6 ಎಸೆತದಲ್ಲಿ 6 ಸಿಕ್ಸರ್, ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ರಿಯಾನ್
ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ. 6 ಎಸೆತದಲ್ಲಿ6 ಸಿಕ್ಸರ್ ಸಿಡಿಸುವ ಮೂಲಕ ರಿಯಾನ್ ಪರಾಗ್ ಹೊಸ ದಾಖಲೆ ಬರೆದಿದ್ದಾರೆ. ರಿಯಾನ್ ಬರೆದ ಹೊಸ ದಾಖಲೆ ಏನು?

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ 6 ಎಸೆತದಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಎರಡು ಓವರ್‌ಗಳಲ್ಲಿ ಪರಾಗ್ ಸತತ ಆರು ಸಿಕ್ಸರ್ ಸಿಡಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಬ್ಬ ಬ್ಯಾಟ್ಸ್‌ಮನ್ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿದ್ದು. ಮೊಯಿನ್ ಅಲಿಯ ಅಂತಿಮ 5 ಎಸೆತ ಹಾಗೂ ಮುಂದಿನ ಓವರ್‌ನಲ್ಲಿ ವರುಣ್ ಚಕ್ರವರ್ತಿ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
206 ರನ್ ಟಾರ್ಗೆಟ್ ಬೆನ್ನಟ್ಟುತ್ತಿದ್ದ ರಾಜಸ್ಥಾನ ರಾಯಲ್ಸ್ ಒಂದು ಹಂತದಲ್ಲಿ ಸಂಕಷ್ಟದಲ್ಲಿದೆ ಎಂದು ತೋರುತ್ತಿತ್ತು. 71 ರನ್‌ಗಳಿಗೆ ತಂಡದ ಐದು ಬ್ಯಾಟ್ಸ್‌ಮನ್‌ಗಳು ಔಟಾಗಿದ್ದರು. ನಂತರ 13ನೇ ಓವರ್‌ನಲ್ಲಿ ರಿಯಾನ್ ಪರಾಗ್ ಮೊಯಿನ್ ಅಲಿಗೆ ಸಿಮ್ರನ್ ಹೆಟ್ಮೆಯರ್ ಒಂದು ಸಿಂಗಲ್ ತೆಗೆದುಕೊಂಡರು. ನಂತರ ಮುಂದಿನ ಐದು ಎಸೆತಗಳಲ್ಲಿ ಐದು ಸಿಕ್ಸರ್ ಬಾರಿಸಿದರು. ನಂತರ 14ನೇ ಓವರ್‌ನಲ್ಲಿ ವರುಣ್ ಚಕ್ರವರ್ತಿಯ ಮೊದಲ ಎಸೆತದಲ್ಲೇ ಒಂದು ದೊಡ್ಡ ಸಿಕ್ಸರ್ ಬಾರಿಸಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸುವ ದಾಖಲೆ ನಿರ್ಮಿಸಿದರು.
ಐಪಿಎಲ್‌ನಲ್ಲಿ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಮತ್ತು ರಿಂಕು ಸಿಂಗ್ ಸತತ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಗೇಲ್ ಪಂಜಾಬ್ ಸ್ಪಿನ್ನರ್ ರಾಹುಲ್ ಶರ್ಮಾ ವಿರುದ್ಧ, ಪೊಲಾರ್ಡ್ ಸನ್‌ರೈಸರ್ಸ್ ಹೈದರಾಬಾದ್‌ನ ತಿಸಾರ ಪೆರೇರ ವಿರುದ್ಧ ಮತ್ತು ರಿಂಕು ಸಿಂಗ್ ಗುಜರಾತ್‌ನ ಯಶ್ ದಯಾಳ್ ವಿರುದ್ಧ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದೀಗ ರಿಯಾನ್ ಪರಾಗ್ ಈ ದಾಖಲೆ ಪುಡಿ ಮಾಡಿದ್ದಾರೆ.
KKR ವಿರುದ್ಧ ರಿಯಾನ್ ಪರಾಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 45 ಎಸೆತಗಳಲ್ಲಿ 95 ರನ್ ಗಳಿಸಿದರು, ಇದರಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿವೆ. ಆದಾಗ್ಯೂ, ಇನ್ನೊಂದು ಸಿಕ್ಸರ್ ಬಾರಿಸುವ ಯತ್ನದಲ್ಲಿ ಔಟಾದರು ಮತ್ತು ಶತಕದಿಂದ ವಂಚಿತರಾದರು. ಆದಾಗ್ಯೂ, ನಂತರ ಪಂದ್ಯವು ರೋಚಕವಾಯಿತು. ರಾಜಸ್ಥಾನ ರಾಯಲ್ಸ್ 1 ರನ್‌ನಿಂದ ಸೋಲನುಭವಿಸಿತು. ಈ ಸೀಸನ್‌ನಲ್ಲಿ ಇದು ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಆಗಿದೆ.
ಕೆಕೆಆರ್ 206 ರನ್ ಸಿಡಿಸಿದ್ದರೆ, ರಾಜಸ್ತಾನ ರಾಯಲ್ಸ್ 205 ರನ್ ಸಿಡಿಸಿತ್ತು. 1 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ಸೋಲು ಕಂಡಿದೆ. ಆದರೆ ರಿಯಾನ್ ಪರಾಗ್ ಸ್ಫೋಟಕ ಬ್ಯಾಟಿಂಗ್ ಈ ಪಂದ್ಯದ ಹೈಲೈಟ್ಸ್ ಆಗಿದೆ.