ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಮಾನಿಯೊಬ್ಬ ತಂಡ ಗುಡ್‌ಲಕ್‌ಗಾಗಿ 10 ರೂ ಕಾಣಿಕೆ ಹಾಕಿ ಅನ್ನೋ ಕ್ಯೂಆರ್ ಕೋಡ್ ಪ್ರಾಂಕ್ ಮಾಡಿದ್ದಾನೆ. ಇಷ್ಟೇ ನೋಡಿ ಅತ್ತ ಆರ್‌ಸಿಬಿ ರೋಚಕ ಗೆಲುವು ದಾಖಲಿಸಿದರೆ, ಇತ್ತ ಅಭಿಮಾನಿಯ ಖಾತೆಗೆ ಅಚ್ಚರಿ ಮೊತ್ತ ಕಾಣಿಕೆಯಾಗಿ ಜಮೆ ಆಗಿದೆ.
ಬೆಂಗಳೂರು(ಮೇ.04) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಅದ್ಭುತ ಪ್ರದರ್ಶನದ ಮೂಲಕ ಮುನ್ನುಗ್ಗುತ್ತಿದೆ. ಅದರಲ್ಲೂ ತವರಿನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ರೋಚಕ ಗೆಲುವು ದಾಖಲಿಸಿದೆ. ಈ ಗೆಲುವು ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಆದರೆ ಈ ಗೆಲುವಿನ ಹಿಂದೆ ಲಕ್ ಕೂಡ ಆರ್‌ಸಿಬಿ ಪರವಾಗಿತ್ತು. ವಿಶೇಷ ಅಂದರೆ ಆರ್‌ಸಿಬಿ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಹಲವು ಅಭಿಮಾನಿಗಳು 10 ರೂಪಾಯಿ ರೀತಿಯಲ್ಲಿ ಕಾಣಿಕೆ ಹಾಕಿದ್ದಾರೆ. ಆರ್‌ಸಿಬಿ ಅಭಿಮಾನಿ ತಮಾಷೆಗಾಗಿ ಮಾಡಿದ ಈ ಕಾಣಿಕೆ ಅಭಿಯಾನ ಒಂದೆಡೆ ಆರ್‌ಸಿಬಿ ತಂಡಕ್ಕೆ ಗೆಲುವಿನ ಲಕ್ ತಂದುಕೊಟ್ಟರೆ, ಈ ಅಭಿಮಾನಿ ಖಾತೆಗೆ ಅಚ್ಚರಿ ಮೊತ್ತವೂ ಜಮೆ ಆಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಕಾಣಿಕೆ ಕ್ಯೂಆರ್ ಕೋಡ್
ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮೊದಲು ಆರ್‌ಸಿಬಿ ಅಭಿಮಾನಿ ಸಾರ್ಥಕ್ ಸಚ್‌ದೇವ್ ಬೆಂಗಳೂರಿನಲ್ಲಿ ವಿಶೇಷ ಪ್ರಾಂಕ್ ಅಭಿಯಾನ ಆಂಭಿಸಿದ್ದರು. ತನ್ನ ಖಾತೆಯ ಕ್ಯೂಆರ್ ಕೋಡ್ ಪ್ರಿಂಟ್ ಮಾಡಿ ಇದರ ಜೊತೆಗೆ ಆರ್‌ಸಿಬಿಯ ಗುಡ್‌ಲಕ್‌ಗಾಗಿ 10 ರೂಪಾಯಿ ಕಾಣಿಕೆ ಹಾಕಿ ಅನ್ನೋ ಬರಹವನ್ನೂ ಉಲ್ಲೇಖಿಸಿದ್ದಾರೆ. ಈ ಪೋಸ್ಟರ್‌ನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಕಬ್ಬನ್ ಪಾರ್ಕ್ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅಂಟಿಸಲಾಗಿತ್ತು.
ಸಿಎಸ್‌ಕೆ ವಿರುದ್ಧ ಗೆಲುವು ಸಂಭ್ರಮಿಸಲಿಲ್ಲ, ಮುಖದಲ್ಲಿ ನಗು ಇರಲಿಲ್ಲ: ಕೊಹ್ಲಿಗೆ ಏನಾಯ್ತು?
ಆರ್‌ಸಿಬಿ ಅಭಿಮಾನಿ ಸಾರ್ಥಕ್ ಸಚ್‌ದೇವ್ ಪ್ರಾಂಕ್‌ಗಾಗಿ ಮಾಡಿದ ಅಭಿಯಾನ ಇದು. ಆರ್‌ಸಿಬಿ ಗುಡ್‌ಲಕ್‌ಗಾಗಿ 10 ರೂಪಾಯಿ ಕಾಣಿಕೆ ಹಾಕಿ ಅನ್ನೋ ಈ ಅಭಿಯಾನ ಆರಂಭಿಸಿದ್ದಾನೆ. ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮೊದಲು ಈ ಅಭಿಯಾನವನ್ನು ಸೋಶಿಯಲ್ ಮೀಡಿಯಾ ಹಾಗೂ ಪೋಸ್ಟರನ್ನು ವಿವಿದೆಡೆ ಅಂಟಿಸುವ ಮೂಲಕ ಅಭಿಯಾನ ಆರಂಭಗೊಂಡಿತ್ತು. ವಿಶೇಷ ಅಂದರೆ ಆರ್‌ಸಿಬಿ ಅಭಿಮಾನಿಗಳು ತಂಡದ ಗುಡ್‌ಲಕ್‌ಗಾಗಿ 10 ರೂಪಾಯಿ ಕಾಣಿಕೆ ಹಾಕಿದ್ದಾರೆ.
