MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2026: ಕೆಕೆಆರ್ ಸತತ ಸೋಲಿಗೆ ನಾಯಕ ಅಜಿಂಕ್ಯ ರಹಾನೆಯಲ್ಲ, ಈತನೇ ನೇರ ಕಾರಣ!

IPL 2026: ಕೆಕೆಆರ್ ಸತತ ಸೋಲಿಗೆ ನಾಯಕ ಅಜಿಂಕ್ಯ ರಹಾನೆಯಲ್ಲ, ಈತನೇ ನೇರ ಕಾರಣ!

ಬೆಂಗಳೂರು: ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಪಾಲಿಗೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವು ಮರಿಚಿಕೆಯಾಗಿದೆ. ಇದೀಗ ಅಜಿಂಕ್ಯ ರಹಾನೆ ಪಡೆ ಟೂರ್ನಿಯಲ್ಲಿ ಮತ್ತೊಂದು ಸೋಲು ಕಂಡಿದೆ. ಈ ರೀತಿ ಸೋಲಲು ಆ ಒಬ್ಬ ಆಟಗಾರ ನೇರ ಕಾರಣ. ಯಾರದು ನೋಡೋಣ ಬನ್ನಿ.

2 Min read
Author : Naveen Kodase
Published : Apr 18 2026, 02:30 PM IST
Share this Photo Gallery
  • FB
  • TW
  • Linkdin
  • Whatsapp
16
ಇನ್ನೂ ಗೆಲುವಿನ ಖಾತೆ ತೆರೆಯದ ಕೆಕೆಆರ್
Image Credit : X/KKRiders

ಇನ್ನೂ ಗೆಲುವಿನ ಖಾತೆ ತೆರೆಯದ ಕೆಕೆಆರ್

2026ರ ಐಪಿಎಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಸತತ ಸೋಲುಗಳನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದೆ. ಆಡಿದ ಆರು ಪಂದ್ಯಗಳ ಪೈಕಿ ಐದು ಪಂದ್ಯ ಸೋತಿದ್ದರೇ, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು.

26
ಉಳಿದ ಎಲ್ಲಾ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿ ಕೆಕೆಆರ್
Image Credit : Getty

ಉಳಿದ ಎಲ್ಲಾ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿ ಕೆಕೆಆರ್

ಹೀಗಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಖಾತೆಯಲ್ಲಿ ಕೇವಲ ಒಂದು ಅಂಕವಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಇನ್ನು ಕೆಕೆಆರ್ ತಂಡವು ಪ್ಲೇ ಆಫ್ ಪ್ರವೇಶಿಸಬೇಕಿದ್ದರೇ ತನ್ನ ಪಾಲಿನ ಎಂಟೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

Related Articles

Related image1
IPL 2026: ನಿನ್ನೆ ನಡೆದ ಗುಜರಾತ್ ಟೈಟಾನ್ಸ್-ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
Related image2
ಸತತ ನಾಲ್ಕನೇ ಸೋಲು ಕಂಡ ಬೆನ್ನಲ್ಲೇ ಬಿಸಿಸಿಐನಿಂದ ಶಿಕ್ಷೆಗೆ ಗುರಿಯಾದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ!
36
ಕೆಕೆಆರ್ ವೈಫಲ್ಯಕ್ಕೆ ರಹಾನೆ ಮಾತ್ರ ಕಾರಣವಲ್ಲ
Image Credit : X

ಕೆಕೆಆರ್ ವೈಫಲ್ಯಕ್ಕೆ ರಹಾನೆ ಮಾತ್ರ ಕಾರಣವಲ್ಲ

ಎರಡು ವರ್ಷಗಳ ಹಿಂದಷ್ಟೇ ಚಾಂಪಿಯನ್ ಆಗಿ ಬೀಗಿದ್ದ ಕೆಕೆಆರ್ ತಂಡವು ಕಳೆದೆರಡು ಸೀಸನ್‌ಗಳಲ್ಲಿ ದಯನೀಯ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಲ್ಲೇ ತನ್ನ ಅಭಿಯಾನ ಮುಗಿಸುತ್ತಿದೆ. ಇದಕ್ಕೆ ಕಾರಣ ಕೇವಲ ನಾಯಕ ಅಜಿಂಕ್ಯ ರಹಾನೆ ಮಾತ್ರವಲ್ಲ ಬದಲಾಗಿ ತಂಡದ ಅತ್ಯಂತ ನಂಬಿಗಸ್ಥ ಆಟಗಾರ ಎನಿಸಿಕೊಂಡಿದ್ದ ರಿಂಕು ಸಿಂಗ್ ಕಾರಣ. ಇದು ಅಚ್ಚರಿಯೆನಿಸಿದ್ರೂ ಸತ್ಯ.

