ನಿಮ್ಮ ಹತ್ರ ಇಷ್ಟು ಕೋಟಿಯಿದ್ರೆ, ನೀವೂ ಆರ್‌ಸಿಬಿ ತಂಡ ಖರೀದಿಸಬಹುದು!
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಹಾಗಿದ್ರೆ ಆರ್‌ಸಿಬಿ ತಂಡ ಖರೀದಿಸಬೇಕಿದ್ರೆ ನಿಮ್ಮ ಬಳಿ ಎಷ್ಟು ಹಣವಿರಬೇಕು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
- FB
- TW
- Linkdin
Follow Us
)
ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಮೂಲಕ ಐಪಿಎಲ್ ಟ್ರೋಫಿ ಎದುರಿಸುತ್ತಾ ಬಂದಿದ್ದ ಆರ್‌ಸಿಬಿ ತಂಡಕ್ಕೆ ಕೊನೆಗೂ ಚಾಂಪಿಯನ್ ಪಟ್ಟ ಒಲಿದುಬಂದಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಅದ್ಧೂರಿ ಗೆಲುವಿನ ಸಂಭ್ರಮಾಚರಣೆಗೂ ವೇದಿಕೆ ಸಿದ್ದಗೊಂಡಿತ್ತು.
ಆದರೆ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲ ಮೇಲೆ ರಾಜ್ಯಸರ್ಕಾರವೂ ಆರ್‌ಸಿಬಿ ತಂಡವನ್ನು ಸನ್ಮಾನಿಸಿತು. ಇದೇ ವೇಳೆ ಮೈದಾನ ಪ್ರವೇಶಿಸಲು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಿಕ್ಕಿರಿದು ಅಭಿಮಾನಿಗಳು ಸೇರಿದ್ದರು. ಈ ವೇಳೆಯ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ್ದರು.
ಇದೆಲ್ಲದರ ನಡುವೆ ಆರ್‌ಸಿಬಿ ತಂಡದ ಮಾಲಿಕತ್ವ ಹೊಂದಿರುವ ಡಿಯಾಜಿಯೋ ಸಂಸ್ಥೆಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮಾರಾಟ ಮಾಡಲು ಮುಂದಾಗಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ.
ಅತಿಹೆಚ್ಚು ಫ್ಯಾನ್ ಬೇಸ್ ಹೊಂದಿರುವ, ಇದೀಗ ಐಪಿಎಲ್ ಬರ ನೀಗಿಸಿಕೊಂಡಿರುವ ಆರ್‌ಸಿಬಿ ಫ್ರಾಂಚೈಸಿ ತನ್ನ ತಂಡವನ್ನು ಮಾರಾಟ ಮಾಡಲು ಮುಂದಾಗಿದ್ದು ಏಕೆ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು.
ಇದಕ್ಕೆ ಮೊದಲ ಕಾರಣ, ಭಾರತದ ಆರೋಗ್ಯ ಸಚಿವಾಲಯವು ಐಪಿಎಲ್‌ನಲ್ಲಿ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸಲು ಒತ್ತಾಯಿಸುತ್ತಿರುವುದು. ಸದ್ಯ ಆರ್‌ಸಿಬಿ ಹೆಸರಿನಲ್ಲಿಯೇ ಮದ್ಯ(ರಾಯಲ್ ಚಾಲೆಂಜರ್ಸ್ ವಿಸ್ಕಿ)ದ ಹೆಸರಿದೆ.
ಇನ್ನು ಅಮೆರಿಕಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರೀಮಿಯಂ ಮದ್ಯದ ಮಾರಾಟ ಕಡಿಮೆಯಾಗಿರುವುದು ಡಿಯಾಜಿಯೋ ಕಂಪನಿಯನ್ನು ತನ್ನ ಪ್ರಮುಖ ವ್ಯವಹಾರದ ಮೇಲೆ ಕೇಂದ್ರೀಕರಿಸಲು ಪ್ರೇರೇಪಿಸಿದೆ ಎನ್ನಲಾಗುತ್ತಿದೆ.
ಇದೀಗ ಒಂದು ವೇಳೆ ಡಿಯಾಜಿಯೋ ಸಂಸ್ಥೆ ಆರ್‌ಸಿಬಿಯನ್ನು ಸಂಪೂರ್ಣವಾಗಿ ಮಾರಾಟ ಮಾಡುವುದಾದರೇ, ಎರಡು ಬಿಲಿಯನ್ ಡಾಲರ್‌ಗೆ(ಸುಮಾರು 17 ಸಾವಿರ ಕೋಟಿ ರುಪಾಯಿಗೆ) ಮಾರಾಟ ಮಾಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.