ಸಿಎಸ್‌ಕೆ ವಿರುದ್ಧ ಆರ್‌ಸಿಬಿಗೆ ರೋಚಕ ಗೆಲುವು, ಗುಡ್ ಲಕ್
ಸಿಎಸ್‌ಕೆ ವಿರುದ್ದ ಆರ್‌ಸಿಬಿ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಕಂಡಿತ್ತು. ಆರ್‌ಸಿಬಿ ತಂಡದ ಸಂಘಟಿತ ಹೋರಾಟ, ಅಭಿಮಾನಿಗಳ ಪ್ರಾರ್ಥನೆ ಫಲಿಸಿತ್ತು. ಆರ್‌ಸಿಬಿ ಗೆಲ್ಲಬೇಕು ಎಂದು ಹಲವು ಅಭಿಮಾನಿಗಳು 10 ರೂಪಾಯಿ ಕಾಣಿಕೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವಿಡಿಯೋ ಭಾರಿ ವೈರಲ್ ಆಗಿದೆ. ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ 10 ರೂಪಾಯಿ ಕಾಣಿಕೆ ನೀಡಿದ್ದಾರೆ.
ಅಭಿಮಾನಿಗಳ ಕಾಣಿಕೆಯಿಂದ ಸಂಗ್ರಹವಾದ ಮೊತ್ತವೆಷ್ಟು?
ಆರ್‌ಸಿಬಿ ಅಭಿಮಾನಿಗಳು ತಂಡ ಗೆಲ್ಲಬೇಕು ಎಂದು 10 ರೂಪಾಯಿ ಕಾಣಿಕೆ ಹಾಕಿದ್ದರು. ಆರ್‌ಸಿಬಿ ತಂಡದ ಪ್ರದರ್ಶನ ಜೊತೆಗೆ ತಂಡಕ್ಕೆ ಲಕ್ ಕೂಡ ಇರಲಿ ಎಂದು ಹಣ ಹಾಕಿದ್ದರು. ಹೀಗೆ ಸಾರ್ಥಕ್ ಸಚ್‌ದೇವ್ ಒಂದೇ ದಿನ 1,200 ರೂಪಾಯಿ ಸಂಗ್ರಹಿಸಿದ್ದಾರೆ. ಈಗಲೂ ಆರ್‌ಸಿಬಿ ಗುಡ್‌ಲಕ್‌ಗಾಗಿ ಹಣ ಜಮೆ ಮಾಡುತ್ತಲೇ ಇದ್ದಾರೆ. ದಿನದಿಂದ ದಿನಕ್ಕೆ ಕಾಣಿಕೆ ರೂಪದಲ್ಲಿ ಹಣ ಬರುತ್ತಲೇ ಇದೆ ಎಂದು ಸಾರ್ಥಕ್ ಹೇಳಿದ್ದಾರೆ.
ಆರ್‌ಸಿಬಿ ಫ್ಯಾನ್ಸ್ ಅಭಿಮಾನ
ಆರ್‌ಸಿಬಿ ಅಭಿಮಾನಿಗಳು ತಂಡದ ಗುಡ್‌ಲಕ್‌ಗಾಗಿ ಹಿಂದೂ ಮುಂದು ನೋಡದೆ 10 ರೂಪಾಯಿ ಕಾಣಿಕೆ ಹಾಕಿದ್ದಾರೆ. ಇದು ಆರ್‌ಸಿಬಿ ಅಭಿಮಾನಿಗಳ ಅಭಿಮಾನ ತೋರಿಸುತ್ತದೆ. ತಂಡವನ್ನು ಅಭಿಮಾನಿಗಳು ಎಷ್ಟು ಪ್ರೀತಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಹಣ ಹಾಕಿದವರೆಲ್ಲರೂ ಅಫರಿಚಿತರು, ಸೋಶಿಯಲ್ ಮೀಡಿಯಾ ಅಥವಾ ಅಂಟಿಸಿದ ಪೋಸ್ಟರ್ ನೋಡಿ ಹಣ ಹಾಕಿದ್ದಾರೆ.ಒಮ್ಮೆ ಆರ್‌ಸಿಬಿ ಅಭಿಮಾನಿಯಾದರೆ ಯಾವತ್ತೂ ಆರ್‌ಸಿಬಿ ಅಭಿಮಾನಿ. ತಂಡ ಗೆಲ್ಲಲಿ ಸೋಲಲಿ, ಆರ್‌ಸಿಬಿ ಅಭಿಮಾನಿಗಳ ಬೆಂಬಲ ಯಾವತ್ತೂ ಆರ್‌ಸಿಬಿ ತಂಡಕ್ಕೆ ಎಂದು ಹಲವು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

