ ರೋಹಿತ್ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡಿದ್ದರು. "ರೋಹಿತ್ ಫಾರ್ಮ್ ಕಳೆದುಕೊಂಡಿದ್ದಾರೆ. ತಂಡದ ಹಿತಕ್ಕಾಗಿ ಬೇರೆಯವರು ನಾಯಕತ್ವ ವಹಿಸಬೇಕು. ಬುಮ್ರಾ ಉತ್ತಮ ನಾಯಕರಾಗಬಹುದಿತ್ತು" ಎಂದಿದ್ದರು.
ರೋಹಿತ್ ಮತ್ತು ಕೊಹ್ಲಿ ರಣಜಿಯಲ್ಲಿ ಆಡಬೇಕು, ಇಲ್ಲದಿದ್ದರೆ ಬಿಸಿಸಿಐ ಕ್ರಮ ಕೈಗೊಳ್ಳಬೇಕು ಎಂದು ಗವಾಸ್ಕರ್ ಹೇಳಿದ್ದರು. ಟೀಂ ಇಂಡಿಯಾ ಬಗ್ಗೆಯೂ ಅವರು ಟೀಕೆ ಮಾಡಿದ್ದರು. ಇದರಿಂದ ರೋಹಿತ್ ಗವಾಸ್ಕರ್ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಸುನಿಲ್ ಗವಾಸ್ಕರ್ ಟೀಕೆಗಳಿಂದ ತನಗೆ ಒತ್ತಡ ಉಂಟಾಗಿದೆ ಎಂದು ರೋಹಿತ್ ಶರ್ಮಾ ಬಿಸಿಸಿಐ ಅಧಿಕಾರಿಗಳಿಗೆ ತಿಳಿಸಿದ್ದಾರಂತೆ
ರೋಹಿತ್ ಶರ್ಮಾ
ಬಿಸಿಸಿಐ ಎಲ್ಲಾ ಆಟಗಾರರು ದೇಶಿ ಕ್ರಿಕೆಟ್ ಆಡಬೇಕೆಂದು ಸೂಚಿಸಿದ ಬಳಿಕ ರೋಹಿತ್ ರಣಜಿಯಲ್ಲಿ ಮುಂಬೈ ಪರ ಆಡಿದ್ದರು. ಆದರೆ, ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕೇವಲ 31 ರನ್ ಗಳಿಸಿದ್ದರು. ಎರಡೂ ಇನ್ನಿಂಗ್ಸ್ಗಳಲ್ಲಿ ಕೇವಲ 3 ಮತ್ತು 28 ರನ್ ಗಳಿಸಿದ್ದರು. ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಕೂಡಾ ರನ್ ಗಳಿಸಲು ವಿಫಲರಾಗಿದ್ದರು. ಜಮ್ಮು ವಿರುದ್ಧ ಮುಂಬೈ ಸೋತಿತ್ತು.