46
ಮಹತ್ವದ ಘಟ್ಟದಲ್ಲಿ ಕೆಕೆಆರ್‌ಗೆ ಕೈಕೊಡುತ್ತಿರುವ ರಿಂಕು
Image Credit : ANI

ಮಹತ್ವದ ಘಟ್ಟದಲ್ಲಿ ಕೆಕೆಆರ್‌ಗೆ ಕೈಕೊಡುತ್ತಿರುವ ರಿಂಕು

ಈ ಸೀಸನ್‌ ಐಪಿಎಲ್‌ನ ಆರು ಪಂದ್ಯಗಳ ಐದು ಇನ್ನಿಂಗ್ಸ್‌ಗಳಿಂದ ರಿಂಕು ಸಿಂಗ್ ಕೇವಲ 79 ರನ್ ಬಾರಿಸಿದ್ದಾರೆ. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ರಿಂಕು ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಎಲ್ಲಿ ತಂಡ ವೇಗವಾಗಿ ರನ್ ಗಳಿಸಬೇಕಿತ್ತೋ ಅಲ್ಲೇ ರಿಂಕು ಪದೇ ಪದೇ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿರುವುದು ಕೆಕೆಆರ್ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

56
ಇದುವರೆಗೂ ಕೇವಲ 79 ರನ್ ಬಾರಿಸಿರುವ ರಿಂಕು
Image Credit : ANI

ಇದುವರೆಗೂ ಕೇವಲ 79 ರನ್ ಬಾರಿಸಿರುವ ರಿಂಕು

ಐಪಿಎಲ್ 2026ರಲ್ಲಿ ರಿಂಕು ಸಿಂಗ್ ಫಾರ್ಮ್ ಅತ್ಯಂತ ಕಳಪೆಯಾಗಿದೆ. ಕಳೆದ ಆರು ಪಂದ್ಯಗಳಲ್ಲಿ ಅವರು ಗಳಿಸಿದ ರನ್‌ಗಳು ಕ್ರಮವಾಗಿ 33*, 35, 4, 6, 1. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ ಆಡಿದ 6 ಪಂದ್ಯಗಳಲ್ಲಿ ಕೇವಲ 19.75 ಸರಾಸರಿಯಲ್ಲಿ 79 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಕೇವಲ 35 ರನ್ ಮಾತ್ರ ಎಂಬುದು ಗಮನಾರ್ಹ.

66
ಮತ್ತೆ ನಿರಾಸೆ ಮೂಡಿಸಿದ ರಿಂಕು ಸಿಂಗ್
Image Credit : ANI

ಮತ್ತೆ ನಿರಾಸೆ ಮೂಡಿಸಿದ ರಿಂಕು ಸಿಂಗ್

ಕೆಕೆಆರ್ ತಂಡದಲ್ಲಿ ಫಿನಿಶರ್ ಆಗಿ ದೊಡ್ಡ ನಿರೀಕ್ಷೆಗಳೊಂದಿಗೆ ಕಣಕ್ಕಿಳಿದ ರಿಂಕು ಸಿಂಗ್, ಈ ಪಂದ್ಯದಲ್ಲಿ ಮತ್ತೊಮ್ಮೆ ತೀವ್ರ ನಿರಾಸೆ ಮೂಡಿಸಿದರು. ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಅವರು, ಕೇವಲ 2 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. 14.5 ಓವರ್‌ಗಳಲ್ಲಿ ಕೆಕೆಆರ್ ಸ್ಕೋರ್ 147/5 ಆಗಿದ್ದಾಗ ರಿಂಕು ಸಿಂಗ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಕ್ರೀಸ್‌ನಲ್ಲಿದ್ದ ಕ್ಯಾಮರೂನ್ ಗ್ರೀನ್ ಜೊತೆ ಉತ್ತಮ ಜೊತೆಯಾಟ ನಿರೀಕ್ಷಿಸಲಾಗಿತ್ತು. ಆದರೆ ಕಗಿಸೊ ರಬಾಡ ಎಸೆತದಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ಔಟಾದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಕೋಲ್ಕತ್ತಾ ನೈಟ್ ರೈಡರ್ಸ್

Latest Videos
Recommended Stories
Recommended image1
IPL 2026: ಅಂಬಾನಿ ಮುಂಬೈ ಇಂಡಿಯನ್ಸ್‌ ಟೀಂಗೆ ಚಂಬು ಕೊಡಲು ಸಕಲ ಸಿದ್ಧತೆ ಮಾಡ್ಕೊಂಡಿರೋ ಹಾರ್ದಿಕ್‌ ಪಾಂಡ್ಯ
Recommended image2
ಕ್ಯಾಮರೂನ್‌ ಗ್ರೀನ್‌ ಭರ್ಜರಿ ಸಿಕ್ಸರ್‌, ಕೊಟ್ಟ ಮಾತಿನಂತೆ ನಡೆದುಕೊಂಡ ಟಾಟಾ ಮೋಟಾರ್ಸ್‌!
Recommended image3
ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೇಡು ತೀರಿಸಿಕೊಳ್ಳಲು ರೆಡಿಯಾದ ಆರ್‌ಸಿಬಿ!
Related Stories
Recommended image1
IPL 2026: ನಿನ್ನೆ ನಡೆದ ಗುಜರಾತ್ ಟೈಟಾನ್ಸ್-ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
Recommended image2
ಸತತ ನಾಲ್ಕನೇ ಸೋಲು ಕಂಡ ಬೆನ್ನಲ್ಲೇ ಬಿಸಿಸಿಐನಿಂದ ಶಿಕ್ಷೆಗೆ ಗುರಿಯಾದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved